ಕುಂತಿ (ಜಾರ್ಖಂಡ್) : ಜಿಲ್ಲಾ ಎಸ್‌ಡಿಒ ರಿಯಾಜ್ ಅಹಮದ್ ವಿರುದ್ಧ ಲೈಂಗಿಕ ಕಿರುಕುಳದ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ತ್ವರಿತ ಕ್ರಮ ಕೈಗೊಂಡಿರುವ ಪೊಲೀಸರು ಎಸ್‌ಡಿಒ ಅವರನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಜುಲೈ 2 ರಂದು ನಡೆದಿದ್ದು, ಜುಲೈ 4 ರಂದು ತಡರಾತ್ರಿ ಖುಂತಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿತ್ತು.
ರಿಯಾಜ್ ಅಹ್ಮದ್ ಅವರು ಐಐಟಿ ವಿದ್ಯಾರ್ಥಿಗೆ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಘಟನೆಯನ್ನು ದೃಢಪಡಿಸಿರುವ ಎಸ್ಪಿ ಅಮನ್ ಕುಮಾರ್, ಆರೋಪಿ ಎಸ್‌ಡಿಒನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ವಿವರ: ಜುಲೈ 1 ರಂದು ರಾತ್ರಿ ಎಸ್‌ಡಿಒ ಐಐಟಿಯ ವಿದ್ಯಾರ್ಥಿಗಳನ್ನು ತನ್ನ ನಿವಾಸಕ್ಕೆ ಪಾರ್ಟಿಗೆ ಕರೆದಿದ್ದರಂತೆ. ಎಲ್ಲರೂ ಆಹಾರ ಹಾಗೂ ಪಾನೀಯ ಸೇವಿಸಿದ್ದಾರೆ. ಆದರೆ, ಆ ರಾತ್ರಿ ಯಾವುದೇ ಘಟನೆ ಜರುಗಿಲ್ಲ ಮರುದಿನ ಬೆಳಗಿನ ಜಾವ ಅಂದರೆ ಜುಲೈ 2ರ ಬೆಳಗ್ಗೆ ಆರು ಗಂಟೆ ಸುಮಾರಿಗೆ ಸಂತ್ರಸ್ತೆಗೆ ಮುತ್ತಿಕ್ಕಿ ಆಕೆಯ ಜೊತೆ ಲೈಂಕಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ.
ಸಂತ್ರಸ್ತೆ ಹಿಮಾಚಲ ಪ್ರದೇಶದವಳಾಗಿದ್ದು, ಮಧ್ಯಪ್ರದೇಶದ ಕಾಲೇಜಿನಲ್ಲಿ ಐಐಟಿ ಅಭ್ಯಾಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ 20 ದಿನಗಳಿಂದ 20 ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ತರಬೇತಿಗಾಗಿ ಕುಂತಿಯಲ್ಲಿ ಇದ್ದಾರೆ. ಮಾಹಿತಿ ಪ್ರಕಾರ ಸ್ವತಃ ಜಿಲ್ಲಾಡಳಿತವೇ ತರಬೇತಿಗೆ ಇವರನ್ನು ಕರೆಸಿದೆಯಂತೆ.
ಇದನ್ನೂ ಓದಿ: ಎಡಿಜಿಪಿ ಅಮೃತ್ ಪಾಲ್ ಬಂಧನ ಪ್ರಕರಣ: ಬಯಲಾಯ್ತು ಸ್ಟ್ರಾಂಗ್ ರೂಂ ರಹಸ್ಯ