ಶ್ರೀನಗರ: ಸಾಮಾಜಿಕ ಕಾರ್ಯಕರ್ತರು, ರಾಜಕೀಯ ಮುಖಂಡರು, ಸರ್ಕಾರಿ ಅಧಿಕಾರಿಗಳು ಮತ್ತು ಪತ್ರಕರ್ತರಿಗೆ ಜೀವ ಬೆದರಿಕೆ ಹಾಕುತ್ತಿದ್ದ ಆರೋಪದಡಿ ಐವರನ್ನು ಬಂಧಿಸಲಾಗಿದೆ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ. ಈ ಗ್ಯಾಂಗ್ Kashmirfight.wordpress.com ಟ್ಯಾಗ್ಲೈನ್ನಡಿ ಬೆದರಿಕೆಯೊಡ್ಡುತ್ತಿದ್ದರು ಎನ್ನಲಾಗಿದೆ.
ಬಂಧಿತರನ್ನು ಸನತ್ ನಗರದ ನಜೀಶ್ ಯಸ್ರಾಬ್ ರೆಹಮಾನಿ, ತಬೀಶ್ ಅಕ್ಬರ್ ರೆಹಮಾನಿ, ರಾಜ್ ಬಾಗ್ನ ಸೋಫಿ ಮುಹಮ್ಮದ್ ಅಕ್ಬರ್, ಹಜರತ್ಬಾಲ್ ಮೂಲದ ಪೀರ್ಜಾಡಾ ರಕೀಫ್ ಮಖ್ದೂಮಿ ಮತ್ತು ಪೂಂಚ್ ಪ್ರದೇಶದ ಜಾವೇದ್ ಖಾಲಿದ್ ಎಂದು ಗುರುತಿಸಲಾಗಿದೆ.
ಬಂಧಿತರಿಂದ ಸೆಲ್ ಫೋನ್ಗಳು, ಕಂಪ್ಯೂಟರ್, ಮೊಬೈಲ್, ಒಂದು ಟ್ಯಾಬ್ಲೆಟ್, ಎರಡು ಲ್ಯಾಪ್ಟಾಪ್, ನಾಲ್ಕು ಹಾರ್ಡ್ ಡಿಸ್ಕ್ಗಳು, ಏಳು ಮೆಮೊರಿ ಕಾರ್ಡ್ ಹಾಗೂ ಒಂದು ಡಾಂಗಲ್ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ಮಳೆ ತಂದ ಅವಾಂತರ.. ಮುಂಬೈನಲ್ಲಿ ಗೋಡೆ ಕುಸಿದು 11 ಜನ ದುರ್ಮರಣ
ಪತ್ರಕರ್ತ ಶುಜತ್ ಬುಖಾರಿ, ವಕೀಲ ಬಾಬರ್ ಖಾದ್ರಿ, ಉದ್ಯಮಿ ಸತ್ಪಾಲ್ ನಿಶ್ಚಲ್ ಹತ್ಯೆಯ ಹಿಂದೆ ಈ ಆರೋಪಿಗಳ ಕೈವಾಡವಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.