ETV Bharat / bharat

Gadchiroli Encounter: 26 ನಕ್ಸಲರ ಹತ್ಯೆ, ಅವರ ಚಳವಳಿ ಮೇಲೆ ಪರಿಣಾಮ ಬೀರಲಿದೆ: ಭೂಪೇಶ್ ಬಘೇಲ್ - ಮಿಲಿಂದ್ ತೇಲ್ತುಂಬ್ಡೆ

ಮಾವೋವಾದಿ ನಾಯಕ ಮಿಲಿಂದ್ ತೇಲ್ತುಂಬ್ಡೆ ಸೇರಿ 26 ನಕ್ಸಲರನ್ನು ಕೊಲ್ಲಲಾಗಿದೆ. ಇದು ನಕ್ಸಲ್ ಚಳವಳಿಯ ಮೇಲೆ ಪರಿಣಾಮ ಬೀರಲಿದೆ ಎಂದು ಗಡ್ಚಿರೋಲಿ ಎನ್‌ಕೌಂಟರ್‌ ಬಗ್ಗೆ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಪ್ರತಿಕ್ರಿಯೆ ನೀಡಿದ್ದಾರೆ.

Gadchiroli Encounter
Gadchiroli Encounter
author img

By

Published : Nov 15, 2021, 9:42 AM IST

ರಾಯ್‌ಪುರ (ಛತ್ತೀಸ್‌ಗಢ): ಗಡ್ಚಿರೋಲಿ ಎನ್‌ಕೌಂಟರ್‌ನಲ್ಲಿ (Gadchiroli Encounter) 26 ನಕ್ಸಲರ ಹತ್ಯೆ ಮಾಡಿರುವುದು ನಕ್ಸಲ್ ಚಳವಳಿಯ (Naxals Movement) ಮೇಲೆ ಪರಿಣಾಮ ಬೀರಲಿದೆ. ಇದು ಅವರ ಚಲನವಲನವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ (Chhattisgarh Chief Minister Bhupesh Baghel) ಹೇಳಿದ್ದಾರೆ.

ನಕ್ಸಲರ ಹಿರಿಯ ನಾಯಕರನ್ನು ಬಂಧಿಸಲಾಗುತ್ತಿದೆ, ಕೊಲ್ಲಲಾಗುತ್ತಿದೆ. ಈ ಹಿಂದೆ ಜಾರ್ಖಂಡ್‌ನಲ್ಲಿ ವಾಟೆಂಡ್​ ನಕ್ಸಲ್​ ಮುಖಂಡನೂ ಸಿಕ್ಕಿಬಿದ್ದಿದ್ದಾನೆ. ಇದೀಗ ಮಾವೋವಾದಿ ನಾಯಕ ಮಿಲಿಂದ್ ತೇಲ್ತುಂಬ್ಡೆ ( Milind Teltumbde) ಸೇರಿ 26 ನಕ್ಸಲರನ್ನು ಕೊಲ್ಲಲಾಗಿದೆ. ಇದು ನಕ್ಸಲ್ ಚಳವಳಿಯ ಮೇಲೆ ಪರಿಣಾಮ ಬೀರಲಿದ್ದು, ನಕ್ಸಲ್​ ಚಟುವಟಿಕೆಗಳನ್ನು ನಾವು ಶೀಘ್ರದಲ್ಲೇ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಸಿಎಂ ಬಘೇಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Gadchiroli Encounter: ಈ ಎನ್‌ಕೌಂಟರ್ ನಕಲಿ.. ನ್ಯಾಯಾಂಗ ತನಿಖೆಯಾಗಲಿ - ನಕ್ಸಲರ ಆಗ್ರಹ

ಮಹಾರಾಷ್ಟ್ರ- ಛತ್ತೀಸ್‌ಗಢ ಗಡಿಭಾಗವಾದ ಗಡ್ಚಿರೋಲಿ ಜಿಲ್ಲೆಯ ಗ್ಯಾರಪಟ್ಟಿ ಅರಣ್ಯ ಪ್ರದೇಶದಲ್ಲಿ ಶನಿವಾರ ನಡೆದ ಎನ್​ಕೌಂಟರ್​ನಲ್ಲಿ 20 ಪುರುಷರು ಮತ್ತು 6 ಮಹಿಳೆಯರು ಸೇರಿ 26 ನಕ್ಸಲರನ್ನು ನಕ್ಸಲ್ ನಿಗ್ರಹ ಪೊಲೀಸ್ ದಳವು ಹೊಡೆದುರುಳಿಸಿತ್ತು. ಸಣ್ಣಪುಟ್ಟ ಗಾಯಗಳಾಗಿರುವ ಮೂವರು ಪೊಲೀಸ್ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗ್ಯಾರಪಟ್ಟಿ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಕೆಲವು ಮೃತ ನಕ್ಸಲರ ಗುರುತು ಇನ್ನು ಪತ್ತೆಯಾಗಿಲ್ಲ.

ಮೃತರ ಪೈಕಿ ಮೋಸ್ಟ್ ವಾಂಟೆಡ್​ ಮಾವೋವಾದಿ ನಾಯಕ ಮಿಲಿಂದ್ ತೇಲ್ತುಂಬ್ಡೆ ಕೂಡ ಇದ್ದನು. ಈತನನ್ನು ಹುಡುಕಿಕೊಟ್ಟವರಿಗೆ 50 ಲಕ್ಷ ರೂ. ಬಹುಮಾನ ನೀಡುವುದಾಗಿ ಪೊಲೀಸರು ಈ ಮೊದಲೇ ಘೋಚಿಸಿದ್ದರು ಎಂದು ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.