ಚೆನ್ನೈ(ತಮಿಳುನಾಡು): ವಂಡಲೂರು ಮೃಗಾಲಯದಲ್ಲಿರುವ 4 ಸಿಂಹಗಳಿಗೆ ಡೆಲ್ಟಾ ರೂಪಾಂತರ ಕೋವಿಡ್ ಸೋಂಕು ತಗುಲಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಮೃಗಾಲಯದಲ್ಲಿರುವ ಸಿಂಹಗಳಿಂದ ಸಂಗ್ರಹಿಸಿದ ಮಾದರಿಗಳನ್ನು ಭೋಪಾಲ್‌ನ ರಾಷ್ಟ್ರೀಯ ಭದ್ರತಾ ಪ್ರಾಣಿ ರೋಗಗಳ ಸಂಸ್ಥೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಅದರ ವರದಿ ಬಂದಿದ್ದು, ಡೆಲ್ಟಾ ರೂಪಾಂತರಿ ವೈರಸ್ ಇರುವುದನ್ನ ಮೃಗಾಲಯದ ಅಧಿಕಾರಿಗಳು ಖಾತ್ರಿಪಡಿಸಿದ್ದಾರೆ.
ಒಟ್ಟು ನಾಲ್ಕು ಸಿಕ್ವಿನ್ಸ್‌ಗಳಲ್ಲಿ ಪ್ಯಾಂಗೊಲಿನ್ ಜಾತಿಯ ಬಿ.1.617.2ಗೆ ಸೇರಿವೆ. ಇವುಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಡೆಲ್ಟಾ ರೂಪಾಂತರಗಳು ಎಂದು ಗುರುತಿಸಿದೆ ಎಂದು ಮೃಗಾಲಯದ ಅಧಿಕಾರಿಯೊಬ್ಬರು ಕಳವಳ ವ್ಯಕ್ತಪಡಿಸಿದರು.
ಮೃಗಾಲಯದ ಸಿಬ್ಬಂದಿ ಮೇ 24ರಂದು 11 ಸಿಂಹಗಳ ಮಾದರಿಗಳನ್ನು ಟೆಸ್ಟ್‌ಗೆ ಕಳುಹಿಸಿದ್ದರು. ಮೇ 24ರಂದು ನಾಲ್ಕು ಮತ್ತು ಮೇ 29ರಂದು 7 ಸಿಂಹಗಳ ಸ್ಯಾಂಪಲ್‌ಗಳನ್ನು ಭೋಪಾಲ್‌ಗೆ ಕಳುಹಿಸಲಾಗಿತ್ತು. ಜೂನ್ 3ರಂದು ವರದಿ ಬಂದಿದ್ದು, ಅದರಲ್ಲಿ 9 ಸಿಂಹಗಳಿಗೆ ಕೋವಿಡ್ ಇರುವುದು ದೃಢಪಟ್ಟಿತ್ತು. ಸೋಂಕಿತ ಸಿಂಹಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೃಗಾಲಯದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.