ETV Bharat / bharat

400 ಅಂಗಡಿಗಳಿದ್ದ ಕಾಂಪ್ಲೆಕ್ಸ್​ನಲ್ಲಿ ಭಾರಿ ಅಗ್ನಿ ಅವಘಡ; ನಾಲ್ವರು ಯುವತಿಯರು ಸೇರಿ 6 ಸಾವು - ಹೊಗೆಯಿಂದಾಗಿ ಉಸಿರುಗಟ್ಟಿ ಮೃತ

ಹೈದರಾಬಾದ್‌ನ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ನಾಲ್ವರು ಯುವತಿಯರು ಸೇರಿ ಆರು ಮಂದಿ ಸಾವನ್ನಪ್ಪಿದ್ದಾರೆ.

Many youths died  Swapnaloka complex fire incident in Hyderabad  Many youths died in fire incident  fire incident in Hyderabad  ಕಾಂಪ್ಲೆಕ್ಸ್​ನಲ್ಲಿ ಅಗ್ನಿ ಅವಘಡ  ನಾಲ್ವರು ಯುವತಿ ಸೇರಿ ಆರು ಜನ ಸಾವು  400 ಅಂಗಡಿಗಳನ್ನು ಹೊಂದಿದ್ದ ಸ್ವಪ್ನಲೋಕ ಕಾಂಪ್ಲೆಕ್ಸ್​ ಸ್ವಪ್ನಲೋಕ ಕಾಂಪ್ಲೆಕ್ಸ್​ನಲ್ಲಿ ಬೆಂಕಿ ಅವಘಡ  ಮತ್ತೊಂದು ಭಾರಿ ಅಗ್ನಿ ಅವಘಡ  ಭಾರಿ ಅಗ್ನಿ ಅವಘಡಕ್ಕೆ ಆರು ಜನ ಬಲಿ  ಕಾಲ್​ಸೆಂಟರ್​ನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಯುವತಿ  ಹೊಗೆಯಿಂದಾಗಿ ಉಸಿರುಗಟ್ಟಿ ಮೃತ  ಪ್ಯಾರಡೈಸ್ ಬಳಿಯ ಸ್ವಪ್ನಲೋಕ ಕಾಂಪ್ಲೆಕ್ಸ್‌
400 ಅಂಗಡಿಗಳನ್ನು ಹೊಂದಿದ್ದ ಕಾಂಪ್ಲೆಕ್ಸ್​ನಲ್ಲಿ ಅಗ್ನಿ ಅವಘಡ
author img

By

Published : Mar 17, 2023, 7:26 AM IST

Updated : Mar 17, 2023, 8:35 AM IST

ಹೈದರಾಬಾದ್‌ನಲ್ಲಿ ಭೀಕರ ಅಗ್ನಿ ಅವಘಡ

ಹೈದರಾಬಾದ್ (ತೆಲಂಗಾಣ): ಸಿಕಂದರಾಬಾದ್‌ನಲ್ಲಿ ಗುರುವಾರ ಸಂಭವಿಸಿದ ಮತ್ತೊಂದು ಭಾರಿ ಅಗ್ನಿ ಅವಘಡದಲ್ಲಿ ಆರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕಾಲ್​ಸೆಂಟರ್​ನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಯುವತಿಯರು ಹಾಗೂ ಇಬ್ಬರು ಯುವಕರು ಅಸುನೀಗಿದ್ದಾರೆ. ದಟ್ಟ ಹೊಗೆಯಿಂದಾಗಿ ಉಸಿರುಗಟ್ಟಿ ಇವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚೆಗಷ್ಟೇ ಇಲ್ಲಿನ ಮಿನಿಸ್ಟರ್ ರಸ್ತೆಯಲ್ಲಿರುವ ಡೆಕ್ಕನ್ ಮಾಲ್‌ನಲ್ಲಿ ನಡೆದ ಇದೇ ರೀತಿ ಅವಘಡದಲ್ಲಿ ಮೂವರು ಸಾವನ್ನಪ್ಪಿದ್ದರು.

ವಿವರ: ಇಲ್ಲಿನ ಪ್ಯಾರಡೈಸ್ ಬಳಿಯ ಸ್ವಪ್ನಲೋಕ ಕಾಂಪ್ಲೆಕ್ಸ್‌ನಲ್ಲಿ ಸಂಜೆ 6.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. 8 ಮಹಡಿಗಳಿಗೆ ಕೆನ್ನಾಲಿಗೆ ವ್ಯಾಪಿಸಿತ್ತು. ಇದಕ್ಕೂ ಮುನ್ನ ಶಾರ್ಟ್​​ಸರ್ಕ್ಯೂಟ್‌ನಿಂದಾಗಿ ಏಳನೇ ಮಹಡಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ನಂತರ 4ನೇ ಮಹಡಿಗೆ ಹರಡಿದೆ. 5ನೇ ಮಹಡಿಯಲ್ಲಿ ಸ್ಫೋಟ ಸಂಭವಿಸಿದೆ. ಬಟ್ಟೆ ಅಂಗಡಿಗಳು, ಕಂಪ್ಯೂಟರ್ ಸಂಸ್ಥೆಗಳು, ಕಾಲ್ ಸೆಂಟರ್‌ಗಳು ಮತ್ತು ಇತರ ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಈ ಬಹುಮಹಡಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು.

ಬೆಂಕಿ ಹೊತ್ತಿಕೊಂಡ ತಕ್ಷಣ ಅಲ್ಲಿ ಕೆಲಸ ಮಾಡುತ್ತಿದ್ದವರು ಹಾಗೂ ಅಂಗಡಿಗೆ ಬಂದವರು ಗಾಬರಿಯಿಂದ ಹೊರಗೆ ಓಡಿಬಂದಿದ್ದಾರೆ. ಹೊಗೆ ಹಾಗೂ ಬಣ್ಣದ ಡಬ್ಬಗಳಿಂದಾಗಿ ಕೆಲವರಿಗೆ ಕೆಳಗಿಳಿಯಲು ಸಾಧ್ಯವಾಗಲಿಲ್ಲ. 15ಕ್ಕೂ ಹೆಚ್ಚು ಮಂದಿ ಕಟ್ಟಡದಲ್ಲಿ ಸಿಲುಕಿಕೊಂಡಿದ್ದರು. ಅಗ್ನಿಶಾಮಕ ಸಿಬ್ಬಂದಿ ಬೃಹತ್ ಕ್ರೇನ್‌ಗಳ ಸಹಾಯದಿಂದ ಕೆಲವರನ್ನು ರಕ್ಷಿಸಿದರು. ಈ ಪೈಕಿ ಆರು ಮಂದಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ತಕ್ಷಣ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಸ್ಪತ್ರೆಯಲ್ಲಿ ಪ್ರಮೀಳಾ (22), ವೆನ್ನೆಲ (22), ಶ್ರಾವಣಿ (22), ತ್ರಿವೇಣಿ (22) ಮತ್ತು ಶಿವ (22) ಎಂಬವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು. ಇನ್ನೋರ್ವ ಪ್ರಶಾಂತ್ (23) ಎಂಬವರು ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇವರಲ್ಲಿ ವೆನ್ನೆಲ (ಮರ್ರಿಪಲ್ಲಿ), ಶಿವ (ನರಸಂಪೇಟ), ಶ್ರಾವಣಿ (ನರಸಂಪೇಟ ಮಂಡಲ) ವಾರಂಗಲ್ ಜಿಲ್ಲೆಯವರಾಗಿದ್ದರೆ, ಪ್ರಶಾಂತ್ (ಕೇಸಮುದ್ರಂ) ಮತ್ತು ಪ್ರಮೀಳಾ (ಸುರೇಶನಗರ) ಮಹಬೂಬಾಬಾದ್ ಜಿಲ್ಲೆಯ ನಿವಾಸಿಗಳು. ತ್ರಿವೇಣಿ ಖಮ್ಮಂ ಜಿಲ್ಲೆಯ ನೆಲಕೊಂಡಪಲ್ಲಿಯವರು. ಇವರೆಲ್ಲರೂ BM5 ಕಚೇರಿ (ಕಾಲ್ ಸೆಂಟರ್) ಉದ್ಯೋಗಿಗಳೆಂದು ತಿಳಿದುಬಂದಿದೆ.

ಅಗ್ನಿಶಾಮಕ ಸಿಬ್ಬಂದಿ ಶ್ರವಣ್, ಭಾರತಮ್ಮ, ಸುಧೀರ್ ರೆಡ್ಡಿ, ಪವನ್, ದಯಾಕರ್, ಗಂಗಯ್ಯ ಮತ್ತು ರವಿ ಸೇರಿದಂತೆ ಉಳಿದವರನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇವರು ಸುಮಾರು 4 ಗಂಟೆಗಳ ಕಾಲ ದಟ್ಟ ಹೊಗೆಯಲ್ಲಿ ಸಿಲುಕಿ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹೊಗೆ ಆವರಿಸುತ್ತಿದ್ದಂತೆ ಬೆಂಕಿಯಲ್ಲಿ ಸಿಲುಕಿದವರು ಸಹಾಯಕ್ಕಾಗಿ ಕಿರುಚಿದ್ದಾರೆ. ಅನಾಹುತದ ನಂತರ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ತಮ್ಮ ಸೆಲ್‌ಫೋನ್‌ಗಳಲ್ಲಿ ಬೆಳಕು ಹಾಯಿಸಿ​ ರಕ್ಷಿಸುವಂತೆ ಮನವಿ ಮಾಡಿದ್ದಾರೆ. ಆದರೆ ಸ್ವಲ್ಪ ಸಮಯದ ನಂತರ ಅಲ್ಲಿಂದ ಯಾವುದೇ ಕಿರುಚಾಟದ ಸದ್ದು ಕೇಳಿಸಲಿಲ್ಲ. ದಟ್ಟ ಹೊಗೆ ಹರಡಿದ್ದರಿಂದ ಆಕ್ಸಿಜನ್ ಕೊರತೆಯಿಂದಾಗಿ ಕೊಠಡಿಯಲ್ಲಿ ಸಿಲುಕಿಕೊಂಡಿದ್ದವರು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು.

ಅಗ್ನಿಶಾಮಕ ಸಿಬ್ಬಂದಿ ಮತ್ತು ಇತರ ರಕ್ಷಣಾ ತಂಡಗಳು ಸಂತ್ರಸ್ತರನ್ನು ರಕ್ಷಿಸಲು ಹರಸಾಹಸಪಟ್ಟು ಪ್ರಯತ್ನಿಸಿದ್ದಾರೆ. ಹೈಡ್ರಾಲಿಕ್‌ ಕ್ರೇನ್‌ಗಳ ಸಹಾಯದಿಂದ ಸಿಬ್ಬಂದಿ ಮೇಲಕ್ಕೆ ಹೋಗಿ ಸಿಕ್ಕಿಬಿದ್ದವರನ್ನು ಕೆಳಗಿಳಿಸಲು ಪ್ರಯತ್ನಿಸಿದ್ದಾರೆ. ಮತ್ತೊಂದೆಡೆ, ಬೆಂಕಿ ನಿಯಂತ್ರಿಸಲು ಸುಮಾರು 10 ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿತ್ತು. ರಾತ್ರಿ ಹತ್ತು ಗಂಟೆಯ ನಂತರ ಬೆಂಕಿಯನ್ನು ಹತೋಟಿಗೆ ತರಲಾಯಿತು. ಆದರೆ, ದಟ್ಟ ಹೊಗೆಯಿಂದಾಗಿ ರಕ್ಷಣಾ ಕಾರ್ಯ ಕಷ್ಟಕರವಾಗಿತ್ತು. ಕೆಲವರು ಮಾಲ್​ ಹಿಂಭಾಗದಲ್ಲಿರುವ ಸ್ನಾನಗೃಹದ ಕಿಟಕಿಗಳಿಂದ ತಪ್ಪಿಸಿಕೊಂಡರು. ಐದನೇ ಮಹಡಿಯಲ್ಲಿರುವ ಬಿಎಂ5 ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಹಲವರು ಅಲ್ಲಿ ಸಿಲುಕಿಕೊಂಡಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸಂತ್ರಸ್ತರನ್ನು ರಕ್ಷಿಸುವಲ್ಲಿ ನಿರತರಾಗಿದ್ದ ತುಕಾರಾಂಗೇಟು ಪೊಲೀಸ್ ಕಾನ್‌ಸ್ಟೇಬಲ್ ಎಂ.ರವಿ ಹೊಗೆಯಿಂದ ಅಸ್ವಸ್ಥಗೊಂಡಿದ್ದಾರೆ.

ಸ್ವಪ್ನಲೋಕ ಸಂಕೀರ್ಣವು ಎರಡು ಬ್ಲಾಕ್‌ಗಳಲ್ಲಿ 4 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಹರಡಿದೆ. ಇದು ಸುಮಾರು 400 ಅಂಗಡಿಗಳನ್ನು ಹೊಂದಿದೆ. ಬೆಳಗ್ಗೆ 10ರಿಂದ ರಾತ್ರಿ 10ರವರೆಗೆ ಜನಸಂದಣಿ ಇರುತ್ತದೆ. ಈ ಸಂಕೀರ್ಣದಲ್ಲಿ ಸುಮಾರು 3 ಸಾವಿರ ಜನರು ಕೆಲಸ ಮಾಡುತ್ತಾರೆ. ನೆಲಮಾಳಿಗೆ, ನೆಲ ಮತ್ತು ಮೊದಲ ಮಹಡಿಗಳಲ್ಲಿ 170 ಅಂಗಡಿಗಳಿವೆ. ಅಗ್ನಿ ಅವಘಡ ಸಂಭವಿಸುವ ವೇಳೆಗೆ 5ರಿಂದ 7ನೇ ಮಹಡಿಯಲ್ಲಿದ್ದ ಬಹುತೇಕ ಕಚೇರಿಗಳಿಂದ ಸಿಬ್ಬಂದಿ ನಿರ್ಗಮಿಸಿದ್ದರಿಂದ ಅಪಾರ ಪ್ರಮಾಣದ ಪ್ರಾಣಹಾನಿ ತಪ್ಪಿಸಲಾಗಿದೆ. ಕಾಂಪ್ಲೆಕ್ಸ್‌ನ ಎ ಮತ್ತು ಬಿ ಬ್ಲಾಕ್‌ಗಳ ನಡುವಿನ ಅಂತರದಿಂದಾಗಿ ಭಾರಿ ಅನಾಹುತ ತಪ್ಪಿದೆ.

ಇದನ್ನೂ ಓದಿ: ಚಾಮರಾಜನಗರ: ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನಮರ

Last Updated : Mar 17, 2023, 8:35 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.