ETV Bharat / bharat

ಛತ್ತೀಸ್​ಗಢ ವಿಧಾನಸಭೆ ನೂತನ ಸ್ಪೀಕರ್​ ಆಗಿ ಮಾಜಿ ಸಿಎಂ ರಮಣ್​ ಸಿಂಗ್​ ಆಯ್ಕೆ - ಮುಖ್ಯಮಂತ್ರಿ ರಮಣ್​ ಸಿಂಗ್​

ಛತ್ತೀಸ್​ಗಢದ ವಿಧಾನಸಭೆ ನೂತನ ಸ್ಪೀಕರ್​ ಆಗಿ ಮಾಜಿ ಮುಖ್ಯಮಂತ್ರಿ ರಮಣ್​ ಸಿಂಗ್​ ಆಯ್ಕೆ ಮಾಡಲಾಗಿದೆ

former-chhattisgarh-cm-dr-raman-singh-becomes-assembly-speaker-unanimously-elected-speaker
ಛತ್ತೀಸ್​ಗಢ ವಿಧಾನಸಭೆ ನೂತನ ಸ್ಪೀಕರ್​ ಆಗಿ ಮಾಜಿ ಸಿಎಂ ರಮಣ್​ ಸಿಂಗ್​ ಆಯ್ಕೆ
author img

By ETV Bharat Karnataka Team

Published : Dec 19, 2023, 9:54 PM IST

ರಾಯಪುರ : ಛತ್ತೀಸ್​ಗಢದ ವಿಧಾನಸಭೆ ಸ್ಪೀಕರ್​ ಆಗಿ ಮಾಜಿ ಮುಖ್ಯಮಂತ್ರಿ ರಮಣ್​ ಸಿಂಗ್​ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸ್ಪೀಕರ್​ ಸ್ಥಾನಕ್ಕೆ ಅವರು ಭಾನುವಾರ ನಾಮಪತ್ರ ಸಲ್ಲಿಸಿದ್ದರು. ಪ್ರತಿಪಕ್ಷ ಕಾಂಗ್ರೆಸ್​ ಕೂಡ ರಮಣ್​ ಸಿಂಗ್​ ಅವರಿಗೆ ಬೆಂಬಲ ಸೂಚಿಸಿದೆ. ಇದರಿಂದ ಸ್ಪೀಕರ್​ ಆಯ್ಕೆ ಸುಲಭವಾಗಿ ಜರುಗಿದೆ.

ಬಿಜೆಪಿ ಹಿರಿಯ ನಾಯಕರಾದ ರಮಣ್​ ಸಿಂಗ್​ ರಾಜ್ಯದ ಆರನೇ ವಿಧಾನ ಸಭಾಧ್ಯಕ್ಷರಾಗಿದ್ದಾರೆ. ಶಾಸಕಾಂಗ ಪಕ್ಷದ ನಾಯಕ ವಿಷ್ಣುದೇವ್ ಸಾಯಿ ಮತ್ತು ವಿರೋಧ ಪಕ್ಷದ ನಾಯಕ ಡಾ.ಚರಂದಾಸ್ ಮಹಂತ್ ಅವರು ರಮಣ್ ಸಿಂಗ್ ಅವರನ್ನು ಕರೆದುಕೊಂಡು ಹೋಗಿ ಸಭಾಧ್ಯಕ್ಷರ ಪೀಠದಲ್ಲಿ ಕುಳ್ಳಿರಿಸಿ ಅಭಿನಂದಿಸಿದರು. ಅಧಿಕಾರ ಸ್ವೀಕರಿಸಿದ ರಮಣ್ ಸಿಂಗ್ ಅವರು ಪಕ್ಷ ಮತ್ತು ವಿರೋಧ ಪಕ್ಷದ ಶಾಸಕರಿಗೆ ಅಭಿನಂದನೆ ಸಲ್ಲಿಸಿದ್ದರು.

ರಮಣ್​ ಸಿಂಗ್​ ಹಿನ್ನಲೆ : ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಜನಂದಗಾಂವ್ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಿಎಂ ರಮಣ್ ಸಿಂಗ್ ಭರ್ಜರಿ ಗೆಲುವು ದಾಖಲಿಸಿದ್ದರು. ರಮಣ್​ ಕಾಂಗ್ರೆಸ್ ಅಭ್ಯರ್ಥಿ ಗಿರೀಶ್ ದೇವಾಂಗನ್ ಅವರನ್ನು 45084 ಮತಗಳ ಅಂತರದಿಂದ ಸೋಲಿಸಿದ್ದರು. ರಮಣ್ ಸಿಂಗ್ 1952ರ ಅಕ್ಟೋಬರ್​ 15ರಂದು ಕಬೀರ್​ಧಾಮ್​ ಜಿಲ್ಲೆಯ ರಾಂಪುರದಲ್ಲಿ ಜನಿಸಿದರು. ತಂದೆ ವಿಘ್ನಹರನ್ ಸಿಂಗ್ ಠಾಕೂರ್ ಮತ್ತು ತಾಯಿ ಸುಧಾ ಸಿಂಗ್. ರಮಣ್ ಸಿಂಗ್, ವೀಣಾ ಸಿಂಗ್ ಅವರನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಮಗ ಅಭಿಷೇಕ್ ಸಿಂಗ್ ಸಂಸದರಾಗಿದ್ದರು.

ರಮಣ್​ ಸಿಂಗ್​ ರಾಜಕೀಯ ಜೀವನ : ರಮಣ್ ಸಿಂಗ್ ಬ್ಯಾಚುಲರ್ ಆಫ್ ಆಯುರ್ವೇದಿಕ್, ಬಿಎಎಂಎಸ್ ಪದವಿ ಪಡೆದುಕೊಂಡಿದ್ದಾರೆ. 1975ರಲ್ಲಿ ವೈದ್ಯರಾಗಿ ತಮ್ಮ ವೃತ್ತಿ ಆರಂಭಿಸಿದರು. ಇದಾದ ಒಂದು ವರ್ಷದಲ್ಲಿ 1976-77ರಲ್ಲಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದರು. 1983 - 84ರಲ್ಲಿ ಕವರ್ಧಾ ಪುರಸಭೆಯ ಶಿತಾಳ ವಾರ್ಡ್‌ನಿಂದ ಸ್ಪರ್ಧಿಸಿ ಮೊದಲ ಬಾರಿಗೆ ಸದಸ್ಯರಾಗಿ ಆಯ್ಕೆಯಾದರು. 1990 ಮತ್ತು 1993ರಲ್ಲಿ ಅವರು ಅವಿಭಜಿತ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸಿದರು. 1999ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿದರು.

ನಂತರ ಅಟಲ್ ನೇತೃತ್ವದ ಸರ್ಕಾರದಲ್ಲಿ ರಮಣ್ ಸಿಂಗ್ ಸಚಿವರಾಗಿದ್ದರು. 1999 ರಿಂದ 2003 ರವರೆಗೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ 2003ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಬಳಿಕ 2008 ಮತ್ತು 2013ರಲ್ಲಿಯೂ ಸಿಎಂ ಆಗಿ ಆಯ್ಕೆಯಾದರು. ಒಟ್ಟು ಮೂರು ಬಾರಿ ಸಿಎಂ ಆಗಿ ಸೇವೆ ಸಲ್ಲಿಸಿದ ಅನುಭವ ರಮಣ್​ ಸಿಂಗ್​ ಅವರಿಗಿದೆ.

ಇದನ್ನೂ ಓದಿ : 'ಇಂಡಿಯಾ' ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಖರ್ಗೆ ಹೆಸರು ಪ್ರಸ್ತಾಪಿಸಿದ ಮಮತಾ, ಕೇಜ್ರಿವಾಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.