ಹೈದರಾಬಾದ್: ವಿಶ್ವ ಗಾಳಿ ದಿನವು (Global Wind Day 2023) ಇಂದಿನ ಜಗತ್ತಿನಲ್ಲಿ ಗಾಳಿ ಶಕ್ತಿಯ ಮಹತ್ವದ ಬಗ್ಗೆ ಅರಿವು ಮೂಡಿಸುತ್ತದೆ. ಜೂನ್ 15 ರಂದು ವಿಶ್ವದಾದ್ಯಂತ ವಿಶ್ವ ಗಾಳಿ ದಿನವನ್ನಾಗಿ ಆಚರಿಸುವ ಸಂಪ್ರದಾಯ ಮುನ್ನಲೆಗೆ ಬಂತು. ಜನರಿಗೆ ಗಾಳಿ ಶಕ್ತಿ ಮತ್ತು ಅದರ ವಿವಿಧ ಉಪಯೋಗಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ವಿಶ್ವ ಪವನ (ಗಾಳಿ) ದಿನ ಪ್ರಮುಖ ಪಾತ್ರ ವಹಿಸುತ್ತದೆ.
ಸಾಂಪ್ರದಾಯಿಕವಲ್ಲದ ಶಕ್ತಿಯ ಮೂಲವಾಗಿ ಪವನ ಶಕ್ತಿಯ ಬಳಕೆಯ ಬಗ್ಗೆ ತಮ್ಮ ಗಮನ ಸೆಳೆಯಲು ಮತ್ತು ಪ್ರತಿಯೊಬ್ಬರನ್ನು ಉತ್ತೇಜಿಸಲು ವಿಶ್ವ ಗಾಳಿ ದಿನವನ್ನು ಆಚರಿಸಲಾಗುತ್ತದೆ. ಮಾನವನ ಬುದ್ದಿಹೀನ ಚಟುವಟಿಕೆಗಳಿಂದಾಗಿ ಪರಿಸರವು ಕ್ರಮೇಣವಾಗಿ ನಾಶವಾಗುತ್ತಿದೆ ಮತ್ತು ಇದು ನೈಸರ್ಗಿಕ ಸಂಪನ್ಮೂಲಗಳ ಕಡೆಗೆ ತಿರುಗಲು ಏಕೀಕೃತ ಮಾರ್ಗ ಎಂದು ಕರೆಯಲಾಗುತ್ತದೆ.
ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹವಾಮಾನವು ವೇಗವಾಗಿ ಬದಲಾಗುತ್ತಿದೆ. ಇದು ಮಾನವ ನಾಗರಿಕತೆಯ ಕಾರಣ ಎಂದು ನಂಬಲಾಗಿದೆ. ಪವನ ಶಕ್ತಿಯ ಬಳಕೆಯನ್ನು ಉತ್ತೇಜಿಸಲು ಪ್ರತಿ ವರ್ಷ ಜೂನ್ 15 ರಂದು ವಿಶ್ವ ಗಾಳಿ ದಿನವನ್ನು ಆಚರಿಸಲಾಗುತ್ತದೆ.
ಇಂದಿನ ಕಾಲದಲ್ಲಿ, ನೀರು, ಗಾಳಿ, ಸೌರ ಮತ್ತು ಇತರ ನೈಸರ್ಗಿಕ ಅಸಾಂಪ್ರದಾಯಿಕ ಶಕ್ತಿಯ ಪ್ರಾಮುಖ್ಯತೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಿಜ್ಞಾನವು ನೈಸರ್ಗಿಕ ಸಂಪನ್ಮೂಲಗಳ ಸದುಪಯೋಗದತ್ತ ಸಾಗುತ್ತಿದೆ. ಗಾಳಿಯ ಶಕ್ತಿ ಮತ್ತು ಅದನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಕುರಿತು ಜಾಗೃತಿ ಮೂಡಿಸಲು ವಿಶ್ವ ಗಾಳಿ ದಿನವನ್ನು ಆಚರಿಸಲಾಗುತ್ತದೆ. ಇದು ಮಾತ್ರವಲ್ಲದೇ, ವಿಶ್ವ ಗಾಳಿ ದಿನವು ಈ ಅಸಾಂಪ್ರದಾಯಿಕ ಶಕ್ತಿಯನ್ನು ಹೆಚ್ಚು ಹೆಚ್ಚು ಬಳಸುವ ಗುರಿ ಹೊಂದಿದೆ.
ಇತಿಹಾಸ ಮತ್ತು ಮಹತ್ವ: ಸಂಪನ್ಮೂಲದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಗಾಳಿ ದಿನ ಪ್ರಾರಂಭವಾಯಿತು. 'ವಿಂಡ್ ಡೇ' ಅನ್ನು ಮೊದಲ ಬಾರಿಗೆ ಜೂನ್ 15, 2007 ರಂದು ಆಚರಿಸಲಾಯಿತು. ಎರಡು ವರ್ಷಗಳ ನಂತರ, ಅಂದರೆ 2009 ರಲ್ಲಿ Global Wind Day ಹೆಸರನ್ನು ನೀಡಲಾಯಿತು. 2009 ರಲ್ಲಿ, ವಿಂಡ್ ಯುರೋಪ್ ಮತ್ತು ಗ್ಲೋಬಲ್ ವಿಂಡ್ ಎನರ್ಜಿ ಕೌನ್ಸಿಲ್ ಸಹಭಾಗಿತ್ವದಲ್ಲಿ ಮತ್ತು ವಿಶ್ವ ವಿಂಡ್ ಡೇ ಅಥವಾ ಗ್ಲೋಬಲ್ ವಿಂಡ್ ಡೇ ಎಂದು ಮರು ನಾಮಕರಣ ಮಾಡಲಾಯಿತು. ಗಾಳಿಯ ಶಕ್ತಿ ಬಗ್ಗೆ ವಿಶ್ವಾದ್ಯಂತ ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.
ಪವನ ಶಕ್ತಿ ಎಂದರೇನು?: ಗಾಳಿಯು ಕ್ರಿಯಾತ್ಮಕ ಮತ್ತು ಶಕ್ತಿಯ ರೂಪವಾಗಿದೆ. ಇದು ನಮ್ಮ ವಾತಾವರಣದಲ್ಲಿನ ಗಾಳಿಯ ಒತ್ತಡದಲ್ಲಿನ ವ್ಯತ್ಯಾಸದಿಂದ ಉಂಟಾಗುತ್ತದೆ. ಹೆಚ್ಚಿನ ಒತ್ತಡದಲ್ಲಿರುವ ಗಾಳಿಯು ಕಡಿಮೆ ಒತ್ತಡದ ಪ್ರದೇಶದ ಕಡೆಗೆ ಚಲಿಸುತ್ತದೆ. ಗಾಳಿ ಶಕ್ತಿಯು ಅಸ್ತಿತ್ವದಲ್ಲಿರುವ ಇಂಧನ ವ್ಯವಸ್ಥೆಗಳನ್ನು ಹೇಗೆ ಬದಲಾಯಿಸಬಹುದು ಎಂಬುದನ್ನು ಇದು ಒತ್ತಿ ಹೇಳುತ್ತದೆ. ಇಂದು ಗಾಳಿ ಶಕ್ತಿಯು ಪ್ರಬುದ್ಧ ಮತ್ತು ಮುಖ್ಯವಾಹಿನಿಯ ತಂತ್ರಜ್ಞಾನವಾಗಿದೆ. ಜೊತೆಗೆ ಜಾಗತಿಕ ತಾಪಮಾನ ಏರಿಕೆಯ ಸಮಸ್ಯೆಯೊಂದಿಗೆ, ಗಾಳಿಯಂತಹ ಇಂಧನ ಮೂಲಗಳನ್ನು ಅತ್ಯುತ್ತಮವಾಗಿ ಬಳಸುವುದು ಹೆಚ್ಚು ಮುಖ್ಯವಾಗಿದೆ.
ಓದಿ: Elder Abuse Awareness Day: ‘ವೃದ್ಧರ ಮೇಲೆ ಹೆಚ್ಚುತ್ತಿದೆ ಕೌರ್ಯ’.. ಈ ದಿನದ ಇತಿಹಾಸ, ಉದ್ದೇಶ ತಿಳಿಯಿರಿ