ETV Bharat / bharat

Sitharaman to GIFT City: 'ಗಿಫ್ಟ್ ಸಿಟಿ'ಗೆ ಇಂದು ಉನ್ನತ ಅಧಿಕಾರಿಗಳೊಂದಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ

ಗುಜರಾತ್​​ ಇಂಟರ್‌ನ್ಯಾಶನಲ್ ಫೈನಾನ್ಸ್ ಟೆಕ್ - ಸಿಟಿ (GIFT City)ಗೆ ಇಂದು ಏಳು ಉನ್ನತ ಅಧಿಕಾರಿಗಳೊಂದಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಲಿದ್ದಾರೆ.

ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
author img

By

Published : Nov 20, 2021, 10:52 AM IST

ನವದೆಹಲಿ: ದೇಶದ ಮೊದಲ ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರದ (Country’s First International Financial Services Centre -IFSC) ಅಭಿವೃದ್ಧಿ ಮತ್ತು ಬೆಳವಣಿಗೆ ಕುರಿತು ಚರ್ಚಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಗುಜರಾತ್‌ನ ಗಾಂಧಿ ನಗರದಲ್ಲಿರುವ 'ಗಿಫ್ಟ್ ಸಿಟಿ'ಗೆ ( Nirmala Sitharaman to visit GIFT City) ಹಣಕಾಸು ಸಚಿವಾಲಯ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಏಳು ಉನ್ನತ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಲಿದ್ದಾರೆ.

ಗುಜರಾತ್​​ ಇಂಟರ್‌ನ್ಯಾಶನಲ್ ಫೈನಾನ್ಸ್ ಟೆಕ್ -ಸಿಟಿ (GIFT City -Gujarat International Finance Tec-City)ಗೆ ಬರುವ ಸೀತಾರಾಮನ್​ಗೆ ಹಣಕಾಸು ಕಾರ್ಯದರ್ಶಿ ಟಿ.ವಿ.ಸೋಮನಾಥನ್, ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಜಿತ್ ಸೇಠ್ ಸೇರಿದಂತೆ 7 ಅಧಿಕಾರಿಗಳು ಸಾಥ್​ ನೀಡಲಿದ್ದಾರೆ.

ಇದನ್ನೂ ಓದಿ: 4 ಕೋಟಿಗೂ ಅಧಿಕ ಜನರನ್ನು ತಲುಪಿದ ಬಿಟಿಎಸ್: 5,000 ಕೋಟಿ ರೂ. ಬಂಡವಾಳ ನಿರೀಕ್ಷೆ

ದೇಶದೊಳಗಿನ ಭಾರತೀಯ ಕಾರ್ಪೊರೇಟ್‌ಗಳಿಗೆ ಜಾಗತಿಕ ಹಣಕಾಸು ಸೇವೆಗಳಿಗೆ ಗೇಟ್‌ವೇ ಆಗಿ ಗಿಫ್ಟ್ ಹಾಗೂ ಐಎಫ್​ಎಸ್​ಸಿ ಪಾತ್ರ, ಜಾಗತಿಕ ಹಣಕಾಸು ವ್ಯವಹಾರವನ್ನು ಭಾರತಕ್ಕೆ ಹೇಗೆ ಆಕರ್ಷಿಸುವುದು ಮತ್ತು ಗಿಫ್ಟ್ ನಗರವನ್ನು ಜಾಗತಿಕ ಫಿನ್‌ಟೆಕ್ ಕೇಂದ್ರವಾಗಿ ಹೇಗೆ ಅಭಿವೃದ್ಧಿಪಡಿಸುವುದು ಎಂಬುದರ ಕುರಿತು ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಗಿಫ್ಟ್ ಸಿಟಿಯಲ್ಲಿ ಪ್ರಮುಖ ಮೂಲಸೌಕರ್ಯ ಸೌಲಭ್ಯಗಳ ಅಭಿವೃದ್ಧಿಯ ಬಗ್ಗೆಯೂ ಸೀತಾರಾಮನ್ ಪರಿಶೀಲನೆ ನಡೆಸಲಿದ್ದಾರೆ. ಜೊತೆಗೆ, ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವಾರು ಪಾಲುದಾರರು ಮತ್ತು ಕಂಪನಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.