ಅಮೃತಸರ, ಪಂಜಾಬ್: ರಾಖಿ ಹಬ್ಬದ ದಿನದಂದು ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟುವುದು ವಾಡಿಕೆ. ಸಹೋದರಿಯರು ರಾಖಿ ಕಟ್ಟುವ ಮೂಲಕ ಸಹೋದರರು ತಂದೆ ಸ್ಥಾನದಲ್ಲಿ ನಿಂತು ಸದಾ ನಮ್ಮನ್ನು ರಕ್ಷಿಸುವಂತೆ ದೇವರ ಬಳಿ ಪ್ರಾರ್ಥಿಸುತ್ತಾರೆ ಎಂಬ ಪ್ರತೀತಿ ಇದೆ.
ಹೀಗಾಗಿ ಹೆಣ್ಮಕ್ಕಳು ತಮ್ಮ ಕುಟುಂಬ ಸದಸ್ಯರ ಜೊತೆ ದೇವಸ್ಥಾನಕ್ಕೆ ತೆರಳುವುದು ಸಹಜ. ಆದರೆ, ಈ ದಿನ ದರ್ಬಾರ್ ಸಾಹಿಬ್ ಮಂದಿರದ ಹೊರಗಡೆ ಐದು ವರ್ಷದ ಮಗುವಿನ ಶವ ಪತ್ತೆಯಾಗಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.
ಹೌದು, ಐದು ವರ್ಷದ ಹೆಣ್ಮಗುವಿನ ಶವ ದರ್ಬಾರ್ ಸಾಹೀಬ್ ದೇವಸ್ಥಾನದ ಹೊರಗಡೆ ಪತ್ತೆಯಾಗಿದೆ. ಮುದ್ದಾದ ಮಗುವಿನ ಶವ ಕಂಡು ಅಲ್ಲಿ ನೆರೆದಿರುವ ಭಕ್ತರು ಮನಸ್ಸಿನಲ್ಲಿ ಭಯದ ವಾತಾವರಣ ಆವರಿಸಿತು. ಸುದ್ದಿ ತಿಳಿದಾಕ್ಷಣ ಕಾರಿಡಾರ್ ಪೋಸ್ಟ್‌ನ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿ ಶವವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಮುಂದಿನ ತನಿಖೆ ಪ್ರಾರಂಭಿಸಿದರು.
ದೇವಸ್ಥಾನದ ಆವರಣದ ಹೊರಗಡೆ ಐದು ವರ್ಷದ ಬಾಲಕಿಯ ಶವ ಪತ್ತೆಯಾಗಿದೆ. ಬಾಲಕಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಶ್ರೀ ದರ್ಬಾರ್ ಸಾಹಿಬ್‌ನಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಸಹ ಪರಿಶೀಲಿಸಲಾಗುತ್ತಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಓದಿ: 75ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಮಗುವಿನ ಜನನ: 'ಭಾರತ' ಎಂದು ನಾಮಕರಣ