ಹೈದರಾಬಾದ್ (ತೆಲಂಗಾಣ): ನಗರದ ಸಿಟಿ ಮಾಲ್ ಸೆಂಟರ್‌ನಲ್ಲಿರುವ ಪ್ಲೇ ಝೋನ್‌ನಲ್ಲಿ ಮೂರು ವರ್ಷದ ಬಾಲಕಿ ತನ್ನ ಕೈಯನ್ನು ಯಂತ್ರದಲ್ಲಿಟ್ಟಿದ್ದು, ಆಕೆಯ ನಾಲ್ಕು ಬೆರಳುಗಳು ತುಂಡಾಗಿವೆ. ಸ್ಮ್ಯಾಶ್ ಝೋನ್ ಆಯೋಜಕರ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ ಎಂದು ಮಗುವಿನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂಜಾರಹಿಲ್ಸ್ ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಬಂಜಾರಹಿಲ್ಸ್‌ನ ಇಬ್ರಾಹಿಂ ನಗರದಲ್ಲಿ ವಾಸಿಸುವ ಖಾಸಗಿ ಉದ್ಯೋಗಿ ಸೈಯದ್ ಮಕ್ಸೂದ್ ಅಲಿ ತಮ್ಮ ಪತ್ನಿ ಮೆಹ್ತಾಬ್ ಜಹಾನ್‌ರೊಂದಿಗೆ ಶನಿವಾರ ತಮ್ಮ ಮೂವರು ಮಕ್ಕಳು ಮತ್ತು ಸೊಸೆಯನ್ನು ಬಂಜಾರಹಿಲ್ಸ್ ರಸ್ತೆ ಸಂಖ್ಯೆ 1 ರಲ್ಲಿನ ಸ್ಮ್ಯಾಶ್ ಬೌಲಿಂಗ್ ಗೇಮಿಂಗ್ ಪ್ಲೇ ಝೋನ್‌ಗೆ ಆಟವಾಡಲು ಕರೆದುಕೊಂಡು ಹೋಗಿದ್ದರು. ಮಾಲ್‌ನ ನಾಲ್ಕನೇ ಮಹಡಿಯಲ್ಲಿ ಸ್ಮ್ಯಾಶ್ ಬೌಲಿಂಗ್ ಗೇಮಿಂಗ್ ಪ್ಲೇ ಝೋನ್ ಇದೆ. ಮಕ್ಸೂದ್ ಮತ್ತು ಜಹಾನ್ ಅವರ ಮೂರು ವರ್ಷದ ಮಗಳು ರೋಬೋಟಿಕ್ ಸ್ಪೇಸ್ ಷಟಲ್ ಪ್ಲೇಯಿಂಗ್ ಮೆಷಿನ್ ಬಳಿ ಹೋಗಿದ್ದಾಳೆ. ಯಂತ್ರದ ಹಿಂಬದಿಯಲ್ಲಿ ಮುಚ್ಚಳ ತೆರೆದಿದ್ದು ಅದನ್ನು ಆಟದ ಪ್ರದೇಶವೆಂದೇ ಭಾವಿಸಿ ಬಲಗೈಯನ್ನು ಒಳಗೆ ಹಾಕಿದ್ದಳು. ಚಾಲನೆಯಲ್ಲಿರುವ ಯಂತ್ರಕ್ಕೆ ಕೈ ಹಾಕಿದ್ದು, 3 ಬೆರಳು ಮತ್ತು ತೋರುಬೆರಳು ಭಾಗಶಃ ನಜ್ಜುಗುಜ್ಜಾಗಿದೆ. ಮಗು ಕಿರುಚಿದ್ದನ್ನು ಗಮನಿಸಿದ ಪೋಷಕರು ಕೂಡಲೇ ಯಂತ್ರದಿಂದ ಮಗುವನ್ನು ದೂರ ಎಳೆದುಕೊಂಡು ಹೋಗಿದ್ದಾರೆ. ಮಗುವನ್ನು ಚಿಕಿತ್ಸೆಗಾಗಿ ಯಶೋದಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಆಕೆಯ ಬಲಗೈಯ ನಾಲ್ಕು ಬೆರಳುಗಳನ್ನು ಕತ್ತರಿಸಿದ್ದಾರೆ. ಬೆರಳುಗಳು ಸಂಪೂರ್ಣ ಮುರಿದು ಹೋಗಿವೆ. ಮರು ಜೋಡಿಸಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಪೋಷಕರಿಂದ ಪೊಲೀಸರಿಗೆ ದೂರು: ಘಟನೆಯ ವೇಳೆ ಮಾಲ್ ಆಡಳಿತ ಮಂಡಳಿ ಹಾಗೂ ಸ್ಮಾಶ್ ಝೋನ್ ಸಿಬ್ಬಂದಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದರು. ಅಪಘಾತ ಸಂಭವಿಸಿದರೂ ಸ್ಮ್ಯಾಶ್ ಝೋನ್ ನಲ್ಲಿ ಆಟವಾಡುತ್ತಿದ್ದ ಮಕ್ಕಳ ಆರೈಕೆಗೆ ಸಿಬ್ಬಂದಿ ಲಭ್ಯರಿರಲಿಲ್ಲ. ಇದು ಸಂಪೂರ್ಣ ಭದ್ರತಾ ವೈಫಲ್ಯ. ಯಂತ್ರದ ಬಗ್ಗೆ ಮುನ್ನೆಚ್ಚರಿಕೆ ವಹಿಸಿಲ್ಲ. ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ. ಸಿಸಿಟಿವಿ ದೃಶ್ಯಾವಳಿಗಾಗಿ ಸಂಘಟಕರನ್ನು ಸಂಪರ್ಕಿಸಿದಾಗ, ಘಟನಾ ಪ್ರದೇಶದ ಸಿಸಿಟಿವಿ ಕವರೇಜ್ ತೆಗೆದು ಹಾಕಿದ್ದಾರೆ. ತಮ್ಮ ಬಳಿ ಯಾವುದೇ ದೃಶ್ಯಾವಳಿ ಇಲ್ಲ ಎಂದು ಹೇಳಿದ್ದಾರೆ. ನನ್ನ ಮಗಳಿಗೆ ಉಂಟಾದ ಹಾನಿಗಾಗಿ ಸಿಟಿ ಸೆಂಟರ್ ಮಾಲ್ ಆಡಳಿತದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಂದೆ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಕೇಂದ್ರದ ನಿರ್ವಾಹಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಎಸ್‌ಎಸ್‌ಐ ಕರುಣಾಕರ ರೆಡ್ಡಿ ತಿಳಿಸಿದ್ದಾರೆ. ಬಂಜಾರ ಹಿಲ್ಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಸೆಕ್ಯುರಿಟಿ ಗಾರ್ಡ್ ಮೇಲೆ ಇಸ್ಕಾನ್‌ನ ಸನ್ಯಾಸಿಯಿಂದ ಲೈಂಗಿಕ ಕಿರುಕುಳ ಆರೋಪ..