ETV Bharat / bharat

ನೀರಿನ ಪೈಪ್​ ದುರಸ್ತಿ ವೇಳೆ ಒಡೆದ ಗ್ಯಾಸ್​ ಪೈಪ್​.. ರಸ್ತೆಯಲ್ಲೇ ಅನಿಲ ಸೋರಿಕೆ, ಭಯಗೊಂಡ ಜನ! - ನೀರಿನ ಪೈಪ್​ ಲೈನ್​ ದುರಸ್ತಿ ವೇಳೆ ಗ್ಯಾಸ್​ ಸೋರಿಕೆ

ನೀರಿನ ಪೈಪ್​ ದುರಸ್ತಿ ವೇಳೆ ಗ್ಯಾಸ್​ ಪೈಪ್ ಒಡೆದು ಹೋಗಿದ್ದು, ರಸ್ತೆಯಲ್ಲೇ ಅನಿಲ ಸೋರಿಕೆಯಾಗಿದೆ. ಇದರಿಂದ ಕೆಲ ಕಾಲ ಜನರು ಭಯಗೊಂಡ ಪ್ರಸಂಗ ಎದುರಾಯಿತು.

Gas leakage in Hyderabad, Gas leakage while repairing drinking water pipelines, Hyderabad news, ಹೈದರಾಬಾದ್​ನಲ್ಲಿ ಗ್ಯಾಸ್​ ಸೋರಿಕೆ, ನೀರಿನ ಪೈಪ್​ ಲೈನ್​ ದುರಸ್ತಿ ವೇಳೆ ಗ್ಯಾಸ್​ ಸೋರಿಕೆ, ಹೈದರಾಬಾದ್​ ಸುದ್ದಿ,
ರಸ್ತೆಯಲ್ಲೇ ಅನಿಲ ಸೋರಿಕೆ
author img

By

Published : Jan 8, 2022, 10:04 AM IST

ಹೈದರಾಬಾದ್: ಇಲ್ಲಿನ ನಿಜಾಂಪೇಟ್ ಹೆದ್ದಾರಿಯ ಗಾಯತ್ರಿ ಟವರ್ ಬಳಿ ಕುಡಿಯುವ ನೀರಿನ ಪೈಪ್ ಲೈನ್ ದುರಸ್ತಿ ವೇಳೆ ಗ್ಯಾಸ್ ಪೈಪ್​ ಸೋರಿಕೆಯಾಗಿದ್ದು, ಜನರು ಭಯಭೀತರಾಗಿದ್ದಾರೆ.

ಜೆಸಿಬಿ ಸಹಾಯದಿಂದ ನೀರಿನ ಪೈಪ್ ಲೈನ್ ದುರಸ್ತಿ ಮಾಡುತ್ತಿದ್ದಾಗ ಗ್ಯಾಸ್ ಪೈಪ್ ಏಕಾಏಕಿ ಒಡೆದು ಹೋಗಿತ್ತು. ಈ ಘಟನೆಯಿಂದ ನಿವಾಸಿಗಳು ಭಯಭೀತರಾಗಿದ್ದಾರೆ.

ಗ್ಯಾಸ್​ ಲಿಕೇಜ್​ನಿಂದ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ಸಂಬಂಧಪಟ್ಟ ಅಧಿಕಾರಿಗಳ ನೆರವಿನೊಂದಿಗೆ ಗ್ಯಾಸ್ ಸೋರಿಕೆ ತಡೆಯಲು ಕ್ರಮ ಕೈಗೊಂಡರು. ಬಳಿಕ ಗ್ಯಾಸ್​ ಸೋರಿಕೆ ನಿಲ್ಲಿಸಲಾಯಿತು.

ಈ ಘಟನೆಯ ಬಗ್ಗೆ ನಿವಾಸಿಗಳು ಕೆಲವು ಆರೋಪಗಳನ್ನು ಮಾಡಿದ್ದಾರೆ. 'ಹಿಂದೆಯೂ ಇದೇ ಘಟನೆ ನಡೆದಿರುವುದು ನಮಗೆ ಇನ್ನೂ ನೆನಪಿದೆ. ಅನುಮತಿ ತೆಗೆದುಕೊಂಡು ರಿಪೇರಿ ನಡೆಸುವಂತೆ ಗಾಯತ್ರಿ ಟವರ್ ನಿರ್ಮಾಣದವರಿಗೆ ನಾವು ಸಲಹೆ ನೀಡಿದ್ದೇವೆ. ಆದರೂ ಸಹ ಅವರು ತಮ್ಮ ಕಾರ್ಯವನ್ನು ಮುಂದುವರಿಸಿದರು. ಅಂತಿಮವಾಗಿ ಯಾವುದು ನಡೆಯಬಾರದಾಗಿತ್ತೊ ಅದೇ ಮತ್ತೆ ನಡೆಯಿತು ಎಂದು ಸ್ಥಳೀಯರೊಬ್ಬರ ಮಾತಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.