ಚಂಡೀಗಢ (ಪಂಜಾಬ್) : ಭ್ರಷ್ಟಾಚಾರ ಆರೋಪದಡಿ ಬಂಧನಕ್ಕೊಳಗಾಗಿರುವ ಪಂಜಾಬ್ನ ಮಾಜಿ ಸಚಿವ ವಿಜಯ್ ಸಿಂಗ್ಲಾ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮೊಹಾಲಿ ನ್ಯಾಯಾಲಯ ಆದೇಶಿಸಿದೆ. ಮುಂದಿನ ವಿಚಾರಣೆಯನ್ನು ಜೂನ್ 10ಕ್ಕೆ ನಿಗದಿಪಡಿಸಲಾಗಿದೆ.
ಆರೋಗ್ಯ ಇಲಾಖೆಯ ಸಚಿವರಾಗಿದ್ದ ವಿಜಯ್ ಸಿಂಗ್ಲಾ ಅವರನ್ನು ಶೇ.1ರಷ್ಟು ಕಮಿಷನ್ ಪಡೆದ ಆರೋಪದ ಮೇಲೆ ಮೇ 24ರಂದು ಸಿಎಂ ಭಗವಂತ್ ಮಾನ್ ಸಚಿವ ಸಂಪುಟದಿಂದ ವಜಾ ಮಾಡಿದ್ದರು. ಇದೇ ವೇಳೆ ಪೊಲೀಸ್ ಕೇಸ್ ದಾಖಲಿಸುವಂತೆ ಸಿಎಂ ಆದೇಶಿಸಿದ್ದರು. ಅಂತೆಯೇ ಸಿಂಗ್ಲಾ ಅವರನ್ನು ಪೊಲೀಸರು ಬಂಧಿಸಿ ಮೂರು ದಿನಗಳ ಕಾಲ ತಮ್ಮ ಕಸ್ಟಡಿಗೆ ಪಡೆದಿದ್ದರು.
ಇದನ್ನೂ ಓದಿ: ಬಿ.ಎಲ್.ಸಂತೋಷ್ ನೇತೃತ್ವದಲ್ಲಿ ಹಾರ್ದಿಕ್ ಪಟೇಲ್ ಬಿಜೆಪಿ ಸೇರ್ಪಡೆ!?
ಇಂದು ಅವರನ್ನು ಮೊಹಾಲಿ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದರು. ಆಗ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ. ಇತ್ತ, ತಮ್ಮ ಕಸ್ಟಡಿಗೆ ಒಪ್ಪಿಸುವಂತೆ ಪೊಲೀಸರು ಮನವಿ ಮಾಡಿದ್ದರು. ಆದರೆ, ಇದನ್ನು ತಿರಸ್ಕರಿಸಿರುವ ನ್ಯಾಯಾಲಯವು ವಿಜಯ್ ಸಿಂಗ್ಲಾಗೆ ಕೊಂಚ ರಿಲೀಫ್ ನೀಡಿದೆ.
ಇದನ್ನೂ ಓದಿ: ಶೇ.1ರಷ್ಟು ಕಮಿಷನ್ ಆರೋಪ: ಪಂಜಾಬ್ ಆರೋಗ್ಯ ಸಚಿವ ವಜಾ, ಪೊಲೀಸರಿಂದ ಬಂಧನ