ETV Bharat / bharat

ಬಿಆರ್​ಎಸ್​ ಪಾರ್ಟಿ ಕಾರ್ಯಕ್ರಮದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ: 2 ಸಾವು, 8 ಮಂದಿಗೆ ಗಾಯ - kannada top news

ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ಬಿಆರ್​ಎಸ್​ ಪಾರ್ಟಿಯ 'ಆತ್ಮೀಯ ಸಮ್ಮೇಳನ' ಕಾರ್ಯಕ್ರಮದಲ್ಲಿ ಅಗ್ನಿ ಅವಘಡ ಸಂಭವಿಸಿದೆ.

gas-cylinder-blast-in-brs-atmiya-sammelan-2-killed-dot-8-injured
ಬಿಆರ್​ಎಸ್​ ಪಾರ್ಟಿಯ ಕಾರ್ಯಕ್ರಮದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ: 2 ಸಾವು. 8 ಮಂದಿಗೆ ಗಾಯ
author img

By

Published : Apr 12, 2023, 6:39 PM IST

ಖಮ್ಮಂ (ತೆಲಂಗಾಣ): ಬಿಆರ್​ಎಸ್​ ಪಾರ್ಟಿ ಆಯೋಜಿಸಿದ್ದ ಆತ್ಮೀಯ ಸಮ್ಮೇಳನ ಕಾರ್ಯಕ್ರಮದಲ್ಲಿ ಗ್ಯಾಸ್​​ ಸಿಲಿಂಡರ್​​ ಸ್ಫೋಟಗೊಂಡು 2 ಜನ ಸಾವು, 8 ಜನ ಗಾಯಗೊಂಡಿರುವ ಘಟನೆ ತೆಲಂಗಾಣದ ಖಮ್ಮಂ ಜಿಲ್ಲೆಯ ಚಿಮ್ಮಲಪಾಡು ಗ್ರಾಮದಲ್ಲಿ ನಡೆದಿದೆ. ಕಾರ್ಯಕ್ರಮಕ್ಕೆ ಮುಖಂಡರ ಆಗಮನದ ವೇಳೆ ಸಿಡಿಸಿದ ಪಟಾಕಿಯಿಂದ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡು ಗ್ಯಾಸ್​​ ಸಿಲಿಂಡರ್​ ಸ್ಫೋಟಗೊಂಡಿದೆ.

  • Chief Minister Sri K. Chandrashekar Rao expressed deep shock and grief over the tragic incident that happened in Cheemalapadu Village of Karepalli Mandal in Khammam District.

    — Telangana CMO (@TelanganaCMO) April 12, 2023 " class="align-text-top noRightClick twitterSection" data=" ">

ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಖಮ್ಮಂ ಜಿಲ್ಲೆಯ ಕಾರೇಪಲ್ಲಿಯ ಚಿಮ್ಮಲಪಾಡು ಗ್ರಾಮದಲ್ಲಿ ಭಾರತೀಯ ರಾಷ್ಟ್ರೀಯ ಪಾರ್ಟಿ (ಬಿಆರ್​ಎಸ್​) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಆತ್ಮೀಯ ಸಮ್ಮೇಳನ ಕಾರ್ಯಕ್ರಮದಲ್ಲಿ ಸಂಸದ ನಾಮ ನಾಗೇಶ್ವರ್​ ರಾವ್​ ಮತ್ತು ಶಾಸಕ ರಾಮುಲು ನಾಯ್ಕ್ ಭಾಗವಹಿಸಿದ್ದರು, ಮುಖಂಡರು ಕಾರ್ಯಕ್ರಮಕ್ಕೆ ಆಗಮಿಸುವ ವೇಳೆ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿದ್ದಾರೆ, ಪಟಾಕಿ ಕಿಡಿಗಳು ಪಕ್ಕದಲ್ಲೇ ಇದ್ದ ಗುಡಿಸಲಿಗೆ ಬಿದ್ದು ಬೆಂಕಿ ಹೊತ್ತಿಕೊಂಡಿದ್ದು. ಬೆಂಕಿಯನ್ನು ನಿಯಂತ್ರಿಸಲು ಸ್ಥಳೀಯರು ಪ್ರಯತ್ನ ಪಟ್ಟರಾದರೂ, ಬೆಂಕಿಯನ್ನು ನಂದಿಸಲು ಸಾಧ್ಯವಾಗಲಿಲ್ಲ. ಜತೆಗೆ ಗುಡಿಸಲಿನಲ್ಲಿದ್ದ ಗ್ಯಾಸ್​ ಸಿಲಿಂಡರ್ ಬಗ್ಗೆ ಯಾರ ಗಮನಕ್ಕೂ ಬಂದಿರಲಿಲ್ಲ ಎಂದು ತಿಳಿಸಿದ್ದಾರೆ.

ಏಕಾಏಕಿ ಸಿಲಿಂಡರ್​ ಸ್ಫೋಟಗೊಂಡ ಪರಿಣಾಮ, ಸ್ಥಳದಲ್ಲಿದ್ದ ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ, ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ, ತಕ್ಷಣವೇ ಗಾಯಳುಗಳನ್ನು ಪೊಲೀಸ್​​ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಮಾರ್ಗಮಧ್ಯೆದಲ್ಲೇ ಮೃತ ಪಟ್ಟರೆ, ಇನ್ನೋರ್ವ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತ ಪಟ್ಟಿದ್ದಾರೆ. ಈ ಘಟನೆಯಿಂದ ಸಂಸದರು ಮತ್ತು ಶಾಸಕರು ಸಭೆ ರದ್ದುಪಡಿಸಿ ಸ್ಥಳದಿಂದ ತೆರಳಿದರು.

ಇದನ್ನೂ ಓದಿ: 15ನೇ ವಯಸ್ಸಿಗೆ ಪದವಿ ಪಡೆಯಲು ಹೊರಟಿರುವ ಬಾಲಕಿ: ಪ್ರಧಾನಿ ಭೇಟಿಯಾಗಿ ಹೇಳಿದ್ದೇನು ಗೊತ್ತಾ?

ಕೆಸಿಆರ್​​​​ ಮತ್ತು ಕೆಟಿಆರ್​​ ಸಂತಾಪ: ಘಟನೆ ಬಗ್ಗೆ ಮಾಹಿತಿ ಪಡೆದ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​ ಹಾಗೂ ಸಚಿವ ಕೆಟಿ ರಾಮ ರಾವ್​​ ಮೃತ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಈ ಘಟನೆ ಕುರಿತು ಸಚಿವ ಪುವ್ವಾಡ ಅವರು ಸಂಸದ ನಾಮ ನಾಗೇಶ್ವರ್​ ಅವರಿಗೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದು, ಮೃತರ ಕುಟುಂಬಕ್ಕೆ 10 ಲಕ್ಷ ಮತ್ತು ಗಾಯಾಳುಗಳಿಗೆ 2 ಲಕ್ಷ ಪರಿಹಾರ ಹಾಗೂ ಉಚಿತ ಚಿಕಿತ್ಸೆ ಕೊಡಿಸುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: 'ನಿವೃತ್ತಿಗೂ ಒಂದು ದಿನ ಮುನ್ನ ಘೋಷಣೆಯಾಗುವ ವಾರ್ಷಿಕ ವೇತನ ಹೆಚ್ಚಳಕ್ಕೆ ನೌಕರರು ಅರ್ಹ'

ಘಟನೆ ಬಗ್ಗೆ ಸಂಸದ ನಾಮ ನಾಗೇಶ್ವರ ರಾವ್ ಪ್ರತಿಕ್ರಿಯಿಸಿ, "ಚಿಮ್ಮಲಪಾಡು ಘಟನೆ ದುರದೃಷ್ಟಕರ. ಸಿಲಿಂಡರ್ ಸ್ಫೋಟಗೊಂಡು ಪ್ರಾಣಹಾನಿ ಸಂಭವಿಸಿದೆ. ನಮ್ಮ ಕಾರ್ಯಕರ್ತರು ಸಾವನ್ನಪ್ಪಿರುವುದು ಬಹಳ ನೋವನ್ನುಂಟು ಮಾಡಿದೆ. ಬೆಂಕಿ ನಂದಿಸಲು ಹೋದ ಪೊಲೀಸರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಲು ಆದೇಶಿಸಲಾಗಿದೆ" ಎಂದು ಹೇಳಿದರು.

ಇದನ್ನೂ ಓದಿ: ಬಿಜೆಪಿ ಸಂಸದ ಸ್ಥಾನ ಕಿತ್ತುಕೊಳ್ಳಬಹುದು, ಜನರನ್ನು ಪ್ರತಿನಿಧಿಸುವುದನ್ನು ತಡೆಯಲು ಸಾಧ್ಯವಿಲ್ಲ: ರಾಹುಲ್​​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.