ಕಂಕೇರ್(ಛತ್ತೀಸ್ಗಡ): ಕಂಕೇರ್ ಜಿಲ್ಲೆಯಲ್ಲಿ ಭಾನುವಾರ ಮಧ್ಯರಾತ್ರಿ ಸುರಿದ ಮಳೆಗೆ ಮನೆಯ ಗೋಡೆ ಕುಸಿದು ಒಂದೇ ಕುಟುಂಬದ ತಂದೆ-ತಾಯಿ ಮತ್ತು ಮೂವರು ಮಕ್ಕಳು ಮೃತಪಟ್ಟಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಮಳೆಯಿಂದಾಗಿ ತುಂಬಿದ್ದ ನದಿ ದಾಟಿ ಸ್ಥಳಕ್ಕೆ ತೆರಳಲು ಪೊಲೀಸರು ಸಾಕಷ್ಟು ಹರಸಾಹಸಪಟ್ಟರು. ಗೋಡೆ ಕುಸಿದ ವೇಳೆ ಎಲ್ಲರೂ ಮನೆಯಲ್ಲಿ ಮಲಗಿದ್ದರು ಎಂದು ಹೇಳಲಾಗುತ್ತಿದೆ.
48 ಗಂಟೆ ನಿರಂತರ ಮಳೆ: ಕಂಕೇರ್ ಜಿಲ್ಲೆಯಲ್ಲಿ ಕಳೆದ 48 ಗಂಟೆಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಇದರಿಂದಾಗಿ ನದಿ, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಬ್ಲಾಕ್ ಮತ್ತು ಜಿಲ್ಲಾ ಕೇಂದ್ರದಿಂದ ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಕವರ್ಧಾದಲ್ಲಿ ಗೋಡೆ ಕುಸಿದು ಬಾಲಕಿ ಸಾವನ್ನಪ್ಪಿದ್ದಾಳೆ.
ಪ್ರಸಕ್ತ ಮಾನ್ಸೂನ್ ಅವಧಿಯಲ್ಲಿ, ಜೂನ್ 1 ರಿಂದ ಈ ಜಿಲ್ಲೆಯಲ್ಲಿ ಸರಾಸರಿ 997.4 ಮಿ.ಮೀ ಮಳೆ ದಾಖಲಾಗಿದೆ. ನಿನ್ನೆ ರಾತ್ರಿಯಿಂದ ಜಿಲ್ಲೆಯ ಎಲ್ಲಾ ತಾಲೂಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಪಖಂಜೂರ್ ತಹಸಿಲ್‌ನಲ್ಲಿ ಅತಿ ಹೆಚ್ಚು ಮಳೆ 71.3 ಮಿ.ಮೀ ದಾಖಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿ ಮಾಹಿತಿ ಪ್ರಕಾರ ಆಗಸ್ಟ್ 14 ರವರೆಗೆ ಕಂಕೇರ್ನಲ್ಲಿ 15.9 ಮಿ.ಮೀ, ಭಾನುಪ್ರತಾಪುರ 16.5 ಮಿಮೀ, ದುರ್ಗುಕೊಂಡಲ್ 15.7 ಮಿ.ಮೀ, ಅಂತಗಢ 40 ಮಿ.ಮೀ ಮತ್ತು ನರಹರಪುರ 12.9 ಮಿ.ಮೀ ಸರಾಸರಿ ಮಳೆ ದಾಖಲಾಗಿದೆ.
ಇದನ್ನೂ ಓದಿ : ದಾಂಡೇಲಿಯಲ್ಲಿ ಮೊಸಳೆ ಎಳೆದೊಯ್ದಿದ್ದ ವ್ಯಕ್ತಿ ಶವವಾಗಿ ಪತ್ತೆ