ಕತಿಹಾರ್ (ಬಿಹಾರ): ಮೊಹರಂ ಮೆರವಣಿಗೆ ವೇಳೆ ಬಿಹಾರದಲ್ಲಿ ಗಲಭೆ ನಡೆದಿದ್ದು, ಕಾರಿನ ಮೇಲೆ ಉದ್ರಿಕ್ತ ಗುಂಪೊಂದು ದಾಳಿ ನಡೆಸಿದೆ. ಈ ವೇಳೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕತಿಹಾರ್ನ ಬರಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾರ್ಘಿಯಾ ಗ್ರಾಮದ ನಿವಾಸಿ ಅಮೀನಾ ಖಾತೂನ್ ಅವರಿಗ ಚಿಕಿತ್ಸೆ ಕೊಡಿಸಿ ಪೂರ್ಣಿಯಾದಿಂದ ಕಾರಿನಲ್ಲಿ ಕರೆತರಲಾಗುತ್ತಿತ್ತು. ಈ ವೇಳೆ ಕತಿಹಾರ್ನ ರಾಷ್ಟ್ರೀಯ ಹೆದ್ದಾರಿ-31 ರಲ್ಲಿ ಮುಸಾಪುರ ಚೌಕ್ ಬಳಿ ಮೊಹರಂ ಮೆರವಣಿಗೆ ನಡೆಯುತ್ತಿತ್ತು.
ಕಾರು ಚಾಲಕನು ದಾರಿ ಬಿಡುವಂತೆ ಮೆರವಣಿಗೆ ಮಾಡುತ್ತಿದ್ದವರನ್ನು ಕೇಳಿದ್ದಕ್ಕೆ, ಉದ್ರಿಕ್ತ ಗುಂಪು ಕಾರಿನ ಮೇಲೆ ಕಲ್ಲು - ದೊಣ್ಣೆಗಳಿಂದ ದಾಳಿ ನಡೆಸಿದೆ ಎನ್ನಲಾಗಿದೆ. ಈ ಸಮಯದಲ್ಲಿ ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿದ್ದು, ಕೆಲ ಸ್ಥಳೀಯ ಯುವಕರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ: ಮೂರು ವರ್ಷದಿಂದ ಮಹಿಳೆಗೆ ನರಕ ದರ್ಶನ.. ವರದಕ್ಷಿಣೆಗಾಗಿ ದೇಹವೆಲ್ಲ ಸುಟ್ಟು ಚಿತ್ರಹಿಂಸೆ ನೀಡಿದ ಆರೋಪ..
ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಕುಮಾರ್ ಈ ಸಂಬಂಧ ಮಾಹಿತಿ ಕಲೆ ಹಾಕಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ವಿಡಿಯೋ ಆಧರಿಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.