ಭಾರತೀಯ ಚಿನಿವಾರ ಮಾರುಕಟ್ಟೆಯು ಗುರುವಾರದ ಚಿನ್ನ ಮತ್ತು ಬೆಳ್ಳಿಯ ಬೆಲೆಗಳನ್ನು ಬಿಡುಗಡೆ ಮಾಡಿದೆ. ಇಂದಿನ ದರಗಳನ್ನು ಗಮನಿಸಿದರೆ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ವ್ಯತ್ಯಾಸಗಳು ಕಂಡು ಬಂದಿದೆ. ಇಂದು ದೇಶದಲ್ಲಿ 24k ಶುದ್ಧತೆಯ ಹತ್ತು ಗ್ರಾಂ ಚಿನ್ನ 51,930 ರೂ.ಗೆ ಮಾರಾಟವಾಗುತ್ತಿದ್ದು, ಒಂದು ಕೆಜಿ ಬೆಳ್ಳಿಯ ದರ 58,700 ರೂ.ಗೆ ಮಾರಾಟವಾಗುತ್ತಿದೆ.
ದೇಶದಲ್ಲಿ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಏರಳಿತ ಕಂಡು ಬರುತ್ತದೆ. ಹೀಗಾಗಿ ಮುಂಬೈ, ದೆಹಲಿ, ಹೈದರಾಬಾದ್ ಮತ್ತು ಕೋಲ್ಕತ್ತಾದಲ್ಲಿ ಸೇರಿದಂತೆ ಬಹುತೇಕ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,600 ರೂಪಾಯಿ ಮತ್ತು 24 ಕ್ಯಾರೆಟ್ 51,930 ಇದೆ. ಚೆನ್ನೈನಲ್ಲಿ 22k ಕ್ಯಾರೆಟ್ ಚಿನ್ನ 48,930 ರೂ. ಹಾಗೂ 24k ಕ್ಯಾರೆಟ್ ಚಿನ್ನ 53,380 ರೂ.ಗೆ ಮಾರಾಟವಾಗುತ್ತಿದೆ.
ದೇಶದಲ್ಲಿ ಪ್ರಮುಖ ನಗರಗಳಲ್ಲಿ ಬೆಳ್ಳಿಯ ಬೆಲೆ ಏರಳಿತವಾಗಿರುತ್ತದೆ. ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ ಬೆಲೆ ಎಷ್ಟಿದೆ ಎಂಬುದು ನೋಡೋಣ... ದೆಹಲಿ, ಮುಂಬೈ ಮತ್ತು ಕೋಲ್ಕತ್ತಾ ಸೇರಿದಂತೆ ಹೆಚ್ಚಿನ ಪ್ರಮುಖ ನಗರಗಳಲ್ಲಿ ಕೆಜಿ ಬೆಳ್ಳಿ 58,700 ರೂಪಾಯಿಗೆ ಮಾರಾಟವಾಗುತ್ತಿದೆ. ಆದರೆ ಚೆನ್ನೈ, ಕೇರಳ ಮತ್ತು ಹೈದರಾಬಾದ್ ಸೇರಿದಂತೆ ಬಹುತೇಕ ನಗರಗಳಲ್ಲಿ ಒಂದು ಕೆಜಿ ಬೆಳ್ಳಿ 64,200 ರೂಪಾಯಿಗೆ ಮಾರಾಟವಾಗುತ್ತಿದೆ.
ರಾಜ್ಯದಲ್ಲಿ ಚಿನ್ನ ಬೆಳ್ಳಿ ದರ ಹೇಗಿದೆ?
ನಗರ | ಚಿನ್ನ22K (1 ಗ್ರಾಂ) | ಚಿನ್ನ24K (1 ಗ್ರಾಂ) | ಬೆಳ್ಳಿ (1 ಗ್ರಾಂ) |
ಬೆಂಗಳೂರು | 4,898 (10 ರೂ ಏರಿಕೆ) | 5,258 (11 ರೂ ಏರಿಕೆ) | 59 (0.2 ರೂ ಇಳಿಕೆ) |
ಹುಬ್ಬಳ್ಳಿ | 4,880 (40 ರೂ. ಏರಿಕೆ) | 5,124 (42ರೂ. ಏರಿಕೆ) | 64.50( 1.5 ಏರಿಕೆ) |
ಮೈಸೂರು | 4,880 | 5,408 | 60.20 |
ಶಿವಮೊಗ್ಗ | 4,810 | 5,250 | 59.80 |
ಮಂಗಳೂರು | 4,801 (1 ರೂ ಹೆಚ್ಚಳ) | 5,236 (1 ರೂ ಹೆಚ್ಚಳ) | 64.50 |
ದಾವಣಗೆರೆ | 4,790 (40 ರೂ. ಏರಿಕೆ) | 5,183 (40 ರೂ. ಏರಿಕೆ) | 64.58 (1.5 ಏರಿಕೆ) |