ETV Bharat / bharat

ಗ್ರಾಹಕರಿಗೆ ಸಿಹಿಸುದ್ದಿ: ಚಿನ್ನ - ಬೆಳ್ಳಿ ದರದಲ್ಲಿ ಕೊಂಚ ಇಳಿಕೆ

author img

By

Published : Oct 1, 2021, 12:47 PM IST

ಇಂದು ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 43,050 ರೂ. ಇದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,960 ರೂ. ಇದೆ. ಒಂದು ಕೆಜಿ ಬೆಳ್ಳಿ ಬೆಲೆಗೆ 58,300 ರೂ. ನಿಗದಿಯಾಗಿದೆ.

ಚಿನ್ನ-ಬೆಳ್ಳಿ ದರದಲ್ಲಿ ಕೊಂಚ ಇಳಿಕೆ
ಚಿನ್ನ-ಬೆಳ್ಳಿ ದರದಲ್ಲಿ ಕೊಂಚ ಇಳಿಕೆ

ಹೈದರಾಬಾದ್: ಕಳೆದೆರಡು ದಿನಗಳಿಂದ ಗಗನಕ್ಕೇರಿದ್ದ ಚಿನ್ನ-ಬೆಳ್ಳಿ ದರ ಇಂದು ಕೊಂಚ ಕಡಿಮೆಯಾಗಿದೆ. ದೇಶಾದ್ಯಂತ ಬಂಗಾರದ ಬೆಲೆ ಶೇ.0.05 ರಷ್ಟು ಹಾಗೂ ಬೆಳ್ಳಿಯ ಬೆಲೆ ಶೇ.0.18ರಷ್ಟು ಕುಸಿತ ಕಂಡಿದೆ.

ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 43,050 ರೂ. ಇದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,960 ರೂ. ಇದೆ. ಒಂದು ಕೆಜಿ ಬೆಳ್ಳಿ ಬೆಲೆಗೆ 58,300 ರೂ. ನಿಗದಿಯಾಗಿದೆ.

ಇದನ್ನೂ ಓದಿ: Mysore Dussehra 2021: ಅರಮನೆ ದರ್ಬಾರ್ ಹಾಲ್​ನಲ್ಲಿ ಚಿನ್ನದ ಸಿಂಹಾಸನ ಜೋಡಣೆ

ಇನ್ನು ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 43,360 ರೂ. ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 47,300 ರೂ ನಿಗದಿಯಾಗಿದೆ. ಕೆಜಿ ಬೆಳ್ಳಿಗೆ 63,000 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,490 ರೂ.ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 45,490 ರೂಪಾಯಿಯಿದೆ. ಬೆಳ್ಳಿ ಬೆಲೆಯಲ್ಲಿಯೂ ಇಳಿಕೆಯಾಗಿದ್ದು, ಕೆಜಿ ಬೆಳ್ಳಿಗೆ 58,300 ರೂ. ಇದೆ

ಈ ತಿಂಗಳಿನಿಂದ ನವರಾತ್ರಿ, ದೀಪಾವಳಿ ಹೀಗೆ ಸಾಲು ಸಾಲು ಹಬ್ಬಗಳು ಬರುತ್ತಿದ್ದು, ಆಭರಣಗಳ ದರ ಕಡಿಮೆಯಾದರೆ ಗ್ರಾಹಕರು ಖರೀದಿ ಮಾಡಲು ಹೆಚ್ಚು ಆಸಕ್ತಿ ತೋರಲಿದ್ದಾರೆ. ಆದರೆ, ಒಂದು ದಿನ ಕಡಿಮೆ ಇರುವ ಚಿನ್ನ - ಬೆಳ್ಳಿ ದರ ಮತ್ತೊಂದು ದಿನ ಹೆಚ್ಚಾಗುತ್ತದೆ. ಹೀಗೆ ಮಾರುಕಟ್ಟೆಯಲ್ಲಿ ಇಳಿಕೆ - ಏರಿಕೆಯ ದೈನಂದಿನ ಬದಲಾವಣೆ ಆಗುತ್ತಲೇ ಇರುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.