ETV Bharat / bharat

ಸಮಾಧಿಗಳ ನಡುವೆ ಗುಡಿಸಲು.. 30 ವರ್ಷಗಳಿಂದ ಶವಗಳ ಅಂತ್ಯಸಂಸ್ಕಾರ ನಡೆಸುವ ಅಚ್ಚಮ್ಮ

ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡಿರುವ ಮಹಿಳೆಯೋರ್ವರು ಕಳೆದ 30 ವರ್ಷಗಳಿಂದ ಸ್ಮಶಾನದಲ್ಲೇ ಜೀವನ ನಡೆಸುತ್ತಿದ್ದಾರೆ.

Acchamma
Acchamma
author img

By

Published : Aug 29, 2022, 9:54 PM IST

ಪ್ರಕಾಶಂ(ಆಂಧ್ರಪ್ರದೇಶ): ಆಂಧ್ರದ ಪ್ರಕಾಶಂ ಜಿಲ್ಲೆಯ ಕನಿಗಿರಿಯಲ್ಲಿ ಜೀವನೋಪಾಯಕ್ಕಾಗಿ ಮಹಿಳೆಯೊಬ್ಬರು ಸ್ಮಶಾನದಲ್ಲಿ ಕಾವಲುಗಾರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯಾವುದೇ ಸಂಬಂಧಿಕರಿಲ್ಲದ ಕಾರಣ ಸ್ಮಶಾನದಲ್ಲಿಯೇ ಕಳೆದ 30 ವರ್ಷಗಳಿಂದ ಹಗಲಿರುಳು ಕಳೆಯುತ್ತಿದ್ದಾರೆ. ಆದರೀಗ ಅನಾರೋಗ್ಯಕ್ಕೀಡಾಗಿದ್ದು ಸರ್ಕಾರದ ಸಹಾಯಹಸ್ತವನ್ನು ಎದುರು ನೋಡುತ್ತಿದ್ದಾರೆ.

ಸ್ಮಶಾನದಲ್ಲಿ ಕಾವಲು ಕಾಯುವುದೇ ತನ್ನ ವೃತ್ತಿಯನ್ನಾಗಿ ಮಾಡಿಕೊಂಡಿರುವ ಅಚ್ಚಮ್ಮ ಅವರದ್ದು ಸಮಾಧಿಗಳ ನಡುವೆ ಪುಟ್ಟ ಗುಡಿಸಲಿನ ಬದುಕು. ಕಳೆದ ಮೂವತ್ತು ವರ್ಷಗಳಿಂದಲೂ ಇವರು ಅನೇಕ ಮೃತದೇಹಗಳ ಶವಸಂಸ್ಕಾರ ಮಾಡಿದ್ದಾರೆ.

ಕನಿಗಿರಿ ಪಟ್ಟಣದ ಅಚ್ಚಮ್ಮ ತಮ್ಮ ಪತಿ ಜೊತೆ ವಾಸವಾಗಿದ್ದರು. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ಅವರು ನಿಧನರಾಗಿದ್ದರು. ಸಂಬಂಧಿಕರಿಂದ ಅವಮಾನ ಮತ್ತು ಬಡತನದಿಂದ ಅಚ್ಚಮ್ಮ ಕಂಗೆಟ್ಟು ಹೋಗುತ್ತಾರೆ. ಆದರೂ, ಆತ್ಮವಿಶ್ವಾಸ ಕಳೆದುಕೊಳ್ಳದೆ ಮನಸ್ಸು ಗಟ್ಟಿ ಮಾಡಿಕೊಂಡು ಬದುಕಲು ನಿರ್ಧರಿಸುತ್ತಾರೆ.

ಇದನ್ನೂ ಓದಿ: ಅಂತ್ಯಸಂಸ್ಕಾರದ ಸಂದರ್ಭ ನೀರಿನಲ್ಲಿ ಕೊಚ್ಚಿ ಹೋದ ಮೃತದೇಹ: ವಿಡಿಯೋ

ಸ್ಮಶಾನದಲ್ಲಿ ಕಾವಲುಗಾರರಾದ ಇವರದ್ದು ಸಮಾಧಿಗಳ ನಡುವೆ ಏಕಾಂಗಿ ಜೀವನ. ಶವಗಳಿಗೋಸ್ಕರ ಹೊಂಡ ತೋಡಿದಾಗ ಸಿಗುವ ಸ್ಪಲ್ಪ ಹಣವೇ ಬದುಕಿನ ಬಂಡಿ ಸಾಗಲು ಆಧಾರ. ಈ ಬಗ್ಗೆ ಮಾತನಾಡಿರುವ ಅಚ್ಚಮ್ಮ, ಕಳೆದ ಮೂವತ್ತು ವರ್ಷಗಳಿಂದ ಇಲ್ಲಿದ್ದೇನೆ. ನನ್ನ ಆರೋಗ್ಯ ಈಗ ಸರಿಯಿಲ್ಲ. ಸ್ವಂತಃ ಮನೆಯೂ ಎನಗಿಲ್ಲ. ಸರ್ಕಾರ ಸಹಾಯ ಮಾಡಿದರೆ ಒಳ್ಳೆಯದು ಎಂದರು.

ಕೋವಿಡ್ ಸಂದರ್ಭದಲ್ಲಿ ಇಡೀ ಜಗತ್ತು ತಲ್ಲಣಗೊಂಡಿದ್ದರೂ ಅದಕ್ಕೆ ತಲೆಕೆಡಿಸಿಕೊಳ್ಳದ ಅಚ್ಚಮ್ಮ ಅನೇಕ ಶವಗಳನ್ನು ಧೈರ್ಯದಿಂದ ಹೂಳಿದ್ದಾರೆ. ಆದರೆ, ಇದೀಗ ವಯಸ್ಸು ಹೆಚ್ಚಾಗಿದ್ದು ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.