ETV Bharat / bharat

Video: ಚಾಲಕನ ಅಸಭ್ಯ ವರ್ತನೆಯಿಂದ ಚಲಿಸುತ್ತಿದ್ದ ಆಟೋದಿಂದ ಜಿಗಿದ ಯುವತಿ - AUTO DRIVER

ಚಾಲಕನೋರ್ವ ಅಸಭ್ಯವಾಗಿ ವರ್ತಿಸಿದ್ದಕ್ಕಾಗಿ ಯುವತಿಯೋರ್ವಳು ಚಲಿಸುತ್ತಿದ್ದ ಆಟೋದಿಂದ ಜಿಗಿದಿದ್ದಾಳೆ. ಘಟನೆಯಿಂದ ಆಕೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಆಟೋದಿಂದ ಜಿಗಿದ ಯುವತಿ
ಆಟೋದಿಂದ ಜಿಗಿದ ಯುವತಿ
author img

By

Published : Aug 28, 2021, 9:48 PM IST

ಔರಂಗಾಬಾದ್(ಮಹಾರಾಷ್ಟ್ರ): ಚಾಲಕನೋರ್ವ ಅಸಭ್ಯವಾಗಿ ವರ್ತಿಸಿದ್ದಕ್ಕಾಗಿ ಚಲಿಸುತ್ತಿದ್ದ ಆಟೋದಿಂದ ಯುವತಿ ಜಿಗಿದಿರುವ ಘಟನೆ ಮೊಂಡನಾಕಾ ಬಳಿ ನಡೆದಿದೆ. ಯುವತಿಗೆ ಗಂಭೀರ ಗಾಯಗಳಾಗಿದ್ದು, ರಿಕ್ಷಾ ಚಾಲಕ ತಲೆ ಮರೆಸಿಕೊಂಡಿದ್ದಾನೆ. ಇದರ ವಿಡಿಯೋ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಚಲಿಸುತ್ತಿದ್ದ ಆಟೋದಿಂದ ಜಿಗಿದ ಯುವತಿಯ ವಿಡಿಯೋ CCTVಯಲ್ಲಿ ಸೆರೆ

ಇಂದು ಬೆಳಗ್ಗೆ ಯುವತಿ ಕಾಲೇಜಿಗೆ ಹೋಗಲು ಆಟೋ ಹತ್ತಿದ್ದು, ಚಾಲಕ ಅಸಭ್ಯವಾಗಿ ಮಾತನಾಡಿದ್ದಾನೆ. ಯುವತಿ ಆಟೋವನ್ನು ನಿಲ್ಲಿಸುವಂತೆ ಕೇಳಿದರೂ, ಆತ ವೇಗವಾಗಿ ಚಲಿಸುತ್ತಿದ್ದನು. ದಿಕ್ಕುತೋಚದ ಯುವತಿ ರಿಕ್ಷಾದಿಂದ ಜಿಗಿದಿದ್ದಾಳೆ.

ಸಹಾಯಕ್ಕೆ ಬಂದ ಯುವಕ

ಆ್ಯಂಬುಲೆನ್ಸ್ ಹೆಲ್ಪ್ ರೈಡರ್ಸ್​ ಗ್ರೂಪ್​ನ ಸದಸ್ಯ ನಿಲೇಶ್ ಸೆವೆಕರ್, ಆಲ್ ಇಂಡಿಯಾ ರೇಡಿಯೋಗೆ ಹೋಗುವಾಗ ಈ ದೃಶ್ಯವನ್ನು ಗಮನಿಸಿದರು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅವರು, ಆಕೆಯನ್ನು ಸಮಾಧಾನ ಪಡಿಸಿ, ಆಸ್ಪತ್ರೆಗೆ ಸೇರಿಸಿದರು. ಸದ್ಯ ಗಾಯಾಳು ಕೈಲಾಸನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ರಿಕ್ಷಾ ಚಾಲಕ ಎಸ್ಕೇಪ್

ಯುವತಿ ರಿಕ್ಷಾದಿಂದ ಜಿಗಿದಿದ್ದು, ಸ್ಥಳೀಯರು ಆಕೆಯ ಬಳಿಗೆ ಓಡಿ ಬಂದರು. ಜನಸಂದಣಿ ಹೆಚ್ಚಾದ್ದರಿಂದ ಚಾಲಕ ಎಸ್ಕೇಪ್ ಆಗಿದ್ದಾನೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.