ETV Bharat / bharat

ಆಸ್ತಿ ಮೇಲಿನ ವ್ಯಾಮೋಹ.. ಲವರ್ ಜತೆ​ ಸೇರಿ ಫ್ರೆಂಚ್​ ಪೋಷಕಳನ್ನೇ ಕೊಂದಳು ದತ್ತುಪುತ್ರಿ!

author img

By

Published : Sep 12, 2021, 8:15 AM IST

ಆಸ್ತಿಗಾಗಿ ಪ್ರಿಯಕರ ಹಾಗೂ ಸ್ನೇಹಿತನೊಂದಿಗೆ ಸೇರಿ ದತ್ತುಪುತ್ರಿಯು 68 ವರ್ಷದ ಫ್ರೆಂಚ್ ಮಹಿಳೆಯನ್ನು ಹತ್ಯೆಗೈದಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

ಫ್ರೆಂಚ್ ಮಹಿಳೆ
ಫ್ರೆಂಚ್ ಮಹಿಳೆ

ಹೈದರಾಬಾದ್(ತೆಲಂಗಾಣ): 68 ವರ್ಷದ ಫ್ರೆಂಚ್ ಮಹಿಳೆಯನ್ನು ಆಕೆಯ ದತ್ತು ಪುತ್ರಿ ಮತ್ತು ಪ್ರಿಯತಮ ಸೇರಿ ಹತ್ಯೆಗೈದಿರುವ ಘಟನೆ ಹೈದರಾಬಾದ್​ ಹೊರ ವಲಯದ ಹಿಮಾಯತ್ ಸಾಗರ್​ ಬಳಿ ನಡೆದಿದೆ.

ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮೇರಿ ಕ್ರಿಸ್ಟೀನ್​​ ಹಿಮಾಯತ್​ ಸಾಗರ್​ ಬಳಿ ಶವವಾಗಿ ಪತ್ತೆಯಾಗಿದ್ದರು. ಶನಿವಾರ ಮೃತದೇಹವನ್ನು ಹೊರ ತೆಗೆದ ಸೈಬರಾಬಾದ್ ಪೊಲೀಸರು ಕೂಡಲೇ ತನಿಖೆ ಚುರುಕುಗೊಳಿಸಿ, ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ರೋಮಾ (24), ಆಕೆಯ ಪ್ರಿಯತಮ ವಿಕ್ರಮ್ ಶ್ರೀರಾಮುಲಾ (25) ಮತ್ತು ಸ್ನೇಹಿತ ರಾಹುಲ್ ಗೌತಮ್ (24) ಎಂದು ಗುರುತಿಸಲಾಗಿದೆ.

ಈ ಕುರಿತು ಸೈಬರಾಬಾದ್‌ನ ಶಂಷಾಬಾದ್ ವಲಯದ ಉಪ ಪೊಲೀಸ್ ಆಯುಕ್ತ ಎನ್. ಪ್ರಕಾಶ್ ರೆಡ್ಡಿ ಮಾತನಾಡಿ, ಆರೋಪಿಗಳು ಮೇರಿ ಕ್ರಿಸ್ಟೀನ್​​ರನ್ನು ಆಸ್ತಿಗಾಗಿ ಕೊಲೆ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸೆಪ್ಟೆಂಬರ್​​ 9 ರ ರಾತ್ರಿ ಕ್ರಿಸ್ಟೀನ್ ನಾಪತ್ತೆಯಾಗಿದ್ದಾರೆ ಎಂದು ಅಳಿಯ ಪ್ರಶಾಂತ್​ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆವು. ಕುಟುಂಬ ಸದಸ್ಯರು ರೋಮಾ ಮೇಲೆ ಸಂಶಯ ವ್ಯಕ್ತಪಡಿಸಿದ ಹಿನ್ನೆಲೆ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಳು. ಸೆಪ್ಟೆಂಬರ್ 8 ರಂದು ಗಾಂಧಿಪೇಟೆ ಮಂಡಲದ ದರ್ಗಾ ಖಲೀಜ್ ಖಾನ್‌ನಲ್ಲಿರುವ​​ ನಿವಾಸದಲ್ಲಿ ವಿಕ್ರಮ್ ಮತ್ತು ರಾಹುಲ್ ಹಗ್ಗದಿಂದ ಕ್ರಿಸ್ಟೀನ್​ ಕುತ್ತಿಗೆ ಬಿಗಿದು ಕೊಂದಿದ್ದಾರೆ ಎಂದು ತಿಳಿದು ಬಂದಿದೆ ಅಂತಾ ಮಾಹಿತಿ ನೀಡಿದರು.

ಕ್ರಿಸ್ಟೀನ್​, ಸುಮಾರು 30 ವರ್ಷಗಳ ಹಿಂದೆ ಭಾರತಕ್ಕೆ ವಲಸೆ ಬಂದು ಇಲ್ಲಿಯೇ ನೆಲೆಸಿದ್ದರು. ಬಡವರು ಮತ್ತು ಅನಾಥರ ಸೇವೆಗಾಗಿ ಟೋಲಿ ಚೌಕಿ ಮತ್ತು ದರ್ಗಾ ಖಲೀಜ್ ಖಾನ್ ಗ್ರಾಮದಲ್ಲಿ ಮೇರಿಕಾ ಪ್ರೌಢ ಶಾಲೆಗಳನ್ನು ಸ್ಥಾಪಿಸಿದ್ದರು. ಆಕೆಗೆ ಇಬ್ಬರ ಪುತ್ರಿಯರಿದ್ದು, ಮೊದಲ ಪುತ್ರಿ ಮೇರಿ ಸೊಲಾಂಜ್ ಅವರು ಪ್ರಶಾಂತ್​ರನ್ನು ವಿವಾಹವಾಗಿ, ಹೈದರಾಬಾದ್‌ನ ಸನ್ ಸಿಟಿಯಲ್ಲಿ ವಾಸಿಸುತ್ತಿದ್ದಾರೆ. ಮತ್ತು ರೆಬೆಕ್ಕಾ ಪುದುಚೇರಿಯಲ್ಲಿ ವಾಸಿಸುತ್ತಿದ್ದಾರೆ.

ಕ್ರಿಸ್ಟೀನ್​, ರೋಮಾ ಹಾಗೂ ಪ್ರಿಯಾಂಕಾ ಎಂಬುವರನ್ನು ದತ್ತು ಪಡೆದಿದ್ದರು. ಮೂವರೂ ದರ್ಗಾ ಖಲೀಜ್ ಖಾನ್‌ನಲ್ಲಿ ವಾಸಿಸುತ್ತಿದ್ದು, ಇತ್ತೀಚೆಗೆ ರೋಮಾ ಮದುವೆ ಮಾಡಲು ಕ್ರಿಸ್ಟೀನ್​ ವರನನ್ನು ಹುಡುಕುತ್ತಿದ್ದರು. ಇದಕ್ಕಾಗಿಯೇ, ಕ್ರಿಶ್ಚಿಯನ್ ಮ್ಯಾಟ್ರಿಮೊನಿಯಲ್ಲಿ ರೋಮಾ ಪ್ರೊಫೈಲ್ ರಚಿಸಿದ್ದರು. ರೋಮಾಗೆ ಮ್ಯಾಟ್ರಿಮೊನಿಯಲ್ಲಿ ಅನಂತಪುರ ಜಿಲ್ಲೆಯ ವಿಕ್ರಮ್​ ಪರಿಚಯವಾಗಿ, ಕೊಂಡಾಪುರದ ಅಪಾರ್ಟ್​ಮೆಂಟ್​ವೊಂದರಲ್ಲಿ ಲಿವಿಂಗ್ ಟು ಗೆದರ್​ನಲ್ಲಿದ್ದರು.

ಈ ಸಂಬಂಧ ಕ್ರಿಸ್ಟೀನ್​​ಗೆ ಇಷ್ಟವಾಗಿರಲಿಲ್ಲ. ಅಲ್ಲದೆ, ಅವರಿಬ್ಬರ ಮದುವೆಗೆ ನಿರಾಕರಿಸಿದ್ದರು. ಈ ಹಿನ್ನೆಲೆ ಸ್ನೇಹಿತರೊಟ್ಟಿಗೆ ಕೂಡಿ ಅವರು ಕ್ರಿಸ್ಟೀನ್​ರನ್ನು ಹತ್ಯೆಗೈದಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬಡ್ಡಿ ಆಸೆ ತೋರಿಸಿ 2 ಕೋಟಿ ರೂ.ವಂಚನೆ ಕೇಸ್‌; ಇಕ್ರ ಕಂಪನಿಯ ನಾಲ್ವರು ಆರೋಪಿಗಳ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.