ETV Bharat / bharat

ತಿಹಾರ್ ಜೈಲಿನಲ್ಲಿ ಗ್ಯಾಂಗ್ ವಾರ್​​: ಕುಖ್ಯಾತ ದರೋಡೆಕೋರ ಪ್ರಿನ್ಸ್ ತೆವಾಟಿಯಾ ಹತ್ಯೆ - Lawrence Bishnoi gang

ತಿಹಾರ್ ಜೈಲಿನಲ್ಲಿ ಕೈದಿಗಳ ಮಧ್ಯೆ ಗ್ಯಾಂಗ್ ವಾರ್ ನಡೆದಿದ್ದು, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸಹವರ್ತಿ ಪ್ರಿನ್ಸ್ ತೆವಾಟಿಯಾನನ್ನು ಹತ್ಯೆ ಮಾಡಲಾಗಿದೆ.

Gangster
ತಿಹಾರ್ ಜೈಲು
author img

By

Published : Apr 15, 2023, 9:05 AM IST

ನವದೆಹಲಿ : ಜೈಲಿನಲ್ಲಿ ಎರಡು ಗುಂಪುಗಳ ನಡುವಿನ ಗ್ಯಾಂಗ್ ವಾರ್ ನಡೆದಿದೆ. ಕುಖ್ಯಾತ ದರೋಡೆಕೋರ ಮತ್ತು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸಹವರ್ತಿ ಪ್ರಿನ್ಸ್ ತೆವಾಟಿಯಾನನ್ನ ಶುಕ್ರವಾರ ತಿಹಾರ್ ಜೈಲಿನಲ್ಲಿ ಸಹ ಕೈದಿಗಳು ಹತ್ಯೆ ಮಾಡಿದ್ದಾರೆ. ಕೈದಿಗಳು ತಮ್ಮ ಬ್ಯಾರಕ್​ನಿಂದ ಹೊರಗೆ ಬಂದಾಗ ಸಂಜೆ 5.30 ರ ಸುಮಾರಿಗೆ ಘಟನೆ ಸಂಭವಿಸಿದೆ. ಪ್ರಿನ್ಸ್ ನನ್ನು ತಿಹಾರ್‌ನ ಕೇಂದ್ರ ಕಾರಾಗೃಹ ಸಂಖ್ಯೆ 3 ರಲ್ಲಿ ಇರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

"ಪ್ರಿನ್ಸ್ ತೆವಾಟಿಯಾ (30) ಮೊದಲು ಅಬ್ದುರ್ ರೆಹಮಾನ್ ಎಂಬ ಮತ್ತೊಬ್ಬ ಕೈದಿಯ ಮೇಲೆ ದಾಳಿ ಮಾಡಿದ್ದ. ಈ ವೇಳೆ ಅಬ್ದುರ್ ಕೂಡ ಪ್ರತಿ ದಾಳಿ ಮಾಡಿದ. ಅನಂತರ ರೆಹಮಾನ್ ಪರಿಚಯಸ್ಥರು ಸಹ ತೆವಾಟಿಯಾ ಮೇಲೆ ಏರಗಿದರು. ಎರಡೂ ಕಡೆಯವರು ಪೋಕರ್ ನಂತಹ ಸುಧಾರಿತ ಆಯುಧಗಳು ಮತ್ತು ಇತರ ಸ್ವಯಂ ನಿರ್ಮಿತ ಆಯುಧಗಳಿಂದ ಪರಸ್ಪರ ದಾಳಿ ಮಾಡಿಕೊಂಡರು" ಎಂದು ಅಧಿಕಾರಿಗಳು ಹೇಳಿದ್ದಾರೆ.

"ಜೈಲಿನಲ್ಲಿ ನಡೆದ ಗ್ಯಾಂಗ್‌ವಾರ್​ನಲ್ಲಿ ಮೂರು ಜನ ಗಾಯಗೊಂಡಿದ್ದರು. ತೆವಾಟಿಯಾಗೂ ಗಾಯಗಳಾಗಿದ್ದು, ಕೂಡಲೇ ಆತನನ್ನು ಜೈಲು ಸಂಖ್ಯೆ 3 ರಲ್ಲಿಯ ಸೆಂಟ್ರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಕರೆದುಕೊಂಡು ಹೋಗಿತ್ತಾದರೂ ಅಷ್ಟರಲ್ಲೇ ಆತ ಮೃತಪಟ್ಟಿದ್ದ. ಈ ಕುರಿತು ಎಫ್‌ಐಆರ್ ದಾಖಲಿಸಲಾಗುತ್ತಿದ್ದು, ಚೀಫ್​ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ವಿಚಾರಣೆ ನಡೆಸಲಿದ್ದಾರೆ" ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ : ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಗ್ಯಾಂಗ್​ನಿಂದ ಹಲ್ಲೆ: ಸಿಸಿಟಿವಿ ದೃಶ್ಯ

ಕಳೆದ ವರ್ಷದ ಡಿಸೆಂಬರ್‌ ತಿಂಗಳಿನಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಕಾರ್ ಜಾಕಿಂಗ್‌ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಕ್ರೈಂ ಬ್ರಾಂಚ್‌ ಪೊಲೀಸರು ತೆವಾಟಿಯಾನನ್ನು ಬಂಧಿಸಿದ್ದರು. ಈತನ ವಿರುದ್ಧ ಕೊಲೆ ಮತ್ತು ಕೊಲೆ ಯತ್ನ ಸೇರಿದಂತೆ 16 ಕೇಸ್​ಗಳಿವೆ. ​ಜೊತೆಗೆ, ಈತ ಪಂಜಾಬಿ ರಾಜಕಾರಣಿ ಮತ್ತು ಗಾಯಕ ಸಿಧು ಮೂಸೆವಾಲಾ ಅವರನ್ನು ಹತ್ಯೆ ಮಾಡಿದ ಪ್ರಕರಣದ ರೂವಾರಿ ಕೂಡ ಹೌದು.

ಇದನ್ನೂ ಓದಿ : ಓಲಾ ಬುಕ್ ಮಾಡಿ ಕಾರು ದೋಚುತ್ತಿದ್ದ ಗ್ಯಾಂಗ್ ಅಂದರ್.. ಬಂಧಿತರಿಂದ ಕಾರು ಬೈಕ್ ವಶ

2010 ರಲ್ಲಿ ಮೊದಲ ಬಾರಿಗೆ ಕೊಲೆ ಆರೋಪದ ಮೇರೆಗೆ ಆತನನ್ನು ಪೊಲೀಸರು ಬಂಧಿಸಿದ್ದರು. ನ್ಯಾಯಾಲಯದಲ್ಲಿ ತನ್ನ ಪ್ರಕರಣಕ್ಕೆ ಹಾಜರಾಗುವ ವೇಳೆ ಆತ ಬಾಲಾಪರಾಧಿ ಎಂದು ಪರಿಗಣಿಸಲು ನಕಲಿ ಜನನ ಪ್ರಮಾಣ ಪತ್ರವನ್ನು ನೀಡಿ ಸಿಕ್ಕಿಬಿದ್ದಿದ್ದ. ಬಳಿಕ ನ್ಯಾಯಾಲಯದ ಆದೇಶದ ಮೇರೆಗೆ ತೆವಾಟಿಯಾ ವಿರುದ್ಧ ಫೋರ್ಜರಿ ಪ್ರಕರಣ ದಾಖಲಿಸಲಾಯಿತು. ಜೊತೆಗೆ, ಈ ಹಿಂದೆ ಲೋಡ್ ಮಾಡಿದ ಪಿಸ್ತೂಲ್‌ ತೋರಿಸಿ ಕಾರು ಮಾಲೀಕನನ್ನು ಬೆದರಿಸುವ ಮೂಲಕ ಆತನ ಫಾರ್ಚುನರ್ ಕಾರನ್ನು ದರೋಡೆ ಮಾಡಿದ್ದ.

ಇದನ್ನೂ ಓದಿ : ಖೋಟಾನೋಟು ಮುದ್ರಿಸಿ ಬೆಂಗಳೂರಲ್ಲಿ ಮಾರಾಟ ಮಾಡುತ್ತಿದ್ದ ಆಂಧ್ರ ಗ್ಯಾಂಗ್ ಅರೆಸ್ಟ್...

ETV Bharat Logo

Copyright © 2025 Ushodaya Enterprises Pvt. Ltd., All Rights Reserved.