ETV Bharat / bharat

ಕೇಂದ್ರದ ಉಚಿತ ಪಡಿತರ ಯೋಜನೆ ಬಡತನ, ಅಸಮಾನತೆಯ ಸಂಕೇತ: ಕಾಂಗ್ರೆಸ್​ ಟೀಕೆ - ಕೇಂದ್ರದ ಉಚಿತ ಪಡಿತರ ಯೋಜನೆ

Congress comment on free ration plan: ಎನ್‌ಎಫ್‌ಎಸ್‌ಎ ಅಡಿಯಲ್ಲಿ ಪ್ರತಿ ಕೆಜಿ ಆಹಾರ ಧಾನ್ಯಗಳಿಗೆ 1 ರಿಂದ 3 ರೂಪಾಯಿಗಳ ಕನಿಷ್ಠ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಕೇಂದ್ರದ ಉಚಿತ ಪಡಿತರ ಯೋಜನೆ
ಕೇಂದ್ರದ ಉಚಿತ ಪಡಿತರ ಯೋಜನೆ
author img

By ETV Bharat Karnataka Team

Published : Nov 5, 2023, 8:25 PM IST

ನವದೆಹಲಿ: ದೇಶದಲ್ಲಿ ಬಡತನ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳುವ ಸರ್ಕಾರ ಮುಂದಿನ 5 ವರ್ಷಗಳವರೆಗೆ ಉಚಿತ ಪಡಿತರವನ್ನು ಮುಂದುವರಿಸುವುದಾಗಿ ಘೋಷಿಸಿದೆ. ಹಾಗಿದ್ದರೆ ಸಮಾಜದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಇನ್ನೂ ಇದೆ ಎಂದರ್ಥ ಎಂದು ಕಾಂಗ್ರೆಸ್​ ಹೇಳಿದೆ.

ಪ್ರಧಾನಿ ಗರೀಬ್ ಕಲ್ಯಾಣ್ ಯೋಜನೆ (ಪಿಎಂಜಿಕೆವೈ)ಯಡಿ 80 ಕೋಟಿ ಭಾರತೀಯರಿಗೆ ಇನ್ನೂ ಐದು ವರ್ಷಗಳ ಕಾಲ ಉಚಿತ ಪಡಿತರವನ್ನು ಮುಂದುವರಿಸುವ ಪ್ರಧಾನಿ ಮೋದಿಯವರ ಭರವಸೆಯನ್ನು ಕಾಂಗ್ರೆಸ್ ಭಾನುವಾರ ಕಟುವಾಗಿ ಟೀಕಿಸಿದ್ದು, ಸರ್ಕಾರದ ಈ ನಿರ್ಧಾರ ದೇಶದಲ್ಲಿ ಆರ್ಥಿಕ ಸಂಕಷ್ಟ ಮತ್ತು ಸಮಾಜದಲ್ಲಿ ಹೆಚ್ಚುತ್ತಿರುವ ಅಸಮಾನತೆಯನ್ನು ತೋರಿಸುತ್ತದೆ ಎಂದು ಹೇಳಿದೆ.

ಸಮಾಜದಲ್ಲಿ ಅಸಮಾನತೆಯ ಸಂಕೇತ: ಈ ಬಗ್ಗೆ ಈಟಿವಿ ಭಾರತ್‌ ಜೊತೆ ಮಾತನಾಡಿರುವ ಎಐಸಿಸಿ ಕಾರ್ಯದರ್ಶಿ ಚಂದನ್ ಯಾದವ್, ದೇಶದ ಶೇಕಡಾ 50ಕ್ಕಿಂತ ಹೆಚ್ಚಿನ ನಾಗರಿಕರಿಗೆ ಉಚಿತ ಪಡಿತರವನ್ನು ನೀಡಬೇಕಾದರೆ ಸಮಾಜದಲ್ಲಿ ಆರ್ಥಿಕ ಸಂಕಷ್ಟ ಮತ್ತು ಅಸಮಾನತೆಯನ್ನು ಇದು ಸೂಚಿಸುತ್ತದೆ. ಇದನ್ನು ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯ ವೇಳೆಯೇ ಪ್ರಸ್ತಾಪಿಸಿದ್ದರು. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರ ಆದಾಯವು ಕುಸಿದಿದೆ. ದೇಶದಲ್ಲಿ ಅತಿ ಹೆಚ್ಚು ನಿರುದ್ಯೋಗವಿದೆ ಎಂದು ಹೇಳಿದ್ದಾರೆ.

ಇದು ನಿಜವಾಗಿ ಪ್ರಧಾನಿ ಗರೀಬ್ ಕಲ್ಯಾಣ್ ಯೋಜನೆ ಅಲ್ಲ. 2013 ರಲ್ಲಿ ಯುಪಿಎ ಸರ್ಕಾರ ಜಾರಿಗೆ ತಂದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಮಾರ್ಪಾಡಾಗಿದೆ. ಅಂದೇ ಬಡವರಿಗೆ ಉಚಿತ ಪಡಿತರವನ್ನು ಕಡ್ಡಾಯಗೊಳಿಸಲಾಗಿದೆ. ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಎನ್‌ಎಫ್‌ಎಸ್‌ಎಯನ್ನು ವಿರೋಧಿಸುತ್ತಿದ್ದರು. ಆದರೆ, ಈಗ ಅದನ್ನೇ ಹೆಸರು ಮಾರ್ಪಡಿಸಿ ಬಳಸುತ್ತಿದ್ದಾರೆ ಎಂದರು.

ಫಲಾನುಭವಿಗಳಿಗೆ ನೀಡಲಾಗುತ್ತಿರುವ ಪಡಿತರದಲ್ಲಿ 5 ಕೆಜಿ ಅಕ್ಕಿ ತನ್ನದು ಎಂದು ಜನರಲ್ಲಿ ಗೊಂದಲ ಮೂಡಿಸುತ್ತಿದೆ. ಛತ್ತೀಸ್‌ಗಢದ ಸಿಎಂ ಭೂಪೇಶ್ ಬಘೇಲ್ ಸರ್ಕಾರವು ಫಲಾನುಭವಿಗಳಿಗೆ 35 ಕೆಜಿ ಸಬ್ಸಿಡಿ ಅಕ್ಕಿಯನ್ನು ನೀಡುವುದನ್ನು ಮುಂದುವರಿಸುತ್ತದೆ. ಚುನಾವಣಾ ನೀತಿ ಸಂಹಿತೆ ಜಾರಿಯಿದ್ದರೂ ರಾಜ್ಯ ಸರ್ಕಾರವು ಬದ್ಧತೆಯ ಭಾಗವಾಗಿ ನವೆಂಬರ್ 1 ರಿಂದ ರೈತರಿಂದ ಎಂಎಸ್‌ಪಿ ದರದಲ್ಲಿ ಎಕರೆಗೆ 20 ಕ್ವಿಂಟಾಲ್ ಭತ್ತ ಮತ್ತು 10 ಕ್ವಿಂಟಾಲ್ ಮೆಕ್ಕೆಜೋಳವನ್ನು ಖರೀದಿಸಲು ಪ್ರಾರಂಭಿಸಿದೆ ಎಂದು ಎಐಸಿಸಿ ಕಾರ್ಯಾಧ್ಯಕ್ಷರು ಹೇಳಿದರು.

ಏನಿದು ಯೋಜನೆ?: ಪಿಎಂಜಿಕೆವೈ ಅನ್ನು 2020 ರಲ್ಲಿ ಸಾಂಕ್ರಾಮಿಕ ರೋಗದ ಪರಿಣಾಮವನ್ನು ಎದುರಿಸಲು ಪ್ರಾರಂಭಿಸಲಾಯಿತು. ನಂತರ ಇದನ್ನು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (ಎನ್‌ಎಫ್‌ಎಸ್‌ಎ) ಯೊಂದಿಗೆ ವಿಲೀನಗೊಳಿಸಲಾಯಿತು. ಇದನ್ನು ಹಿಂದಿನ ಯುಪಿಎ ಸರ್ಕಾರವು 2013 ರಲ್ಲಿ ಜಾರಿ ಮಾಡಿತ್ತು. ಎನ್‌ಎಫ್‌ಎಸ್‌ಎ ಯೋಜನೆಯು ದೇಶದ 67 ಪ್ರತಿಶತ ಜನರಿಗೆ ನೆರವಾಗಿತ್ತು. ಆಹಾರ ಮತ್ತು ಸಬ್ಸಿಡಿ ಧಾನ್ಯಗಳನ್ನು ಪಡೆಯುವ ಗ್ರಾಮೀಣ ಭಾಗದ ಶೇಕಡಾ 75 ಮತ್ತು 50 ಪ್ರತಿಶತ ನಗರ ಜನಸಂಖ್ಯೆಯನ್ನು ಒಳಗೊಂಡಿದೆ.

ಇದನ್ನೂ ಓದಿ: ಒಂದಲ್ಲ, ಎರಡಲ್ಲ, 4 ತಿಂಗಳು; ಶವಾಗಾರದ ಮುಂದೆ ಮೃತ ಮಾಲೀಕನಿಗೋಸ್ಕರ ಎದುರು ನೋಡುತ್ತಿದೆ ಸಾಕು ನಾಯಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.