ಚಮೋಲಿ(ಉತ್ತರಾಖಂಡ): ರಸ್ತೆ ನಿರ್ಮಾಣಕ್ಕಾಗಿ ಭಾರಿ ತೂಕದ ಜೆಸಿಬಿ ಯಂತ್ರವನ್ನು ಅಲಕಾನಂದದ ನದಿಯ ಒಂದು ದಂಡೆಯಿಂದ ಮತ್ತೊಂದು ದಂಡೆಗೆ ಹಗ್ಗದ ಸಹಾಯದಿಂದ ಸಾಗಿಸಿದ್ದು ಅಚ್ಚರಿ ಮೂಡಿಸಿದೆ.
ರಸ್ತೆ ಕಾಮಗಾರಿಗೆ ಜೆಸಿಬಿ ರವಾನೆ
2010 ರಲ್ಲಿ ಬೆಟ್ಟಗುಡ್ಡದಿಂದ ಆವೃತವಾಗಿರುವ ದುರ್ಗಮ ಡಿಂಗ್-ತಪೋನ್ನಲ್ಲಿ 6 ಕಿಲೋಮೀಟರ್ ರಸ್ತೆ ನಿರ್ಮಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಸದ್ಯ ಈ ರಸ್ತೆ ನಿರ್ಮಾಣ ಕಾರ್ಯ ಮಾನವ ಶ್ರಮದಿಂದಲೇ ನಡೆಯುತ್ತಿದೆ. ಇಲ್ಲಿ ಒಂದೆಡೆಯಿಂದ ಮತ್ತೊಂದೆಡೆಗೆ ಸಂಚರಿಸಲು ಅಲಕನಂದಾ ನದಿಗೆ ಸೇತುವೆ ಇರದ ಕಾರಣ ಜೆಸಿಬಿ ಯಂತ್ರವನ್ನು ನದಿಯ ಎರಡೂ ಬದಿಗೆ ಹಗ್ಗ ಕಟ್ಟಿ ಭಗೀರಥ ಪ್ರಯತ್ನ ನಡೆಸಿ ಸಾಗಿಸಲಾಗಿದೆ.
ಈ ಯಂತ್ರದ ಸಹಾಯದಿಂದ ರಸ್ತೆ ನಿರ್ಮಾಣ ಕಾರ್ಯ ವೇಗ ಪಡೆದುಕೊಂಡಿದೆ.
ಇದನ್ನೂ ಓದಿ: ಕೋವಿಡ್ಗೆ ಹೆದರಿ 55 ವರ್ಷದ ಮಹಿಳೆ ಆತ್ಮಹತ್ಯೆ