ವಿಜಯವಾಡ, ಆಂಧ್ರಪ್ರದೇಶ: ಡಾ. ಬಿ.ಆರ್. ಅಂಬೇಡ್ಕರ್ ಕೋಣಸೀಮ ಜಿಲ್ಲೆಯ ಶಿವಕೋಡು ಎಂಬಲ್ಲಿ ಬೋರ್‌ವೆಲ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಅಧಿಕಾರಿಗಳು ಮತ್ತು ಅಗ್ನಿಶಾಮಕ ಸಿಬ್ಬಂದಿ ಅದನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಆದರೆ, ಈ ಬೆಂಕಿ ಕಾಣಿಸಿಕೊಳ್ಳಲು ಗ್ಯಾಸ್ ಪೈಪ್‌ಲೈನ್ ಸೋರಿಕೆ ಕಾರಣವಲ್ಲ. ಅಲ್ಲಿ ನಿಜವಾದ ಪೈಪ್‌ಲೈನ್ ಇಲ್ಲವೇ ಇಲ್ಲ ಎಂದು ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್(ಒಎನ್‌ಜಿಸಿ) ಮಾಹಿತಿ ನೀಡಿದೆ. ಭೂಮಿಯ ಪದರಗಳಲ್ಲಿ ಅನಿಲ ಮತ್ತು ನೀರಿನಿಂದ ಈ ಬೆಂಕಿ ಕಾಣಿಸಿಕೊಂಡಿರಬಹುದು. ಗುಂಡಿಯನ್ನು ಆಳವಾಗಿ ಅಗೆದಿದ್ದರಿಂದ ಈ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಅಂದಾಜು ಮಾಡಿರುವ ಸಿಬ್ಬಂದಿ, ಸದ್ಯ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
-
Andhra Pradesh | Fire erupts from an underground gas pipeline in Sivakodu, Dr. BR Ambedkar Konaseema district; no casualties reported in the incident till now. pic.twitter.com/xfRhl99Xx4
— ANI (@ANI) July 15, 2023 " class="align-text-top noRightClick twitterSection" data="
">Andhra Pradesh | Fire erupts from an underground gas pipeline in Sivakodu, Dr. BR Ambedkar Konaseema district; no casualties reported in the incident till now. pic.twitter.com/xfRhl99Xx4
— ANI (@ANI) July 15, 2023Andhra Pradesh | Fire erupts from an underground gas pipeline in Sivakodu, Dr. BR Ambedkar Konaseema district; no casualties reported in the incident till now. pic.twitter.com/xfRhl99Xx4
— ANI (@ANI) July 15, 2023
ಆದರೆ, ಭೂಮಿಯ ಆಳದಲ್ಲಿ ಹಾದು ಹೋಗಿರುವ ಗ್ಯಾಸ್ ಪೈಪ್‌ಲೈನ್ ಸೋರಿಕೆಯಿಂದ ಈ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ಶನಿವಾರ ಬೆಳಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಈ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್(ಒಎನ್‌ಜಿಸಿ) ಹಾಗೂ ಅಗ್ನಿಶಾಮಕ ಸಿಬ್ಬಂದಿ ಆ ಬೆಂಕಿ ನಂದಿಯನ್ನು ನಂದಿಸಿದ್ದಾರೆ. ಆದರೆ, ಇದು ಗ್ಯಾಸ್ ಪೈಪ್‌ಲೈನ್ ಸೋರಿಕೆಯಿಂದ ಆದ ಪ್ರಮಾದವಲ್ಲ. ಕಾರಣ ಇಲ್ಲಿ ಯಾವುದೇ ಗ್ಯಾಸ್ ಪೈಪ್‌ಲೈನ್ ಹೋಗಿಲ್ಲ. ಬೋರ್‌ವೆಲ್‌ನಿಂದಲೇ ಹೊರಬರುತ್ತಿರುವ ಗ್ಯಾಸ್ ಆಗಿದೆ ಎಂದು ತಿಳಿಸಿದ್ದಾರೆ.
ರೈತರೊಬ್ಬರು ಶುಕ್ರವಾರ ತಮ್ಮ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿದ್ದು ಅದೇ ಜಾಗದಲ್ಲಿ ಒಎನ್‌ಜಿಸಿ ಪೈಪ್‌ಲೈನ್ ಹಾದು ಹೋಗಿದೆ. ಕೊಳವೆ ಬಾವಿ ಕೊರೆಸುವಾಗ ಗ್ಯಾಸ್ ಪೈಪ್ ಲೈನ್ ಸೋರಿಕೆಯಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದರು. ಈ ಅಚ್ಚರಿಯನ್ನು ಸಂಬಂಧಿಸಿದ ಸಿಬ್ಬಂದಿಗೆ ತಲುಪಿಸಿದ್ದರು. ಆದರೆ, ಇದನ್ನು ಅಲ್ಲಗಳೆದಿರುವ ಸಿಬ್ಬಂದಿ, ಹಲವು ಗಂಟೆಗಳ ಪ್ರಯತ್ನದ ಬಳಿಕ ಭೂಮಿಯಿಂದ 20 ಅಡಿ ಎತ್ತರಕ್ಕೆ ಚಿಮ್ಮಿ ಬರುತ್ತಿದ್ದ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಇದರಿಂದ ಸ್ಥಳೀಯರು ಕೂಡ ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ: Lightning Strikes: ಸಿಡಿಲಿಗೆ 24 ಮಂದಿ ಬಲಿ, ಹಲವರಿಗೆ ಗಾಯ.. ಬಿಹಾರಕ್ಕೆ ಇಂದು ಕೂಡ ಭಾರಿ ಗುಡುಗು ಸಿಡಿಲಿನ ಮಳೆಯ ಎಚ್ಚರಿಕೆ
ಇತ್ತೀಚೆಗೆ ಕರ್ನಾಟಕದ ಹುಬ್ಬಳ್ಳಿಯ ಕುಸುಗಲ್ ರಸ್ತೆ ಮಧುರಾ ಕಾಲೋನಿ ಹಿಂಬದಿಯಲ್ಲಿ ಸಿಎನ್ಜಿ ಗ್ಯಾಸ್ ಪೈಪ್ ಲೈನ್ನಲ್ಲಿ ಸೋರಿಕೆ ಉಂಟಾಗಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿತ್ತು. ವಿಟ್ಟು ಬಾಯಿ ಕಲ್ಯಾಣ ಮಂಟಪ ಪಕ್ಕದ ಫುಟ್ ಪಾತ್ ಹತ್ತಿರ ನೆಲದಡಿ ಇರುವ ಗ್ಯಾಸ್ ಪೈಪ್ ಲೈನ್ನಲ್ಲಿ ಇದ್ದಕ್ಕಿದ್ದಂತೆ ಸೋರಿಕೆ ಉಂಟಾಗಿತ್ತು. ಸೋರುತ್ತಿದ್ದ ಗ್ಯಾಸ್‌ಗೆ ಅಚಾನಕ್ ಆಗಿ ಬೆಂಕಿ ಹೊತ್ತಿಕೊಂಡಿತ್ತು.
ಇದನ್ನು ಗಮನಿಸಿದ ಅಕ್ಕ - ಪಕ್ಕದವರು ಪೊಲೀಸ್ ಮತ್ತು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದರು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಸಿಬ್ಬಂದಿ ಮುಂದಾಗುವ ದೊಡ್ಡ ಅನಾಹುತವೊಂದನ್ನು ತಪ್ಪಿಸಿದ್ದರು. ಒಂದು ಪಕ್ಕದಲ್ಲಿಯೇ ಕಲ್ಯಾಣ ಮಂಟಪ, ಮತ್ತೊಂದು ಪಕ್ಕದಲ್ಲಿ ಅಪಾರ್ಟ್ಮೆಂಟ್ ಇದ್ದು ಅಗ್ನಿಶಾಮಕ ದಳದವರು ಸಕಾಲಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದರು. ಇವರ ಸಕಾಲ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಬೆಂಗಳೂರು: ಹಸೆಮಣೆ ಏರಬೇಕಿದ್ದ ಜೋಡಿ... ಗ್ಯಾಸ್ ಗೀಸರ್ ಸೋರಿಕೆಯಾಗಿ ಬಾತ್ ರೂಂನಲ್ಲೇ ಸಾವು!