ಅಹ್ಮದ್‌ನಗರ(ಗುಜರಾತ್): ಮನ್ಮಾಡ್ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ದುರ್ಮರಡಕ್ಕೀಡಾಗಿ. ಅಹ್ಮದ್‌ನಗರ-ಮನ್ಮಾಡ್ ಹೆದ್ದಾರಿಯ ರಾಹುರಿ ತಾಲೂಕಿನ ಗುಹಾ ಫಟಾದಲ್ಲಿ ಈ ದುರಂತ ಸಂಭವಿಸಿದೆ.
ಅಪಘಾತದಲ್ಲಿ ಓರ್ವ ಪುರುಷ, ಇಬ್ಬರು ಮಹಿಳೆಯರು ಮತ್ತು ಮಗು ಅಸುನೀಗಿದ್ದಾರೆ. ನಗರದಿಂದ ಶಿರಡಿಗೆ ತೆರಳುತ್ತಿದ್ದ ಬಸ್ಗೂ ಪುಣೆಗೆ ತೆರಳುತ್ತಿದ್ದ ಕಾರ್ಗೂ ಅಪಘಾತ ಸಂಭವಿಸಿದೆ. ಅಪಘಾತದ ಭೀಕರತೆಗೆ ಕಾರ್ ನಜ್ಜುಗುಜ್ಜಾಗಿದೆ. ಇನ್ನುಳಿದಂತೆ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಬಗ್ಗೆ ವದಂತಿ ಹರಡುತ್ತಿರುವುದು ಖಂಡನೀಯ: ಮೋಹನ್ ರಾಮ್ ಸುಳ್ಳಿ