ETV Bharat / bharat

ಉತ್ತರ ಪ್ರದೇಶ: ಹೊತ್ತಿ ಉರಿದ ರೈಲು.. ಬೋಗಿಗಳಿಂದ ಹೊರಬಂದು ಜೀವ ಉಳಿಸಿಕೊಂಡ ಪ್ರಯಾಣಿಕರು!

ದೌರಾಲಾ ನಿಲ್ದಾಣದಲ್ಲಿದ್ದ ಪ್ಯಾಸೆಂಜರ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಪಾರಾಗಿದ್ದಾರೆ.

fire breaks out in passenger train
ಹೊತ್ತಿ ಉರಿದ ರೈಲು
author img

By

Published : Mar 5, 2022, 10:08 AM IST

Updated : Mar 5, 2022, 10:18 AM IST

ಮೀರತ್(ಉತ್ತರ ಪ್ರದೇಶ): ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ದೌರಾಲಾ ನಿಲ್ದಾಣದಲ್ಲಿದ್ದ ಸಹರಾನ್‌ಪುರದಿಂದ ದೆಹಲಿಗೆ ತೆರಳುವ ಪ್ಯಾಸೆಂಜರ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡು ಬಳಿಕ ರೈಲು ಹೊತ್ತಿ ಉರಿದಿದೆ. ಈ ಅಗ್ನಿ ಅವಘಡದಿಂದ ಆತಂಕ ಮನೆ ಮಾಡಿದೆ.

ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಪ್ರಯಾಣಿಕರು ಬೋಗಿಗಳಿಂದ ಹೊರಬಂದರು. ಹಾಗಾಗಿ ಯಾವುದೇ ದೊಡ್ಡ ಅವಘಡ ಸಂಭವಿಸಿಲ್ಲ. ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗ್ಗೆ ಮೀರತ್‌ನ ದೌರಾಲಾ ನಿಲ್ದಾಣದಲ್ಲಿ ನಿಂತಿದ್ದ ಸಹರಾನ್‌ಪುರದಿಂದ ದೆಹಲಿಗೆ ಹೋಗುವ ರೈಲಿನ ಎರಡು ಬೋಗಿಗಳಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಸ್ಫೋಟದೊಂದಿಗೆ ಬೋಗಿಗಳಲ್ಲಿ ಹೊಗೆ ಏರಲು ಆರಂಭಿಸಿದ ತಕ್ಷಣ ಪ್ರಯಾಣಿಕರು ಹೊರಬರಲು ಆರಂಭಿಸಿದರು. ಶಾರ್ಟ್ ಸರ್ಕ್ಯೂಟ್‌ನಿಂದ ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಅದೃಷ್ಟವಶಾತ್ ರೈಲು ನಿಲ್ದಾಣದಲ್ಲಿ ನಿಂತಿತ್ತು. ಹಾಗಾಗಿ ಸಂಭವಿಸಬಹುದಾದಂತಹ ದೊಡ್ಡ ಅವಘಡ ತಪ್ಪಿದಂತಾಗಿದೆ.

ಹೊತ್ತಿ ಉರಿದ ರೈಲು..

ಇದನ್ನೂ ಓದಿ: ಉಕ್ರೇನ್​​​ನಿಂದ 11 ಸಾವಿರ ಜನರ ಸ್ಥಳಾಂತರ.. ನವದೆಹಲಿಗೆ ಆಗಮಿಸಿದ 170 ನಾಗರಿಕರ ಹೊತ್ತ ವಿಮಾನ

ಹೆಚ್ಚಿನ ಸಂಖ್ಯೆಯ ದೆಹಲಿ ಉದ್ಯೋಗಿ ಪ್ರಯಾಣಿಕರು ಈ ರೈಲಿನಲ್ಲಿ ಪ್ರಯಾಣಿಸುತ್ತಾರೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಪ್ರಯಾಣಿಕರು ಹೊರಬಂದ ಹಿನ್ನೆಲೆ ಬಚಾವ್​ ಆಗಿದ್ದಾರೆ.

Last Updated : Mar 5, 2022, 10:18 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.