ತ್ರಿಪುರ : ನ್ಯಾಷನಲ್ ಲಿಬರೇಶನ್ ಫ್ರಂಟ್ ಆಫ್ ತ್ರಿಪುರದ ನಾಲ್ಕು ನಕ್ಸಲರು ಸಶಸ್ತ್ರ ಸಮೇತವಾಗಿ ಅಗರ್ತಾಲ ಪೊಲೀಸರಿಗೆ ಶರಣಾಗಿದ್ದಾರೆ. ಕಳೆದ 15 ದಿನಗಳ ಹಿಂದೆ ಮೂವರು ಗಡಿ ಫೆನ್ಸಿಂಗ್ ಕಾರ್ಮಿಕರನ್ನು ಅಪಹರಿಸಿದ್ದ ಇವರು, ಬಳಿಕ ಅವರನ್ನು ಬಿಡುಗಡೆಗೊಳಿಸಿ ಶರಣಾಗಿದ್ದಾರೆ.
ಗುರುವಾರ ಸಂಜೆ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಹಾನಿರ್ದೇಶಕ ವಿ ಎಸ್ ಯಾದವ್, "ಎನ್ಎಲ್ಎಫ್ಟಿ ಬಿಸ್ವಮೋಹನ್ ಸಂಘಟನೆಯ ನಕ್ಸಲರು ರಾಜ್ಯದ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಈ ಸಂಘಟನೆಯು ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ" ಎಂದಿದ್ದಾರೆ.
ಇದನ್ನು ಓದಿ: ಇಸ್ಕಾನ್ ದೇಗುಲದಲ್ಲಿ ವೈಕುಂಠ ಏಕಾದಶಿ ಸಂಭ್ರಮ.. ಭಕ್ತರಿಗೆ ಆನ್‌ಲೈನ್ ಮೂಲಕ ದೇವರ ದರ್ಶನ
ಶರಣಾದ ಕಮಾಂಡರ್‌ಗಳು ಸ್ವಯಂ ಶೈಲಿಯ ಸಹಾಯಕ ಫಾರಿನ್ ಸೆಕ್ರೆಟರಿ ರಥನ್ ಕಲೈ ಅಲಿಯಾಸ್ ರೂಬೆನ್, ಸಹಾಯಕ ಸಂಘಟನಾ ಕಾರ್ಯದರ್ಶಿ ಜಾಯ್ ಸಾಧನ್ ಜಮಾತಿಯಾ ಅಲಿಯಾಸ್ ಜಾರಾ, ಸಹಾಯಕ ಪ್ರಚಾರ ಮತ್ತು ಮಾಹಿತಿ ಕಾರ್ಯದರ್ಶಿ ಮಧು ರಂಜನ್ ನೋಟಿಯಾ ಅಲಿಯಾಸ್ ಯಾಫುಂಗ್ ಮತ್ತು ಸಂಘಟನೆಯ ಸಿಬ್ಬಂದಿ ಉಪ ಮುಖ್ಯಸ್ಥ ಕುಕಿಲಾ ತ್ರಿಪುರ ಅಲಿಯಾಸ್ ಯರುಂಗ್ ಶರಣಾಗಿದ್ದಾರೆ.