ನವದೆಹಲಿ: ದೆಹಲಿಯಲ್ಲಿ ದೀಪಾವಳಿಯಂದು ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು. ಇನ್ನು ಮುಂದೆ ಪಟಾಕಿಗಳ ತಯಾರಿಕೆ, ಸಂಗ್ರಹಣೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ ಎಂದು ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ತಿಳಿಸಿದರು. ಪಟಾಕಿಗಳ ತಯಾರಿಕೆ, ಸಂಗ್ರಹಣೆ, ಮಾರಾಟ ಮತ್ತು ವಿತರಣೆಗೆ ಯಾರಿಗೂ ಪರವಾನಗಿ ನೀಡದಂತೆ ಗೋಪಾಲ್ ರೈ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದರು.
-
Hon'ble Environment Minister @AapKaGopalRai briefing the media on an important issue | LIVE https://t.co/yYxEvtd10N
— Aam Aadmi Party Delhi (@AAPDelhi) September 11, 2023 " class="align-text-top noRightClick twitterSection" data="
">Hon'ble Environment Minister @AapKaGopalRai briefing the media on an important issue | LIVE https://t.co/yYxEvtd10N
— Aam Aadmi Party Delhi (@AAPDelhi) September 11, 2023Hon'ble Environment Minister @AapKaGopalRai briefing the media on an important issue | LIVE https://t.co/yYxEvtd10N
— Aam Aadmi Party Delhi (@AAPDelhi) September 11, 2023
ಜನರಲ್ಲಿನ ಜಾಗೃತಿ ಮತ್ತು ದೆಹಲಿ ಸರ್ಕಾರದ ಕ್ರಮಗಳಿಂದ ದೆಹಲಿಯಲ್ಲಿ ಮಾಲಿನ್ಯವು ನಿರಂತರವಾಗಿ ಕಡಿಮೆಯಾಗುತ್ತಿದೆ. ಆದರೆ, ಮಾಲಿನ್ಯದ ಬಗ್ಗೆ ಇನ್ನೂ ಕೆಲಸ ಮಾಡಬೇಕಾಗಿದೆ, ಏಕೆಂದರೆ ಮಾಲಿನ್ಯವು ಪ್ರತಿಯೊಬ್ಬರ ಆರೋಗ್ಯಕ್ಕೆ ಅತ್ಯಂತ ಮಾರಕವಾಗಿದೆ. ಪಟಾಕಿಗಳನ್ನು ಸುಡುವುದರಿಂದ ಸಾಕಷ್ಟು ಮಾಲಿನ್ಯ ಉಂಟಾಗುತ್ತದೆ. ಆದ್ದರಿಂದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನಿಯಮಗಳನ್ನು ಅನುಸರಿಸಿ ದೆಹಲಿಯಲ್ಲಿ ಪಟಾಕಿಗಳ ತಯಾರಿಕೆ, ಸಂಗ್ರಹಣೆ ಮತ್ತು ಮಾರಾಟ ನಿಷೇಧಿಸಲಾಗಿದೆ ಎಂದು ಅವರು ಹೇಳಿದರು.
ದೆಹಲಿ ಪೊಲೀಸರು ಯಾರಿಗೂ ಪರವಾನಗಿ ನೀಡಬಾರದು: ಪರಿಸರ ಮಾಲಿನ್ಯ ತಡೆಗಟ್ಟುವ ಸಲುವಾಗಿ, ಪಟಾಕಿಗಳನ್ನು ತಯಾರಿಸಲು, ಸಂಗ್ರಹಿಸಲು ಅಥವಾ ಮಾರಾಟ ಮಾಡಲು ಯಾರಿಗೂ ಪರವಾನಗಿ ನೀಡದಂತೆ ದೆಹಲಿ ಪೊಲೀಸರಿಗೆ ನಿರ್ದೇಶಿಸಲಾಗಿದೆ. ಇದರಿಂದ ದೆಹಲಿಯನ್ನು ಮಾಲಿನ್ಯ ಮುಕ್ತಗೊಳಿಸಬಹುದು ಎಂದು ಸಚಿವ ಗೋಪಾಲ್ ರೈ ತಿಳಿಸಿದರು.
ಪಟಾಕಿ ನಿಷೇಧಿಸುವಂತೆ ಇತರ ರಾಜ್ಯಗಳಿಗೂ ಮನವಿ: ಬೇರೆ ರಾಜ್ಯಗಳಲ್ಲಿ ಪಟಾಕಿಯಿಂದ ಉಂಟಾಗುವ ಮಾಲಿನ್ಯವು ದೆಹಲಿಗೂ ಬರುತ್ತದೆ. ಬೇರೆ ರಾಜ್ಯಗಳಲ್ಲೂ ಪಟಾಕಿಯನ್ನು ನಿಷೇಧಿಸಬೇಕು. ದೀಪಾವಳಿಯಂದು ಪಟಾಕಿ ಸುಡುವುದು ಜನರ ನಂಬಿಕೆಗೆ ಸಂಬಂಧಿಸಿದ್ದು, ಆದರೆ, ಆರೋಗ್ಯವೂ ಬಹಳ ಮುಖ್ಯವಾಗಿದ್ದು, ಜನರಿಗೂ ಇದರ ಬಗ್ಗೆ ಅರಿವು ಮೂಡುತ್ತಿದೆ. ಇದರಿಂದಾಗಿ ದೆಹಲಿಯಲ್ಲಿ ಮಾಲಿನ್ಯವು ನಿರಂತರವಾಗಿ ಕಡಿಮೆಯಾಗುತ್ತಿದೆ ಎಂದರು.
ಚಳಿಗಾಲದ ಕ್ರಿಯಾ ಯೋಜನೆಗಳನ್ನು ನಾಳೆ ಸಿದ್ಧಪಡಿಸಲಾಗುತ್ತದೆ: ಮಾಲಿನ್ಯವನ್ನು ತಡೆಗಟ್ಟಲು ಸೆಪ್ಟೆಂಬರ್ 12 ರಂದು ತಜ್ಞರನ್ನು ಭೇಟಿ ಮಾಡುವ ಮೂಲಕ ಚಳಿಗಾಲದ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗುವುದು, ಒರಿಯಾ ಯೋಜನೆಯನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮುಂದೆ ಪ್ರಸ್ತುತಪಡಿಸಲಾಗುವುದು, ನಂತರ ಯೋಜನೆಯನ್ನು ದೆಹಲಿಯಲ್ಲಿ ಜಾರಿಗೆ ತರಲಾಗುವುದು ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ ಹೇಳಿದರು.
ಇದನ್ನೂ ಓದಿ:ಭಾರತಕ್ಕೆ ವಿಶ್ವಖ್ಯಾತಿ ತಂದ ಜಿ20 ಶೃಂಗದಿಂದ 400 ಕೋಟಿ ರೂಪಾಯಿ ವಹಿವಾಟು ನಷ್ಟ!
G20 ಶೃಂಗಸಭೆ ಯಶಸ್ವಿ: ಇನ್ನು ದೆಹಲಿಯಲ್ಲಿ ನಡೆದ G20 ಶೃಂಗಸಭೆ ಶೇ100ಕ್ಕೆ 100ರಷ್ಟು ಒಮ್ಮತದ ಮೂಲಕ ತೆರೆಕಂಡಿದೆ. ಹಿಂದೆಂದೂ ಕಾಣದಷ್ಟು ಘೋಷಣೆಗಳಿಗೆ ಸಭೆಯ ಎಲ್ಲ ಸದಸ್ಯರಿಂದ ಅನುಮೋದನೆ ಪಡೆಯಲಾಗಿದೆ. ರಷ್ಯಾ- ಉಕ್ರೇನ್ ವಿಚಾರದ ಬಗ್ಗೆ ಅತ್ಯಂತ ಸಮಚಿತ್ತದ ನಿರ್ಣಯ ಕೈಗೊಳ್ಳುವಲ್ಲಿ ಜಿ-20 ಅಧ್ಯಕ್ಷತೆ ವಹಿಸಿದ್ದ ಭಾರತ ಯಶಸ್ವಿಯಾಗಿದೆ. ಒಟ್ಟಾರೆ ಶೃಂಗದ ಯಶಸ್ವಿಯಾದ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳು ಭಾರತವನ್ನು ಹೊಗಳಿವೆ. ಜಾಗತಿಕ ದಕ್ಷಿಣದ ಧ್ವನಿ(ಗ್ಲೋಬಲ್ ಸೌತ್)ನ ಗುಣಗಾನ ನಡೆದಿದೆ. ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮತ್ತು ಕಾಳಜಿ ವಹಿಸುವಲ್ಲಿ ಭಾರತದ ಅಧ್ಯಕ್ಷತೆ ಜಿ-20 ಶೃಂಗಸಭೆ ಯಶಸ್ವಿಯಾಗಿದೆ.