ಮೊಹಾಲಿ: ಇಲ್ಲಿನ 8ನೇ ಫೇಸ್ ಪ್ರದೇಶದ ದಸರಾ ಮೈದಾನದಲ್ಲಿ ಹಾಕಲಾಗಿದ್ದ ಬೃಹತ್ ಫನ್ಫೇರ್ ಜೋಕಾಲಿಯೊಂದು ಹರಿದು ಬಿದ್ದು 6 ಜನರಿಗೆ ಗಾಯವಾದ ಘಟನೆ ಜರುಗಿದೆ. ಸಾಕಷ್ಟು ಜನರನ್ನು ಹೊತ್ತು 30 ಅಡಿ ಮೇಲೆ ತಿರುಗುತ್ತಿದ್ದ ಜೋಕಾಲಿಯು ಏಕಾಏಕಿ ಕುಸಿದು ನೆಲಕ್ಕೆ ಬಿದ್ದು ಭಾನುವಾರ ರಾತ್ರಿ ಈ ಅನಾಹುತ ಸಂಭವಿಸಿದೆ. ತಾಂತ್ರಿಕ ವೈಫಲ್ಯತೆಯಿಂದ ದುರ್ಘಟನೆ ಉಂಟಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
-
#Mohali, Punjab: मोहाली में बच्चो का झूला गिरा। झूले में बच्चे थे । झूला काफी ऊंचाई से गिरा। इस घटना की पूरी जानकारी अभी नहीं आयी है। ईश्वर सब को सलामत रखे। pic.twitter.com/rsV4hKXZVq
— Aman Dwivedi (@amandwivedi48) September 4, 2022 " class="align-text-top noRightClick twitterSection" data="
">#Mohali, Punjab: मोहाली में बच्चो का झूला गिरा। झूले में बच्चे थे । झूला काफी ऊंचाई से गिरा। इस घटना की पूरी जानकारी अभी नहीं आयी है। ईश्वर सब को सलामत रखे। pic.twitter.com/rsV4hKXZVq
— Aman Dwivedi (@amandwivedi48) September 4, 2022#Mohali, Punjab: मोहाली में बच्चो का झूला गिरा। झूले में बच्चे थे । झूला काफी ऊंचाई से गिरा। इस घटना की पूरी जानकारी अभी नहीं आयी है। ईश्वर सब को सलामत रखे। pic.twitter.com/rsV4hKXZVq
— Aman Dwivedi (@amandwivedi48) September 4, 2022
ಗಾಯಾಳುಗಳನ್ನು ಮೊಹಾಲಿಯ 6ನೇ ಫೇಸ್ನಲ್ಲಿರುವ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾನುವಾರ ರಜೆ ಆಗಿದ್ದರಿಂದ ಸಹಜವಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಜನ ಮೋಜಿಗಾಗಿ ಕಾಲಕಳೆಯಲು ಸ್ಥಳಕ್ಕೆ ಆಗಮಿಸಿದ್ದರು. ಬೃಹತ್ ಮೋಜಿನ ಜೋಕಾಲಿ ನಿಯಂತ್ರಣ ಕಳೆದುಕೊಂಡು 30 ಅಡಿ ಮೇಲಿನಿಂದ ನೆಲಕ್ಕೆ ಅಪ್ಪಳಿಸಿದ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ದುರ್ಘಟನೆಯ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಕಾಯಲಾಗುತ್ತಿದೆ.
ಓದಿ: ಸೈರಸ್ ಮಿಸ್ತ್ರಿ ರಸ್ತೆ ಅಪಘಾತ ಕೇಸ್: ಕಾರು ಚಲಾಯಿಸುತ್ತಿದ್ದ ವೈದ್ಯೆ, ಆಕ್ಸಿಡೆಂಟ್ಗೆ ಕಾರಣವೇನು ಗೊತ್ತಾ?