ETV Bharat / bharat

ಅನುಮತಿ ಪಡೆದು ಪತ್ನಿ ಭೇಟಿಯಾದ ದೆಹಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ - chief minister manish sisodia

ಅಬಕಾರಿ ನೀತಿ ಹಗರಣದಲ್ಲಿ 8 ತಿಂಗಳಿನಿಂದ ಜೈಲಿ ಶಿಕ್ಷೆ ಅನುಭವಿಸುತ್ತಿರುವ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಇಂದು ಅನುಮತಿ ಪಡೆದು ತಮ್ಮ ಪತ್ನಿ ಭೇಟಿಯಾಗಿದ್ದಾರೆ.

ಪತ್ನಿಯನ್ನು ಭೇಟಿಯಾದ ದೆಹಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ

author img

By ETV Bharat Karnataka Team

Published : Nov 11, 2023, 10:06 PM IST

ನವದೆಹಲಿ: ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಸಿಬಿಐ ಪ್ರಕರಣದಲ್ಲಿ ಸೆರೆವಾಸ ಅನುಭವಿಸುತ್ತಿದ್ದ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಅನುಮತಿ ಮೇರೆಗೆ ಇಂದು ತಮ್ಮ ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿಯನ್ನು ಭೇಟಿಯಾಗಿದ್ದಾರೆ. ಸಿಸೋಡಿಯಾ ಅವರ ಪತ್ನಿ ಬಹುಕಾಲದಿಂದ ಮಲ್ಟಿಪಲ್ ಸ್ಕ್ಲೆರೋಸಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆ ನ್ಯಾಯಾಲಯದ ಅನುಮತಿ ಪಡೆದು ಇಂದು ಬೆಳಗ್ಗೆ ಮಥುರಾ ರಸ್ತೆಯಲ್ಲಿರುವ ತಮ್ಮ ನಿವಾಸಕ್ಕೆ ಮನೀಶ್ ಸಿಸೋಡಿಯಾ ಪೊಲೀಸ್​ ಸರ್ಪಗಾವಲೊಂದಿಗೆ ಬಂದು ಪತ್ನಿಯನ್ನು ವಿಚಾರಿಸಿದ್ದಾರೆ.

  • #WATCH | Police brings former Delhi Dy CM Manish Sisodia to meet his ailing wife as allowed by Rouse Avenue court

    Sisodia is meeting his ailing wife at the premises which is now officially allocated to Delhi Minister Atishi. The same premises were earlier allotted to him. pic.twitter.com/Dx9NsY4hXN

    — ANI (@ANI) November 11, 2023 " class="align-text-top noRightClick twitterSection" data=" ">

ಗುರುವಾರ ಮನೀಶ್ ಸಿಸೋಡಿಯಾ ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ಪತ್ನಿ ಭೇಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ರೋಸ್ ಅವೆನ್ಯೂ ನ್ಯಾಯಾಲಯದ ಸೆಷನ್ಸ್ ನ್ಯಾಯಧೀಶ ಎಂ.ಕೆ.ನಾಗ್ಪಾಲ್ ಸಿಸೋಡಿಯಾ ಅವರಿಗೆ ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿಯನ್ನು ಭೇಟಿ ಮಾಡಲು ಶುಕ್ರವಾರ ಅವಕಾಶ ನೀಡಿದ್ದರು. ಸಿಸೋಡಿಯ ಅರ್ಜಿಯಲ್ಲಿ 5 ದಿನದ ಮಟ್ಟಿಗೆ ಅನುಮತಿ ಕೇಳಿದ್ದರು. ಆದರೆ, ನ್ಯಾಯಾಲಯ ಶನಿವಾರ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಮಾತ್ರ ಪತ್ನಿಯೊಂದಿಗಿರಲು ಅನುಮತಿ ನೀಡಿತ್ತು.

ಜೂನ್​ನಲ್ಲಿ ಕೂಡ ಪತ್ನಿ ಭೇಟಿಯಾಗಿದ್ದ ಮಾಜಿ ಉಪಮುಖ್ಯಮಂತ್ರಿ ಮನೀಶ್: ಹೌದು ಈ ಹಿಂದೆ ಜೂನ್‌ನಲ್ಲಿಯೂ ಸಹ ದೆಹಲಿ ಹೈಕೋರ್ಟ್ ಸಿಸೋಡಿಯಾಗೆ ತಮ್ಮ ಪತ್ನಿಯ ಭೇಟಿಗೆ ಅವಕಾಶ ನೀಡಿತ್ತು. ಬೆಳಗ್ಗೆ 10:00 ರಿಂದ ಸಂಜೆ 5:00 ರವರೆಗೆ ಭೇಟಿಯಾಗಲು ಅನುಮತಿ ನೀಡಿತ್ತು. ಇದಾದ ಬಳಿಕ ಇಂದಿನ ಭೇಟಿ ಎರಡನೇ ಬಾರಿಯದ್ದಾಗಿದೆ.

  • VIDEO | AAP leader Manish Sisodia leaves from his residence in Delhi after meeting his ailing wife.

    Sisodia, arrested by ED in connection with excise policy case, was allowed by the Rouse Avenue Court on Friday to meet his ailing wife at his residence. pic.twitter.com/XV1C4ETfmv

    — Press Trust of India (@PTI_News) November 11, 2023 " class="align-text-top noRightClick twitterSection" data=" ">

ಮಾಜಿ ಉಪಮುಖ್ಯಮಂತ್ರಿ ಮನೀಶ್ ಬಂಧನಕ್ಕೆ ಕಾರಣ?: ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಸಿಬಿಐ ಪ್ರಕರಣದಲ್ಲಿ ಸಿಸೋಡಿಯಾ ಅವರು 8 ತಿಂಗಳಿನಿಂದ ತಿಹಾರ್ ಜೈಲಿನಲ್ಲಿ ಇದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳಷ್ಟೇ ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಲಯದಲ್ಲಿ ವಿಚಾರಣೆ ಬಳಿಕ ನ್ಯಾಯಾಂಗ ಬಂಧನವನ್ನು ನವೆಂಬರ್ 22 ರವರೆಗೆ ವಿಸ್ತರಿಸಿದೆ. ಇನ್ನು ರೋಸ್ ಅವೆನ್ಯೂ ನ್ಯಾಯಾಲಯ ಮತ್ತು ದೆಹಲಿ ಹೈಕೋರ್ಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ, ಮನೀಶ್ ಸಿಸೋಡಿಯಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ಕಳೆದ ಎರಡು ತಿಂಗಳಿಂದ ನಡೆಯುತ್ತಿದೆ.

ಸುಪ್ರೀಂ ಕೋರ್ಟ್‌ನಲ್ಲಿಯೂ ಸಹ ಇಡಿ ಮತ್ತು ಸಿಬಿಐ ಮನೀಶ್​ ಸಿಸೋಡಿಯಾರ ಜಾಮೀನು ಅರ್ಜಿಯನ್ನು ಹಲವು ವಾದಗಳೊಂದಿಗೆ ವಿರೋಧಿಸಿವೆ. ಇಡಿ ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್, ಇಡೀ ಹಗರಣದಿಂದ ಆಮ್ ಆದ್ಮಿ ಪಕ್ಷಕ್ಕೆ ಲಾಭವಾಗಿದ್ದರೆ ಆಮ್ ಆದ್ಮಿ ಪಕ್ಷವನ್ನು ಯಾಕೆ ಆರೋಪಿಯನ್ನಾಗಿ ಮಾಡಲಿಲ್ಲ ಎಂದು ಪ್ರಶ್ನಿಸಿದೆ. ಸುಪ್ರೀಂ ಕೋರ್ಟ್‌ನ ಹೇಳಿಕೆ ನಂತರ, ಈಗ ಇಡಿ ಆಮ್ ಆದ್ಮಿ ಪಕ್ಷವನ್ನೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯನ್ನಾಗಿ ಪರಿಗಣಿಸುತ್ತಿದೆ.

ಇದನ್ನೂ ಓದಿ: ಉತ್ತರಾಖಂಡ: ಏಕರೂಪ ನಾಗರಿಕ ಸಂಹಿತೆ ಮಸೂದೆ ಅಂಗೀಕಾರಕ್ಕೆ ದೀಪಾವಳಿ ನಂತರ ವಿಶೇಷ ಅಧಿವೇಶನ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.