ETV Bharat / bharat

12ರ ಬಾಲಕನೊಂದಿಗೆ ನಾಲ್ವರಿಂದ ಅಸ್ವಾಭಾವಿಕ ಲೈಂಗಿಕ ಕ್ರಿಯೆ: ಖಾಸಗಿ ಅಂಗಕ್ಕೆ ರಾಡ್ ಹಾಕಿ ಚಿತ್ರಹಿಂಸೆ - ದೆಹಲಿ ಮಹಿಳಾ ಆಯೋಗ

ಈಶಾನ್ಯ ದೆಹಲಿಯ ಸೀಲಂಪುರ ಪ್ರದೇಶದ ಅಜ್ಞಾತ ಸ್ಥಳದಲ್ಲಿ ಸೆ.18 ರಂದು 12 ವರ್ಷದ ಬಾಲಕನ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿ ದೌರ್ಜನ್ಯ ನಡೆಸಲಾಗಿದೆ.

four-boys-had-unnatural-sex-with-a-12-year-old-boy-in-delhi-seelampur-area
12ರ ಬಾಲಕನೊಂದಿಗೆ ನಾಲ್ವರಿಂದ ಅಸ್ವಾಭಾವಿಕ ಲೈಂಗಿಕ ಕ್ರಿಯೆ
author img

By

Published : Sep 25, 2022, 8:59 PM IST

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೀನ ಕೃತ್ಯವೊಂದು ಬೆಳಕಿಗೆ ಬಂದಿದೆ. 12 ವರ್ಷದ ಬಾಲಕನ ಮೇಲೆ ನಾಲ್ವರು ಕಾಮುಕರು ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿ ದೌರ್ಜನ್ಯ ಎಸಗಿದ್ದಾರೆ. ಅಷ್ಟೇ ಅಲ್ಲ, ಆ ಬಾಲಕನ ಖಾಸಗಿ ಅಂಗಕ್ಕೆ ರಾಡ್ ಹಾಕಿ ಥಳಿಸಿದ್ದಾರೆ.

ಈಶಾನ್ಯ ದೆಹಲಿಯ ಸೀಲಂಪುರ ಪ್ರದೇಶದ ಅಜ್ಞಾತ ಸ್ಥಳದಲ್ಲಿ ಸೆ.18ರಂದು ಈ ಘಟನೆ ನಡೆದಿದೆ. ಈ ಕೃತ್ಯದ ನಂತರ ಆ ಬಾಲಕ ಗಂಭೀರ ಸ್ಥಿತಿಯಲ್ಲಿ ತನ್ನ ಮನೆಗೆ ತಲುಪಿದ್ದಾರೆ. ಎರಡು ದಿನಗಳ ಕಾಲ ತನ್ನ ನೋವನ್ನು ಸಹಿಸಿಕೊಂಡಿದ್ದ. ನಂತರ ಅದನ್ನು ಸಹಿಸಲಾಗದೆ ತನ್ನ ಸಂಬಂಧಿಕರಿಗೆ ಘಟನೆಯನ್ನು ವಿವರಿಸಿದ ಬಳಿಕ ಈ ಸಂಬಂಧ ಕುಟುಂಬದವರು ಪೊಲೀಸರಿಗೆ ದೂರು ನೀಡಿ, ಸಂತ್ರಸ್ತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ.

ಸದ್ಯ ಬಾಲಕನ ಸ್ಥಿತಿ ಚಿಂತಾಜನಕವಾಗಿದೆ. ಇತ್ತ, ಮಗನ ಮೇಲೆ ನಡೆದ ದೌರ್ಜನ್ಯ ಸಂಬಂಧ ತಾಯಿ ದೆಹಲಿ ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರೆ. ಬಾಲಕನನ್ನು ನಾಲ್ವರು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಅಸ್ವಾಭಾವಿಕ ಸಂಭೋಗ ನಡೆಸಿದ್ದಾರೆ. ಇದಕ್ಕೆ ಪ್ರತಿರೋಧಿಸಿದಾಗ ದುಷ್ಕರ್ಮಿಗಳು ದೊಣ್ಣೆ ಮತ್ತು ಇಟ್ಟಿಗೆಗಳಿಂದ ಥಳಿಸಿ, ಖಾಸಗಿ ಅಂಗಕ್ಕೆ ರಾಡ್ ಹಾಕಿ ಚಿತ್ರಹಿಂಸೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ದೆಹಲಿ ಮಹಿಳಾ ಆಯೋಗವು ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ. ಸಂಬಂಧಪಟ್ಟ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳುವಂತೆ ಮಹಿಳಾ ಆಯೋಗ ಸೂಚಿಸಿದೆ. ಈಗಾಗಲೇ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಉಳಿದ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ.. ನಾಲ್ವರು ಆರೋಪಿಗಳ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.