ETV Bharat / bharat

ಫುಟ್‌ಬಾಲ್ ಆಡಲು ಮನೆಯನ್ನೇ ತೊರೆದ ಬಾಲಕಿ: ತಂದೆಗೆ ಬರೆದ ಪತ್ರದಲ್ಲೇನಿದೆ? - 12 ವರ್ಷದ ಬಾಲಕಿ

ಅಲಿಗಢದಲ್ಲಿ 12 ವರ್ಷದ ಬಾಲಕಿಯೊಬ್ಬಳು ಫುಟ್‌ಬಾಲ್ ಆಡಲು ಮನೆಯನ್ನೇ ತೊರೆದಿದ್ದಾಳೆ. 25 ವರ್ಷಗಳಲ್ಲಿ ತನ್ನ ಕನಸನ್ನು ನನಸು ಮಾಡಿಕೊಂಡು ನಿವಾಸಕ್ಕೆ ಮರಳುತ್ತೇನೆ ಎಂದು ಬಾಲಕಿ ಪತ್ರದಲ್ಲಿ ಬರೆದಿದ್ದಾಳೆ.

Etv Bharat
Etv Bharat
author img

By ETV Bharat Karnataka Team

Published : Dec 27, 2023, 1:17 PM IST

ಅಲಿಗಢ (ಉತ್ತರ ಪ್ರದೇಶ): ಚಿಕ್ಕ ವಯಸ್ಸಿನಲ್ಲಿ ಮಕ್ಕಳು ತಮ್ಮ ಕನಸುಗಳನ್ನು ನನಸಾಗಿಸಲು ದೊಡ್ಡ ಹೆಜ್ಜೆಗಳನ್ನು ಇಡುವ ಘಟನೆಗಳು ಆಗ್ಗಾಗ್ಗೆ ಬೆಳಕಿಗೆ ಬರುತ್ತಿರುತ್ತವೆ. ಅಲಿಗಢದಲ್ಲಿ ಇಂತಹದ್ದೇ ಘಟನೆಯೊಂದು ಬೆಳಕಿಗೆ ಬಂದಿದೆ. ತಂದೆಯೊಬ್ಬ ತನ್ನ ಮಗಳಿಗೆ ಫುಟ್‌ಬಾಲ್ ಆಡುವುದು ಬೇಡ ಎಂದು ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಮಗಳು, ತನ್ನ ಕನಸು ನನಸಾಗಿಸಲು ಬಟ್ಟೆ ಮತ್ತು ಫುಟ್‌ಬಾಲ್, ಬೂಟುಗಳನ್ನು ಚೀಲದಲ್ಲಿ ಇಟ್ಟುಕೊಂಡು ಮನೆ ಬಿಟ್ಟು ಹೊರಟುಹೋಗಿದ್ದಾಳೆ.

ಇದರಿಂದ ಆತಂಕಗೊಂಡ ತಂದೆ ಬಾಲಕಿಗಾಗಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಇದಾದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಲಕಿ ತನ್ನ ತಂದೆಗೆ ಪತ್ರ ಬರೆದಿದ್ದು, ಅದರಲ್ಲಿ ನನ್ನ ಕನಸು ನನಸಾಗಲು ನೀವು ಬಿಡುವುದಿಲ್ಲ. ಹಾಗಾಗಿ ನಾನು ಮನೆಯಿಂದ ಹೊರಡುತ್ತಿದ್ದೇನೆ ಎಂದು ಬರೆದಿದ್ದಾರೆ. ನನ್ನನು ಕ್ಷಮಿಸಿ, 25ನೇ ವಯಸ್ಸಿನಲ್ಲಿ, ನಾನು ನನ್ನ ಕನಸನ್ನು ನನಸು ಮಾಡಿದ ನಂತರವೇ ಮನೆಗೆ ಹಿಂತಿರುಗುತ್ತೇನೆ ಎಂದು ಬಾಲಕಿ ತನ್ನ ಪತ್ರದಲ್ಲಿ ತಿಳಿಸಿದ್ದಾಳೆ.

ಕ್ರಿಸ್‌ಮಸ್ ದಿನವೇ ಮನೆ ಬಿಟ್ಟು ಹೋದ ಬಾಲಕಿ: ಕ್ವಾರ್ಸಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿ ವಾಸವಾಗಿರುವ ಪ್ರಾಧ್ಯಾಪಕ, ವೈದ್ಯರೊಬ್ಬರ ಮಗಳು ಆರನೇ ತರಗತಿಯಲ್ಲಿ ಓದುತ್ತಿದ್ದಾಳೆ. ಆಕೆಗೆ ಫುಟ್​ಬಾಲ್ ಎಂದರೆ ತುಂಬಾ ಇಷ್ಟ. ತಂದೆ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಪೊಲೀಸರ ಪ್ರಕಾರ, ಬಾಲಕಿಗೆ ಅವರ ಕುಟುಂಬ ಸದಸ್ಯರೊಬ್ಬರು, ಆಕೆಗೆ ಫುಟ್​ಬಾಲ್​ ಆಡದಂತೆ ತಡೆದು ಓದಲು ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಮಗಳು ಕ್ರಿಸ್‌ಮಸ್ ದಿನವೇ (ಡಿಸೆಂಬರ್ 25ರಂದು) ಮನೆ ಬಿಟ್ಟು ಹೋಗಿದ್ದಳು. ಬಾಲಕಿ ತನ್ನ ತಂದೆಗೆ ಈ ಸಂಬಂಧ ಪತ್ರವೊಂದನ್ನು ಸಹ ಬರೆದಿಟ್ಟು ಹೋಗಿದ್ದಾಳೆ.

ಬಾಲಕಿ ತಂದೆಗೆ ಬರೆದ ಪತ್ರದಲ್ಲೇನಿದೆ?: 'ನಾನು ಮನೆಯಿಂದ ಹೊರಡುತ್ತಿದ್ದೇನೆ ಅಬ್ಬು (ತಂದೆ) ಎಂದು ಪತ್ರದಲ್ಲಿ ಬರೆದಿದ್ದಾಳೆ. ನೀವು ಯಾವುದೇ ರೀತಿ ಚಿಂತಿಸಬೇಡಿ. ನಾನು ಸಾಧನೆ ಮಾಡಿ ಹಿಂತಿರುಗುತ್ತೇನೆ. ಅಬ್ಬು (ತಂದೆ) ನನ್ನ ಕನಸನ್ನು ನನಸು ಮಾಡಲು ನೀನು ಬಿಡುವುದಿಲ್ಲ. ಹಾಗಾಗಿ ನನ್ನ ಕನಸನ್ನು ನನಸು ಮಾಡಿಕೊಳ್ಳಲಿದ್ದೇನೆ. ನನ್ನನ್ನು ಕ್ಷಮಿಸಿ. 25 ವರ್ಷಗಳ ನಂತರ ನಾನು ದೊಡ್ಡ ಹೆಸರು ಮಾಡಿದ ನಂತರವೇ ಮನೆಗೆ ಮರಳುತ್ತೇನೆ ಎಂದು ಬಾಲಕಿ ಭಾವುಕಳಾಗಿ ತಂದೆಗೆ ಪತ್ರ ಬರೆದಿದ್ದಾಳೆ.

ಪೊಲೀಸ್ ಮಾಹಿತಿ: ''ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕಿ ಕೋಪದಿಂದ ಮನೆ ಬಿಟ್ಟು ಹೋಗಿದ್ದಾಳೆ. ಸಿಸಿಟಿವಿ ಕ್ಯಾಮೆರಾಗಳು ಮತ್ತು ಕಣ್ಗಾವಲು ಸಹಾಯದಿಂದ ಬಾಲಕಿಯನ್ನು ಹುಡುಕಲಾಗುತ್ತಿದೆ. ಹುಡುಗಿಯ ಬಳಿ ಯಾವುದೇ ಮೊಬೈಲ್ ಫೋನ್ ಇಲ್ಲ'' ಎಂದು ಕ್ವಾರ್ಸಿ ಪೊಲೀಸ್ ಠಾಣೆಯ ಉಸ್ತುವಾರಿ ಸುಭಾಷ್ ಬಾಬು ಕಥೇರಿಯಾ ತಿಳಿಸಿದ್ದಾರೆ.

ಇದನ್ನೂ ಓದಿ: 'ಮದುವೆಯನ್ನೇ ನುಂಗಿದ ಮಟನ್​ ಊಟ': ತೆಲಂಗಾಣದಲ್ಲಿ ಮಾಂಸದೂಟ ನೀಡದ್ದಕ್ಕೆ ವಿವಾಹವೇ ರದ್ದು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.