ನವದೆಹಲಿ: ಚಿನ್ನದ ಬೆಲೆಯಲ್ಲಿ ಏರಿಳಿತ ಸಾಮಾನ್ಯ ಪ್ರಕ್ರಿಯೆ. ಮುಂಬೈ, ದೆಹಲಿ, ಹೈದರಾಬಾದ್ ಮತ್ತು ಕೋಲ್ಕತ್ತಾ ಸೇರಿದಂತೆ ಬಹುತೇಕ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,900 ರೂಪಾಯಿ ಮತ್ತು 24 ಕ್ಯಾರೆಟ್ 51,160 ರೂ. ಇದೆ. ಚೆನ್ನೈನಲ್ಲಿ 22K ಕ್ಯಾರೆಟ್ ಚಿನ್ನ 47,200 ರೂ., 24K ಕ್ಯಾರೆಟ್ ಚಿನ್ನ 51,490 ರೂ.ಗೆ ಮಾರಾಟವಾಗುತ್ತಿದೆ.
ರಾಜ್ಯದಲ್ಲಿ ಬೆಲೆ ಹೇಗಿದೆ?
ನಗರ | ಚಿನ್ನ22K (ಗ್ರಾಂ) | ಚಿನ್ನ24K (ಗ್ರಾಂ) | ಬೆಳ್ಳಿ |
ಶಿವಮೊಗ್ಗ | 4690 ರೂ. | 5101 ರೂ. | 55.80 |
ಮಂಗಳೂರು | 4695 | 5121 | 61.10 |
ಹುಬ್ಬಳ್ಳಿ | 4628 | 5049 | 61.20 |
ಮೈಸೂರು | 4740 | 5249 | 56.10 |
ನಿನ್ನೆಗೆ ಹೋಲಿಸಿದರೆ ಹುಬ್ಬಳ್ಳಿಯಲ್ಲಿ 22K ಚಿನ್ನದ ದರದಲ್ಲಿ 45 ರೂ., 24K ಚಿನ್ನದ ದರದಲ್ಲಿ 50 ರೂ. ಏರಿಕೆಯಾಗಿದೆ. ಮೈಸೂರಿನಲ್ಲಿ 22K ಚಿನ್ನದ ದರದಲ್ಲಿ 5 ರೂ., 24K ಚಿನ್ನದ ದರದಲ್ಲಿ 10ರೂ. ಇಳಿಕೆ ಕಂಡಿದೆ. ಬೆಳ್ಳಿ ದರ ಯಥಾಸ್ಥಿತಿಯಲ್ಲಿದೆ. ಶಿವಮೊಗ್ಗದಲ್ಲಿ 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 4,690 ರೂ. ಆಗಿದ್ದು, 24 ಕ್ಯಾರೆಟ್ 1 ಗ್ರಾಂ ಚಿನ್ನ 5,101 ರೂ.ಗೆ ಲಭ್ಯವಾಗುತ್ತಿದೆ.