ETV Bharat / bharat

ತಮಿಳುನಾಡಿನಲ್ಲಿನ ರಾಜಕೀಯ ಬೆಳವಣಿಗೆ... ಜಯ ಮತ್ತು ಕರುಣಾ ಇಲ್ಲದ ದ್ರಾವಿಡ ನಾಡಿನ ನಡೆ ಹೇಗೆ? - tamilnadu latest news

ಹೆಚ್ಚು ದ್ರಾವಿಡರೇ ಇರುವ ಈ ಹೃದಯಭೂಮಿಯಲ್ಲಿ ಇಲ್ಲಿನ ರಾಜಕೀಯವು ವಿರಳವಾಗಿ ಆಶ್ಚರ್ಯವನ್ನುಂಟುಮಾಡುತ್ತದೆ. ಕಾಂಗ್ರೆಸ್​ ನಂತರ 1967 ರಿಂದ ರಾಜ್ಯವನ್ನು ಡಿಎಂಕೆ, ಎಐಎಡಿಎಂಕೆ ಆಳಿದೆ. ಈಗ, ಜಯಲಲಿತಾ ಮತ್ತು ಕರುಣಾನಿಧಿ ಅವರ ನಿಧನದೊಂದಿಗೆ ರಾಜಕೀಯ ವ್ಯವಸ್ಥೆ ಹೊಸ ಪಥ ಕಂಡು ಕೊಂಡಿದೆ.

fwd-myth-of-a-political-vacuum-post-jayaand-karuna-in-tamil-nadu
ತಮಿಳುನಾಡಿನಲ್ಲಿನ ರಾಜಕೀಯ ಬೆಳವಣಿಗೆ
author img

By

Published : Feb 11, 2021, 5:19 PM IST

ತಮಿಳುನಾಡು ವಿಧಾನಸಭೆ ಚುನಾವಣೆ 2021ಗೆ ಈಗಿನಿಂದಲೇ ಎಲ್ಲ ರೀತಿಯ ಭರ್ಜರಿ ಕಾರ್ಯಾಚರಣೆ ನಡೆಯುತ್ತಿವೆ. ದೇಶದಲ್ಲಿ ಇತರ ರಾಜ್ಯಗಳಿಗಿಂತ ತನಿಳುನಾಡಿನಲ್ಲಿನ ಚುನಾವಣೆಗಳು ಭಾರೀ ವಿಭಿನ್ನವಾಗಿರುತ್ತವೆ. ಈ ದ್ರಾವಿಡ ನಾಡಿದ ರಾಜಕೀಯ ಬೆಳವಣಿಗೆ ಈ ರೀತಿಯಾಗಿದೆ.

ಈ ಹಿಂದೆ ತಮಿಳುನಾಡಿನಲ್ಲಿ ಕಾಂಗ್ರೆಸ್ಸಿನ ಕೆ ಕಾಮರಾಜ್ ಮತ್ತು ಡಿಎಂಕೆ ಯ ಸಿಎನ್ ಅಣ್ಣಾದೊರೈ ಅವರಂತಹ ಪ್ರಮುಖರು ಇದ್ದರು. ನಂತರ, ಮುತ್ತುವೆಲ್ ಕರುಣಾನಿಧಿ ಮತ್ತು ಎಂ.ಜಿ.ರಾಮಚಂದ್ರನ್ ಅಕಾ ಎಂಜಿಆರ್ ಮತ್ತು ಜಯಲಲಿತಾ ತಮ್ಮದೇ ಆದ ಚಾಪು ಮೂಡಿಸಿ ದ್ರಾವಿಡ ನಾಡಲ್ಲಿ ಈವರೆಗೂ ಅಚ್ಚಳಿಯದೇ ಉಳಿದಿದ್ದಾರೆ. ಕರುಣಾನಿಧಿ ಮತ್ತು ಜಯಲಲಿತಾ ಅವರ ನಿಧನ ನಂತರದ ರಾಜಕೀಯ ಚಟುವಟಿಕೆ ಈಗ ಬೇರೆಯದೇ ರೀತಿಯಲ್ಲಿ ಕಂಡು ಬರುತ್ತಿದೆ.

ಪ್ರಸ್ತುತ ಇಲ್ಲಿನ ರಾಜಕೀಯ ಜಾಗವನ್ನು ಆಕ್ರಮಿಸಿಕೊಳ್ಳಲು ಇದು ಸೂಕ್ತ ಸಮಯ ಎಂದು ಕೇಸರಿ ಪಕ್ಷ ತಿಳಿದಿದೆ. ಹಾಗೆ ರಜನಿಕಾಂತ್ ರಾಜಕೀಯಕ್ಕೆ ಕಲಿಡುವ ಮುನ್ನವೇ ಹಿಂದೆ ಸರಿದಿದ್ದಾರೆ. ಇನ್ನು ಕಮಲ್ ಹಾಸನ್ ಇತ್ತೀಚಿನ ದಿನಗಳಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ.

ಹೆಚ್ಚು ದ್ರಾವಿಡರೇ ಇರುವ ಈ ಹೃದಯಭೂಮಿಯಲ್ಲಿ ಇಲ್ಲಿನ ರಾಜಕೀಯವು ವಿರಳವಾಗಿ ಆಶ್ಚರ್ಯವನ್ನುಂಟುಮಾಡುತ್ತದೆ. ಕಾಂಗ್ರೆಸ್​ ನಂತರ 1967 ರಿಂದ ರಾಜ್ಯವನ್ನು ಡಿಎಂಕೆ , ಎಐಎಡಿಎಂಕೆ ಆಳಿದೆ. ಈಗ, ಜಯಲಲಿತಾ ಮತ್ತು ಕರುಣಾನಿಧಿ ಅವರ ನಿಧನದೊಂದಿಗೆ ರಾಜಕೀಯ ವ್ಯವಸ್ಥೆ ಹೊಸ ಪಥ ಕಂಡು ಕೊಂಡಿದೆ.

ಮೊದಲು ರಾಜಕೀಯ ನಿರ್ವಾತದ ಈ ವ್ಯವಸ್ಥೆಯನ್ನು ಬೆಳೆಸಿದವರು ರಜನಿಕಾಂತ್. ನಂತರ ಬಂದ ಕಮಲ್ ಹಾಸನ್ ತಮ್ಮನ್ನು ತಾವು ಉದ್ಧಾರಕ ಎಂದು ಘೋಷಿಸಿಕೊಂಡರು. ಇನ್ನು ಕೇಸರಿ ಬ್ರಿಗೇಡ್ ದ್ರಾವಿಡ ಸಿದ್ಧಾಂತ ಮತ್ತು ಪರಂಪರೆಯನ್ನು ಅಪಹಾಸ್ಯ ಮಾಡಕೊಂಡು ಬರುತ್ತಿದೆ. ಆದರೆ, ದ್ರಾವಿಡ ರಾಜಕೀಯ ಯೋಜನೆ ಇಲ್ಲಿ ಜೀವಂತವಾಗಿದೆ. ಇಬ್ಬರು ಪ್ರಮುಖ ದಿವಂಗತ ನಾಯಕರ ಅನುಪಸ್ಥಿತಿ ಇಲ್ಲದಿದ್ದರೂ ಕೂಡ ಡಿಎಂಕೆ ಅಥವಾ ಎಐಎಡಿಎಂಕೆ ಎರಡೂ ನಿಷ್ಕ್ರಿಯಗೊಂಡಿಲ್ಲ ಅಥವಾ ರಾಜ್ಯವನ್ನು ಚುಕ್ಕಾಣಿ ಹಿಡಿಯುವಲ್ಲಿ ತಮ್ಮ ಪ್ರಸ್ತುತತೆಯನ್ನು ಈಗಲೂ ಕಳೆದುಕೊಂಡಿಲ್ಲ.

ಅಧಿಕಾರವನ್ನು ಪಡೆದ ಕೆಲವೇ ತಿಂಗಳುಗಳ ನಂತರ ಜಯಲಲಿತಾ ಅವರು ಡಿಸೆಂಬರ್ 2016 ರಲ್ಲಿ ನಿಧನರಾದರೆ, ಕರುಣಾನಿಧಿ 2018 ರ ಆಗಸ್ಟ್‌ನಲ್ಲಿ ನಿಧನರಾದರು. 2016 ರಿಂದ ಮುನ್ನೆಲೆ ರಾಜಕೀಯ ಚಟುವಟಿಕೆಯಲ್ಲಿದ್ದ ಸ್ಟಾಲಿನ್ ಅವರು ಡಿಎಂಕೆ ಅನ್ನು ಚುಕ್ಕಾಣಿ ಹಿಡಿದು ಅಭಿಯಾನವನ್ನು ಮುನ್ನಡೆಸಿಕೊಂಡು ಬಂದರು. ನಂತರ ಲೋಕಸಭೆ ಚುನಾವಣಾ ಜವಬ್ದಾರಿ ಇವರ ಹೆಗಲಿಗೆ ಬಂತು. ಲೊಕಸಭಾ ಚುನಾವಣೆಯ ಫಲಿತಾಂಶಗಳನ್ನು ಘೋಷಿಸುತ್ತಿದ್ದಂತೆ, ಪಕ್ಷದ ಪ್ರಧಾನ ಚೇರಿ ಅನ್ನಾ ಅರಿವಲಯಂನಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುತ್ತಿದ್ದ ಸ್ಟಾಲಿನ್, ಭಾವುಕತೆಯಿಂದ ಕಣ್ಣೀರು ಸುರಿಸಿದ್ದರು. ಅಂದು ರಾಜಕೀಯ ದಿಗಂತದಲ್ಲಿ ಒಬ್ಬ ನಾಯಕ ಹುಟ್ಟಿದ್ದ ಹಾಗೆ ಮೋದಿ ವಿರೋಧಿ ಅಭಿಯಾನದ ಪ್ರಮುಖ ಹಂತವಾಗಿ, ಅವನ ಮೈತ್ರಿ ಸಮೃದ್ಧವಾದ ಫಸಲನ್ನು ಪಡೆದಿತ್ತು. ಅವರ ನಾಯಕತ್ವದಲ್ಲಿ, 39 ಲೋಕಸಭಾ ಸೀಟುಗಳಲ್ಲಿ, ಡಿಎಂಕೆ ನೇತೃತ್ವದ ಸಂಯೋಜನೆಯು 38 ಸೀಟುಗಳನ್ನು ತನ್ನದಾಗಿಸಿಕೊಂಡಿತ್ತು.

ಇನ್ನು ಪಕ್ಷದ ಸಂಘಟನೆಯನ್ನು ಭಾರಿ ಚಾಕಚಕ್ಯತೆಯಿಂದ ಮಾಡಿದರು. ಪಟ್ಟಾಭಿಷೇಕಕ್ಕೆ ಮುಂಚೆಯೇ, ಕರುಣಾನಿಧಿ ಜೀವಂತವಾಗಿದ್ದಾಗ, ಅವರ ಹಿರಿಯ ಸಹೋದರ ಎಂ.ಕೆ.ಅಲಗಿರಿ ಅವರನ್ನು ಹೊರಹಾಕಲಾಯಿತು. ಅಂದಿನಿಂದ, ಪಕ್ಷದ ದಕ್ಷಿಣದ ಬಲಶಾಲಿ ಎಂದು ಪರಿಗಣಿಸಲ್ಪಟ್ಟ, ಅಲಗಿರಿ ರಾಜಕೀಯ ವನವಾಸಕ್ಕೆ ಹೋದರು. ಅವರು ರಾಜಕೀಯಕ್ಕೆ ಪುನರ್​ ಹೆಜ್ಜೆ ಇಡುವ ಯಾವ ಲಕ್ಷಣವೂ ಈವರೆಗೆ ಕಾಣುತ್ತಿಲ್ಲ.

ಇನ್ನು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ರಾಜಕೀಯ ಚಾಣಾಕ್ಷತೆಯನ್ನು ಪ್ರದರ್ಶಿಸಿ ಮಹತ್ವಾಕಾಂಕ್ಷೆಯ ಡೆಪ್ಯೂಟಿ ಸಿಎಂ ಆಗಿ ಪನ್ನೀರ್​ಸೆಲ್ವಂ ಅವರನ್ನು ಆಯ್ಕೆ ಮಾಡಿಕೊಂಡರು. ಲೋಕಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಅವರನ್ನು ಹಿಮ್ಮೆಟ್ಟಿಸಿದರೂ ಏಕಕಾಲದಲ್ಲಿ 22 ವಿಧಾನಸಭಾ ಉಪಚುನಾವಣೆಗಳಲ್ಲಿ ನಡೆದ ಉಪಚುನಾವಣೆಯಲ್ಲಿ, ಅವರ ನೇತೃತ್ವದಲ್ಲಿ ಪಕ್ಷವು 9 ಸ್ಥಾನಗಳನ್ನು ಗೆದ್ದಿತು ಮತ್ತು ಅನಿಶ್ಚಿತ ಸ್ಥಿತಿಯಲ್ಲಿದ್ದ ಸರ್ಕಾರವನ್ನು ಉಳಿಸುವಲ್ಲಿ ಯಶಸ್ವಿಯಾಯಿತು.

ಎಐಎಡಿಎಂಕೆ ಅನ್ನು ಇಲ್ಲಿಯವರೆಗೆ ಒಟ್ಟಿಗೆ ಹಿಡಿದಿಟ್ಟುಕೊಂಡ ಶಕ್ತಿ ಒಗ್ಗಟ್ಟು ಎಂಬ ಅಂಶವನ್ನು ಅಲ್ಲಗಳೆಯುವಂತಿಲ್ಲ. ಲೋಕಸಭಾ ಸಮೀಕ್ಷೆಯಲ್ಲಿ ಎಐಎಡಿಎಂಕೆ ಮತ ಪಾಲು 2014 ರಲ್ಲಿ 44.3 ಇದ್ದದ್ದು 31.26% ಕ್ಕೆ ಇಳಿದಿರುವುದು ಕೂಡ ನಿಜ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.