ಮುಂಬೈ(ಮಹಾರಾಷ್ಟ್ರ): ಭಾರತದ ಫುಟ್‌ಬಾಲ್ ತಂಡದ ಮಾಜಿ ಗೋಲ್ ಕೀಪರ್, 1956 ಮತ್ತು 1960ರ ಒಲಿಂಪಿಕ್ಸ್‌ನಲ್ಲಿ ಆಡಿದ್ದ ಎಸ್.ಎಸ್.ಬಾಬು ನಾರಾಯಣ್ (86) ಗುರುವಾರ ಮಹಾರಾಷ್ಟ್ರದ ಥಾಣೆಯಲ್ಲಿ ನಿಧನರಾಗಿದ್ದಾರೆ.
-
AIFF condoles the demise of ex-India goalkeeper SS Narayan
— Indian Football Team (@IndianFootball) August 5, 2021 " class="align-text-top noRightClick twitterSection" data="
Read 👉 https://t.co/OiWLxdJbdt#RIP #IndianFootball pic.twitter.com/z4FTpt9Mkq
">AIFF condoles the demise of ex-India goalkeeper SS Narayan
— Indian Football Team (@IndianFootball) August 5, 2021
Read 👉 https://t.co/OiWLxdJbdt#RIP #IndianFootball pic.twitter.com/z4FTpt9MkqAIFF condoles the demise of ex-India goalkeeper SS Narayan
— Indian Football Team (@IndianFootball) August 5, 2021
Read 👉 https://t.co/OiWLxdJbdt#RIP #IndianFootball pic.twitter.com/z4FTpt9Mkq
ಎಸ್.ಎಸ್.ಬಾಬು ನಾರಾಯಣ್ ನಿಧನದ ಕುರಿತು ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (ಎಐಎಫ್‌ಎಫ್) ತನ್ನ ಟ್ವೀಟ್ ಮತ್ತು ವೆಬ್‌ಸೈಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದೆ.
ಎಸ್.ಎಸ್.ಬಾಬು ನಾರಾಯಣ್ ಅವರು ಗುರುವಾರ ಮಹಾರಾಷ್ಟ್ರದ ಥಾಣೆಯಲ್ಲಿ ನಿಧನರಾಗಿದ್ದು ಅವರು ಇಬ್ಬರು ಪುತ್ರಿಯರು ಮತ್ತು ಒಬ್ಬ ಮಗನನ್ನು ಅಗಲಿದ್ದಾರೆ ಎಂದು ಎಐಎಫ್ಎಫ್ ತನ್ನ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದೆ.
ನಾರಾಯಣ್ 1956ರ ಮೆಲ್ಬೋರ್ನ್ ಒಲಿಂಪಿಕ್ಸ್‌ನಲ್ಲಿ ಯುಗೊಸ್ಲಾವಿಯ ವಿರುದ್ಧ ಪದಾರ್ಪಣೆ ಮಾಡಿದರು. 1956ರ ಮೆಲ್ಬೋರ್ನ್ ಒಲಿಂಪಿಕ್ಸ್ ಮತ್ತು 1960ರ ರೋಮ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ತಂಡದ ಸದಸ್ಯರಾಗಿದ್ದರು.
1964ರ ಎಎಫ್‌ಸಿ ಏಷ್ಯನ್ ಕಪ್, 1958ರ ಏಷ್ಯನ್ ಗೇಮ್ಸ್‌ನಲ್ಲಿ ಆಡಿದ್ದ ಅವರು ಸಂತೋಷ್ ಟ್ರೋಫಿಯಲ್ಲಿ 1956ರಿಂದ ಬಾಂಬೆಯನ್ನು ಪ್ರತಿನಿಧಿಸಿದ್ದರು. ನಾರಾಯಣ್ ನಿಧನಕ್ಕೆ ಎಐಎಫ್‌ಎಫ್ ಅಧ್ಯಕ್ಷ ಪ್ರಫುಲ್ ಪಟೇಲ್ ಸಂತಾಪ ಸೂಚಿಸಿದ್ದು, ಅವರು ಭಾರತೀಯ ಫುಟ್‌ಬಾಲ್‌ಗೆ ನೀಡಿರುವ ಕೊಡುಗೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.
ಇದನ್ನೂ ಓದಿ: Tokyo Olympics Women's Hockey: ಹಾಕಿಯಲ್ಲಿ ಇತಿಹಾಸ ಸೃಷ್ಟಿಗೆ ಹೊರಟ ಭಾರತೀಯ ವನಿತೆಯರಿಗೆ ನಿರಾಸೆ