ಕಲ್ಯಾಣ: ನೀರು ತುಂಬಿದ್ದ ಕ್ವಾರಿಯಲ್ಲಿ ಮುಳುಗಿ ಅತ್ತೆ, ಸೊಸೆ, ಇಬ್ಬರು ಮೊಮ್ಮಕ್ಕಳು ಹಾಗೂ ಓರ್ವ ಸಂಬಂಧಿ ಸೇರಿ ಒಂದೇ ಕುಟುಂಬದ ಐವರು ಮೃತಪಟ್ಟರು. ಮಹಾರಾಷ್ಟ್ರದ ದೊಂಬಿವಿಲಿ ಸಮೀಪದ ಸಂದಾಪ ಗ್ರಾಮದಲ್ಲಿ ಶನಿವಾರ ದುರಂತ ಸಂಭವಿಸಿದೆ.
55 ವರ್ಷದ ಮಹಿಳೆ ತನ್ನ ಸೊಸೆಯ ಜೊತೆ ಬಟ್ಟೆ ತೊಳೆಯಲು ಕ್ವಾರಿಗೆ ತೆರಳಿದ್ದರು. ಇಬ್ಬರು ಮಕ್ಕಳು ಮತ್ತು ಓರ್ವ ಸಂಬಂಧಿ ಬಾಲಕ ಕೂಡಾ ಒಟ್ಟಿಗಿದ್ದರು. ಈ ಸಂದರ್ಭದಲ್ಲಿ ದಂಡೆಯ ಮೇಲೆ ಕುಳಿತಿದ್ದ ಬಾಲಕನೋರ್ವ ಆಯತಪ್ಪಿ ನೀರಿಗೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಇನ್ನುಳಿದ ನಾಲ್ವರೂ ನೀರಿಗೆ ಜಿಗಿದಿದ್ದಾರೆ. ದುರದೃಷ್ಟವಶಾತ್ ಐವರೂ ನೀರಲ್ಲಿ ಮುಳುಗಿ ಅಸುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅತ್ತೆ ಮೀರಾ ಗಾಯಕ್ವಾಡ್ (55), ಸೊಸೆ ಅಪೇಕ್ಷಾ (30), ಮೊಮ್ಮಕ್ಕಳಾದ ಮಯೂರೇಶ್ (15), ಮೋಕ್ಷಾ (15) ಮತ್ತು ಸಂಬಂಧಿ ನಿಲೇಶ್ ಗಾಯಕ್ವಾಡ್ (15) ಮೃತರೆಂದು ಗುರುತಿಸಲಾಗಿದೆ. ಸ್ಥಳೀಯರ ಮಾಹಿತಿ ಮೇರೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಶವಗಳನ್ನು ಮೇಲೆತ್ತಿದ್ದಾರೆ.
ಇದನ್ನೂ ಓದಿ: ನೋಡಿ! ವಯನಾಡು ಘಾಟ್ನಲ್ಲಿ ಯಮನಂತೆ ಬಂದು ಬೈಕ್ಗೆ ಅಪ್ಪಳಿಸಿದ ಬಂಡೆ; ಸವಾರ ಸಾವು