ETV Bharat / bharat

ಸ್ನೇಹಿತರಿಂದಲೇ ನಾಲ್ವರು ಅಪ್ರಾಪ್ತೆಯರ ಮೇಲೆ ಗ್ಯಾಂಗ್ ರೇಪ್! - crime news from tripura

ಸ್ನೇಹಿತರಿಂದಲೇ ನಾಲ್ವರು ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣ ತ್ರಿಪುರಾ ರಾಜ್ಯದ ರಾಜಧಾನಿ ಅಗರ್ತಲಾವನ್ನು ಬೆಚ್ಚಿಬೀಳಿಸಿದೆ.

four-minors-gang-raped-seven-held
ಸ್ನೇಹಿತರಿಂದಲೇ ನಾಲ್ವರು ಅಪ್ರಾಪ್ತೆಯರ ಮೇಲೆ ಗ್ಯಾಂಗ್ ರೇಪ್​, ಬಂಧನ
author img

By

Published : Jun 15, 2021, 7:10 AM IST

ಅಗರ್ತಲಾ, ತ್ರಿಪುರಾ: ನಾಲ್ಕು ಅಪ್ರಾಪ್ತೆಯರ ಮೇಲೆ ಸ್ನೇಹಿತರೇ ಅತ್ಯಾಚಾರವೆಸಗಿದ ಘಟನೆ ತ್ರಿಪುರಾ ರಾಜಧಾನಿ ಅಗರ್ತಲಾ ನಗರದ ಹೊರವಲಯದಲ್ಲಿ ನಡೆದಿದ್ದು, ದೂರು ದಾಖಲಾದ 24 ಗಂಟೆಯಲ್ಲಿ ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಚಂಪಕ್‌ನಗರದ ಮನೋಜಿತ್ ದೇಬ್​ಬರ್ಮಾ (19), ಬಿಶಾಲ್ ದೇಬ್​ಬರ್ಮಾ (21), ಚಂಕೈ ದೇಬ್​ಬರ್ಮಾ (21), ಬರ್ಧಾಮನ್ ಠಾಕೂರ್‌ಪಾರಾದ ಬೀರ್ ಕುಮಾರ್ ದೇಬ್​ಬರ್ಮಾ (21), ರಿಪನ್ ದೇಬ್​ಬರ್ಮಾ (19), ಬೆಲ್ಪಾರಾದ ಬಿಮಲ್ ದೇಬ್​ಬರ್ಮಾ (20), ಸಜಲ್ ದೇಬ್​ಬರ್ಮಾ (20) ಬಂಧಿತ ಆರೋಪಿಗಳಾಗಿದ್ದಾರೆ.

ಆರೋಪಿಗಳ ವಿರುದ್ಧ ಈಗ ಭಾರತೀಯ ದಂಡ ಸಂಹಿತೆ 376 (ಬಿ) ಮತ್ತು 120 (ಬಿ) ಮತ್ತು ಪೋಕ್ಸೋ ಆ್ಯಕ್ಟ್​ನ 2ನೇ ಸೆಕ್ಷನ್​​ನ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾನೂನಿನಡಿ ದೂರು ದಾಖಲಿಸಿಕೊಳ್ಳಲಾಗಿದೆ.

ನಡೆದಿದ್ದೇನು..

ಆರೋಪಿಗಳು ಮತ್ತು ಸಂತ್ರಸ್ತೆಯರು ಪರಸ್ಪರ ಸ್ನೇಹಿತರಾಗಿದ್ದು, ಮೂಲಗಳ ಪ್ರಕಾರ ಆರೋಪಿಗಳು ಬಾಲಕಿಯರನ್ನು ಪ್ರವಾಸಕ್ಕೆ ಆಹ್ವಾನಿಸಿದ್ದರು. ಸ್ನೇಹಿತರು ಎಂಬ ನಂಬಿಕೆಯ ಮೇಲೆ ಬಾಲಕಿಯರೂ ಪ್ರವಾಸಕ್ಕೆ ಒಪ್ಪಿದ್ದರು.

ಅಗರ್ತಲಾ ನಗರದಲ್ಲಿ ಲಾಕ್​ಡೌನ್ ಜಾರಿಯಲ್ಲಿದ್ದ ಕಾರಣ, ಅಗರ್ತಲಾ ನಗರದ ಹೊರವಲಯದಲ್ಲಿದ್ದ ಸರ್ಕಾರದ ರಬ್ಬರ್ ಪ್ಲಾಂಟೇಷನ್​ಗೆ ಬಾಲಕಿಯರನ್ನು ಆರೋಪಿಗಳು ಕರೆದೊಯ್ಯಿದ್ದಾರೆ. ಅನುಮಾನಗೊಂಡ ಬಾಲಕಿಯರು ಆಕ್ಷೇಪ ವ್ಯಕ್ತಪಡಿಸಿದಾಗ ಅವರನ್ನು ಥಳಿಸಲಾಗಿದೆ.

ಓದಿ: ಕೇಂದ್ರ ಸಚಿವೆ ಹೆಸರಿನಲ್ಲಿ ಯುವತಿಗೆ 80 ಲಕ್ಷ ವಂಚಿಸಿದ ವಿದೇಶಿ ಪ್ರಜೆ!

ರಾತ್ರಿಯಿಡೀ ಅವರನ್ನು ಕ್ರೂರವಾಗಿ ಹಿಂಸಿಸಿ, ಅತ್ಯಾಚಾರ ಎಸಗಿ, ರಬ್ಬರ್ ತೋಟದಲ್ಲೇ ಬಾಲಕಿಯರನ್ನು ಬಿಟ್ಟು ಪರಾರಿಯಾಗಿದ್ದಾರೆ. ಗಾಯಗೊಂಡಿದ್ದ ಬಾಲಕಿಯರು ಪಕ್ಕದಲ್ಲಿನ ಹೆದ್ದಾರಿಗೆ ತೆರಳಿ, ಆಟೋ ಮುಖಾಂತರ ಮನೆಗೆ ತೆರಳಿ, ವಿಚಾರ ತಿಳಿಸಿದ್ದಾರೆ.

ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಳಿಕ ಕೇವಲ 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.