ಅಮೃತಸರ (ಪಂಜಾಬ್) : ಗ್ಯಾಂಗ್‌ಸ್ಟರ್ ಜಗ್ಗು ಭಗವಾನ್ ಪುರಿಯಾ ಸಹಚರರು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿರುವ ಘಟನೆ ಜಂಡಿಯಾಲಗುರು ಬಳಿ ನಡೆದಿದೆ. ಈ ವೇಳೆ, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಗುರ್ಭಾಜ್ ಅಲಿಯಾಸ್ ಬಾಬಾ, ಶಂಶೇರ್ ಸಿಂಗ್ ಅಲಿಯಾಸ್ ಕರಣ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 2 ಕೆಜಿ ಹೆರಾಯಿನ್ ಮತ್ತು 30 ಬೋರ್ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಎಸ್‌ಪಿಡಿ ಜುಗರಾಜ್ ಸಿಂಗ್, ಜಂಡಿಯಾಲಗುರು ಬಳಿ ಪೊಲೀಸರು ರಸ್ತೆ ತಡೆ ಮಾಡಿದ್ದರು. ಈ ಸಂದರ್ಭದಲ್ಲಿ ದ್ವಿಚಕ್ರಗಳನ್ನು ಚಲಾಯಿಸುತ್ತಾ ಬಂದ ಇಬ್ಬರು ಯುವಕರಲ್ಲಿ ಬೈಕ್ ನಿಲ್ಲಿಸಲು ಸೂಚಿಸಿದ್ದಾರೆ. ಆದರೆ, ಈ ಯುವಕರು ಬೈಕ್ ನಿಲ್ಲಿಸದೇ ಪೊಲೀಸರ ಮೇಲೆ ಗುಂಡು ಹಾರಿಸಿ ದೇವಿ ದಾಸ್ ಪುರದ ಕಡೆ ಪರಾರಿಯಾಗಿದೆ.
ಈ ಕುರಿತು ಕ್ರೈಂ ಬ್ರಾಂಚ್ ಇನ್ಸ್ಪೆಕ್ಟರ್ ರಶ್ಪಾಲ್ ಸಿಂಗ್ ಮತ್ತು ಇನ್ಸ್ ಪೆಕ್ಟರ್ ಅಮನದೀಪ್ ಸಿಂಗ್ ಅವರಿಗೆ ಮಾಹಿತಿ ನೀಡಿದ್ದು, ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಸುತ್ತುವರೆದಿದ್ದಾರೆ. ಈ ಸಂದರ್ಭದಲ್ಲಿ ಆರೋಪಿಗಳು ಪೊಲೀಸರ ಮೇಲೆ 7 ರಿಂದ 8 ಸುತ್ತು ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಪೊಲೀಸರು 12 ರಿಂದ 15 ಸುತ್ತ ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತ ಆರೋಪಿ ಗುರ್ಭಜ್ ಸಿಂಗ್ ವಿರುದ್ಧ ಈಗಾಗಲೇ 3 ಕೊಲೆ ಪ್ರಕರಣಗಳು ದಾಖಲಾಗಿದ್ದು, ಗ್ಯಾಂಗ್‌ಸ್ಟರ್ ಜಗ್ಗು ಭಗವಾನ್‌ಪುರಿಯಾ ಸಹಚರರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಜಮ್ಮುವಿನಲ್ಲಿ ಪೊಲೀಸ್ ತುಪಾಕಿ ಕಸಿದು ದಾಳಿ ಮಾಡಿದ ಉಗ್ರನ ಹತ್ಯೆ