ETV Bharat / bharat

ಶಾಸಕ ಅಬ್ದುಲ್ಲಾ ಅಜಂ ಸೇರಿ 9 ಜನರ ಮೇಲೆ ಎಫ್​ಐಆರ್​ ದಾಖಲು - ಗಂಜ್​ ಪೊಲೀಸ್​ ಠಾಣೆಯಲ್ಲಿ ಎಫ್‌ಐಆರ್

ಎಸ್‌ಪಿ ನಾಯಕ ಅಜಂ ಖಾನ್ ಪುತ್ರ ಶಾಸಕ ಅಬ್ದುಲ್ಲಾ ಅಜಂ ಸೇರಿದಂತೆ 9 ಜನರ ವಿರುದ್ಧ ಕೊಲೆ ಬೆದರಿಕೆ ಮತ್ತು ನಕಲಿ ಮತ ಹಾಕಿದ್ದಕ್ಕಾಗಿ ಎಫ್‌ಐಆರ್ ದಾಖಲಾಗಿದೆ.

MLA Abdullah Azam Khan
ಶಾಸಕ ಅಬ್ದುಲ್ಲಾ ಅಜಂ ಖಾನ್
author img

By

Published : Dec 8, 2022, 2:01 PM IST

ರಾಂಪುರ(ಉತ್ತರ ಪ್ರದೇಶ): ಡಿ. 5 ರಂದು ರಾಂಪುರದಲ್ಲಿ ಮತದಾನದ ದಿನದಂದು ನಕಲಿ ಮತದಾನ ಬೆಂಬಲಿಸಿರುವುದು ಮತ್ತು ಕರ್ತವ್ಯದಲ್ಲಿದ್ದ ಪೊಲೀಸರಿಗೆ ಬೆದರಿಕೆ ಹಾಕಿರುವುದು ಮಾತ್ರವಲ್ಲದೇ ಮತದಾರನೊಬ್ಬನಿಗೆ ಥಳಿಸಿರುವ ಆರೋಪದ ಮೇಲೆ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಪುತ್ರ ಅಬ್ದುಲ್ಲಾ ಅಜಂ ಮತ್ತು ಮೂವರು ಪತ್ರಕರ್ತರ ವಿರುದ್ಧ ಗಂಜ್​ ಪೊಲೀಸ್​ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ವಿಕಾಸ್ ಸಿಂಗ್, ಅಂಕುರ್ ಪ್ರತಾಪ್ ಸಿಂಗ್ ಮತ್ತು ಶಹಬಾಜ್ ಖಾನ್ ಎಂಬ ಮೂವರು ಪತ್ರಕರ್ತರಲ್ಲಿ ಇಬ್ಬರು ಪ್ರಮುಖ ಹಿಂದಿ ದೈನಿಕ ಮತ್ತು ಒಬ್ಬರು ರಾಷ್ಟ್ರೀಯ ಟಿವಿ ಚಾನೆಲ್‌ನಲ್ಲಿ ಕೆಸರ ಮಾಡುತ್ತಿರುವವರು. ಇದಲ್ಲದೇ ಅಬ್ದುಲ್ಲಾ ಆಜಂ ಜೊತೆ ಇದ್ದ ಐವರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ. ಅಬ್ದುಲ್ಲಾ ಅಜಂ ರಾಂಪುರದ ಸುವಾರ್ ಕ್ಷೇತ್ರದ ಶಾಸಕರಾಗಿದ್ದಾರೆ.

ಆರೋಪಿಗಳು ಗುರುತಿನ ಚೀಟಿ ತೋರಿಸಲು ನಿರಾಕರಿಸಿದ ನನಗೆ ಥಳಿಸಿದ್ದಾರೆ ಎಂದು ಆರೋಪಿಸಿ ರಾಂಪುರ ನಿವಾಸಿ 42 ವರ್ಷದ ನದೀಮ್ ಖಾನ್ ನೀಡಿದ ದೂರಿನ ಮೇರೆಗೆ ಗಂಜ್ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಡಿಸೆಂಬರ್ 5 ರಂದು ಮತಗಟ್ಟೆಯಲ್ಲಿದ್ದ ಭದ್ರತಾ ಸಿಬ್ಬಂದಿಯೊಂದಿಗೆ ನಾಲ್ವರೂ ಅನುಚಿತವಾಗಿ ವರ್ತಿಸಿದ್ದಾರೆ ಎಂದೂ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಚುನಾವಣೆ ಸಂದರ್ಭ ಫೇಕ್ ಐಡಿ ತಂದು ಪತ್ರಕರ್ತರನ್ನು ವೋಟ್ ಹಾಕಿಸಲು ಪ್ರಯತ್ನಿಸಿದ್ದರು. ಅದನ್ನು ವಿರೋಧಿಸಿದ ನನಗೆ ಮತ್ತು ನನ್ನ ಸ್ನೇಹಿತ ಮೆಹರ್ಬಾನ್ ಅಲಿಗೆ ಬೆದರಿಕೆ ಹಾಕಿದರು. ನಮ್ಮ ಸರ್ಕಾರ ಇದ್ದಿದ್ದರೆ ನಿನ್ನನ್ನು ಎನ್‌ಕೌಂಟರ್ ಮಾಡಿ ನಿನ್ನ ಶವವೂ ಸಿಗದ ಜಾಗದಲ್ಲಿ ಬಿಸಾಡಿ ಬಿಡುತ್ತಿದ್ದೆ ಎಂದು ನನಗೆ ಬೆದರಿಕೆ ಹಾಕಿದ್ದರು. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅದನ್ನು ಎಲ್ಲರೂ ನೋಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಕಳ್ಳತನ ಪ್ರಕರಣ: ಎಸ್​ಪಿ ನಾಯಕ ಅಜಂ ಖಾನ್, ಪುತ್ರ ಅಬ್ದುಲ್ಲಾ ವಿರುದ್ಧ FIR

ETV Bharat Logo

Copyright © 2025 Ushodaya Enterprises Pvt. Ltd., All Rights Reserved.