ETV Bharat / bharat

ಒಟ್ಟಿಗೆ ನಾಲ್ಕು ಹುಲಿ ಮರಿಗಳು ಪತ್ತೆ: ತಾಯಿ ಹುಲಿಗಾಗಿ 300 ಅಧಿಕಾರಿಗಳು, ಸಿಬ್ಬಂದಿಯಿಂದ ಶೋಧ ಕಾರ್ಯ

ಆಂಧ್ರ ಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿ ನಾಲ್ಕು ಹುಲಿ ಮರಿಗಳು ಪತ್ತೆಯಾಗಿದ್ದು, ಇವುಗಳ ತಾಯಿ ಪತ್ತೆಗಾಗಿ ಕಳೆದ ಮೂರು ದಿನಗಳಿಂದ ಅರಣ್ಯಾಧಿಕಾರಿಗಳು ಶ್ರಮಿಸುತ್ತಿದ್ದಾರೆ. ಬೃಹತ್​ ಕಾರ್ಯಾಚರಣೆ ಕೈಕೊಳ್ಳಲಾಗಿದೆ.

four-tiger-cubs-found-in-andhra-search-on-for-their-mother
ಒಟ್ಟಿಗೆ ನಾಲ್ಕು ಹುಲಿ ಮರಿಗಳು ಪತ್ತೆ: ತಾಯಿ ಹುಲಿಗಾಗಿ 300 ಅಧಿಕಾರಿಗಳು, ಸಿಬ್ಬಂದಿಯಿಂದ ಶೋಧ ಕಾರ್ಯ
author img

By

Published : Mar 9, 2023, 10:20 PM IST

ನಂದ್ಯಾಲ (ಆಂಧ್ರ ಪ್ರದೇಶ): ಆಂಧ್ರ ಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿ ಭಾನುವಾರ ನಾಲ್ಕು ಹುಲಿ ಮರಿಗಳು ಪತ್ತೆಯಾಗಿವೆ. ಈ ಹುಲಿ ಮರಿಗಳನ್ನು ತಾಯಿಯ ಬಳಿಗೆ ಸೇರಿಸಲು ಅರಣ್ಯ ಇಲಾಖೆ ನಿರಂತರವಾಗಿ ಪ್ರಯತ್ನ ಮಾಡುತ್ತಿದೆ. ಅಂದಾಜು 300 ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಇಲ್ಲಿನ ಕೊತ್ತಪಲ್ಲಿ ಮಂಡಲದ ಪೆದ್ದ ಗುಮ್ಮದಪುರಂ ಬಳಿ ಈ ನಾಲ್ಕು ಹುಲಿ ಮರಿಗಳು ಕಂಡು ಬಂದಿವೆ. ಕಳೆದ ಭಾನುವಾರ ಬೆಳಗ್ಗೆ ಧಾರ್ಮಿಕ ವಿಧಿ ವಿಧಾನಗಳನ್ನು ಮಾಡಲು ಹೋದ ಯುವಕನೊಬ್ಬ ಇವುಗಳನ್ನು ಗಮನಿಸಿದ್ದಾನೆ. ಕೂಡಲೇ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾನೆ. ನೋಡಲು ತುಂಬಾ ಮುದ್ದಾಗಿರುವ ಈ ಹುಲಿ ಮರಿಗಳನ್ನು ಜನರು ತಮ್ಮ ಗ್ರಾಮಕ್ಕೆ ತಂದಿದ್ದಾರೆ. ಆದರೆ, ಏಕಕಾಲಕ್ಕೆ ನಾಲ್ಕು ಹುಲಿ ಮರಿಗಳು ಕಾಣಿಸಿಕೊಂಡಿದ್ದರಿಂದ ಸ್ಥಳೀಯರಲ್ಲಿ ಆತಂಕವೂ ಮನೆ ಮಾಡಿದೆ. ಸುತ್ತ - ಮುತ್ತಲಿನಲ್ಲೇ ತಾಯಿ ಹುಲಿ ಬರುವ ಭಯ ಸ್ಥಳೀಯರನ್ನು ಕಾಡುತ್ತಿದೆ.

ಮತ್ತೊಂದೆಡೆ, ನಾಲ್ಕು ಹುಲಿ ಮರಿಗಳ ಬಗ್ಗೆ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಂತೆಯೇ, ಮೂರು ದಿನಗಳಿಂದ ತಾಯಿ ಹುಲಿಗಾಗಿ ಪತ್ತೆ ಕಾರ್ಯ ನಡೆಸಲಾಗುತ್ತಿದೆ. ಇದೇ ವೇಳೆ ಮುಸಲಿಮಡುಗು ಗ್ರಾಮದ ಬಳಿ ಹುಲಿ ಕಂಡಿರುವುದಾಗಿ ಕೆಲ ಕುರಿಗಾಹಿಗಳು ಮಾಹಿತಿ ನೀಡಿದ್ದಾರೆ. ಆದ್ದರಿಂದ ಅಧಿಕಾರಿಗಳು ಇದರ ಶೋಧ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

300 ಸಿಬ್ಬಂದಿ ಶೋಧ ಕಾರ್ಯದಲ್ಲಿ ಭಾಗಿ: ನಾಲ್ಕು ಹುಲಿ ಮರಿಗಳನ್ನು ಅವುಗಳ ತಾಯಿ ಬಳಿಗೆ ಸೇರಿಸಬೇಕು ಮತ್ತು ಜನರಲ್ಲಿರುವ ಹುಲಿಯ ಆತಂಕವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅರಣ್ಯಾಧಿಕಾರಿಗಳು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ತಾಯಿ ಹುಲಿಯ ಪತ್ತೆಗಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದಂತೆ ಅರಣ್ಯ ಇಲಾಖೆಯ 300 ಮಂದಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

40 ಸಿಸಿ ಕ್ಯಾಮರಾಗಳ ಅಳವಡಿಕೆ: ಗುಮ್ಮದಪುರಂ ಗ್ರಾಮವು ನಲ್ಲಮಲ ಅರಣ್ಯ ಪ್ರದೇಶದ ಸಮೀಪದಲ್ಲಿದೆ. ಹೀಗಾಗಿ ಕೊತ್ತಪಲ್ಲಿ ಮತ್ತು ಆತ್ಮಕೂರು ಮಂಡಲ ವ್ಯಾಪ್ತಿಯ ನಲ್ಲಮಲ ಅರಣ್ಯ ಪ್ರದೇಶದಲ್ಲಿ 40 ಸಿಸಿ ಕ್ಯಾಮರಾಗಳನ್ನು ಅರಣ್ಯಾಧಿಕಾರಿಗಳು ಅಳವಡಿಸಿದ್ದಾರೆ. ತಾಯಿ ಹುಲಿ ಜಾಡು ಪತ್ತೆಗಾಗಿ ಎಲ್ಲ ರೀತಿಯಲ್ಲಿ ಹರಸಾಹಸವನ್ನು ಮಾಡಲಾಗುತ್ತಿದೆ.

ಹುಲಿ ಮರಿಗಳನ್ನು ಪತ್ತೆಯಾದ ಸ್ಥಳಕ್ಕೆ ತಾಯಿ ಬರಬಹುದು ಎಂದು ತಿಳಿದು ಅಧಿಕಾರಿಗಳು ಅದೇ ಸ್ಥಳದಲ್ಲೇ ಮರಿಗಳನ್ನು ಇರಿಸಿದ್ದರು. ಈಗಲೂ ಸಹ ಅದೇ ಸ್ಥಳದಲ್ಲಿ ಹೆಚ್ಚಿನ ನಿಗಾ ಅಧಿಕಾರಿಗಳು ಇರಿಸಲಾಗಿದೆ. ಮತ್ತೊಂದೆಡೆ, ಬೈರಲೂಟಿ ಅರಣ್ಯ ಇಲಾಖೆ ಕೇಂದ್ರಕ್ಕೆ ಹುಲಿ ಸ್ಥಳಾಂತರಿಸಿ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ನಾಲ್ಕು ಹುಲಿ ಮರಿಗಳು ಸಂಪೂರ್ಣವಾಗಿ ಆರೋಗ್ಯವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹುಲಿ ಹೆಜ್ಜೆ ಗುರುತು ಪತ್ತೆ: ಇದೇ ವೇಳೆ ಕಾರ್ಯಾಚರಣೆ ವೇಳೆ ಅರಣ್ಯಾಧಿಕಾರಿ ಹುಲಿಯೊಂದರ ಹೆಜ್ಜೆಗಳನ್ನು ಪತ್ತೆ ಹೆಚ್ಚಿದ್ದಾರೆ. ಆದರೆ, ಇವು ತಾಯಿ ಹುಲಿಯ ಹೆಜ್ಜೆ ಗುರುತುಗಳೇ ಅಥವಾ ಗಂಡು ಹುಲಿಯ ಹೆಜ್ಜೆ ಗುರುತುಗಳೇ ಎಂಬವುದು ಇನ್ನೂ ಖಚಿತವಾಗಿಲ್ಲ. ಆದ್ದರಿಂದ ಈ ಹೆಜ್ಜೆ ಗುರುತುಗಳ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: 10 ವರ್ಷಗಳಲ್ಲಿ 270 ಹುಲಿ ಸಾವು: 'ಹುಲಿ ರಾಜ್ಯ' ಪಟ್ಟ ಕಳೆದುಕೊಳ್ಳುತ್ತಾ ಮಧ್ಯಪ್ರದೇಶ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.