ವಿಶಾಖಪಟ್ಟಣಂ: ಆಂಧ್ರಪ್ರದೇಶದಲ್ಲಿ ಸಂಚಲನ ಮೂಡಿಸಿದ್ದ ಎರಡು ಸಾವಿರ ನೋಟು ಬದಲಾವಣೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ವಿಶಾಖದಲ್ಲಿ 2000 ನೋಟು ವಿನಿಮಯ ತಂಡದಿಂದ 12 ಲಕ್ಷ ರೂಪಾಯಿ ಪಡೆದಿದ್ದ ಮಹಿಳಾ ಎಆರ್ ಇನ್ಸ್‌ಪೆಕ್ಟರ್ ಮತ್ತು ಇತರ ಇಬ್ಬರು ಗೃಹ ರಕ್ಷಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆಕೆಯ ಜೊತೆಗೆ ಇಬ್ಬರು ಗೃಹರಕ್ಷಕರಾದ ಶ್ಯಾಮ್ ಸುಂದರ್ ಅಲಿಯಾಸ್ ಮೆಹರ್ ಮತ್ತು ಶ್ರೀನು ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನೋಟು ವಿನಿಮಯ ಪ್ರಕರಣದಲ್ಲಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸೂರಿಬಾಬು ವಿರುದ್ಧ ದ್ವಾರಕಾನಗರ ಪೊಲೀಸರು ಸೆಕ್ಷನ್ 341, 386 ಮತ್ತು 506 ಅಡಿ ಎಫ್‌ಐಆರ್ ದಾಖಲಿಸಿದ್ದಾರೆ.
ಎರಡು ದಿನಗಳ ಹಿಂದೆ ವಿಶಾಖಪಟ್ಟಣಂ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ದೊಡ್ಡ ಮೊತ್ತದ 2 ಸಾವಿರ ರೂಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳಲು ಯತ್ನಿಸಿದ್ದರು. ಸೂರಿಬಾಬು ಎಂಬ ವ್ಯಕ್ತಿ 90 ಲಕ್ಷ ಮೌಲ್ಯದ 500 ರೂಪಾಯಿ ನೋಟುಗಳೊಂದಿಗೆ ಬೀಚ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ಆಗ ರಾತ್ರಿ ಕರ್ತವ್ಯದಲ್ಲಿದ್ದ ಎಆರ್ ಇನ್ಸ್ ಪೆಕ್ಟರ್ ತಪಾಸಣೆ ನಡೆಸುತ್ತಿದ್ದರು. ಆ ಹಣದ ಬಗ್ಗೆ ಇನ್ಸ್‌ಪೆಕ್ಟರ್ ಸುರಿಬಾಬುನನ್ನು ವಿಚಾರಿಸಿದ್ದಾರೆ. ಆಗ ಕಮಿಷನ್ ಆಧಾರದ ಮೇಲೆ 2000 ರೂಪಾಯಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದೇವೆ ಎಂದು ಸೂರಿಬಾಬು ಹೇಳಿದ್ದಾರೆ. ಆ ಹಣಕ್ಕೆ ಯಾವುದೇ ನಿರ್ದಿಷ್ಟ ದಾಖಲೆ ಇಲ್ಲ ಎಂಬುದನ್ನು ಅರಿತ ಮಹಿಳಾ ಇನ್ಸ್‌ಪೆಕ್ಟರ್ ಸೂರಿಬಾಬುಗೆ ಬೆದರಿಸಿ 12 ಲಕ್ಷ ರೂ ಕೊಡುವಂತೆ ಕೇಳಿದ್ದಾರೆ ಎಂದು ಆರೋಪಿಸಲಾಗಿದೆ.
ಮಧ್ಯವರ್ತಿ ಸೂರಿಬಾಬು ವಿರುದ್ಧ ಎಫ್‌ಐಆರ್: ಅಲ್ಲದೇ, ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಎಲ್ಲ ಹಣವನ್ನು ವಶಪಡಿಸಿಕೊಳ್ಳುವುದಾಗಿ ಇನ್ಸ್‌ಪೆಕ್ಟರ್ ಎಚ್ಚರಿಸಿದ್ದಾರೆ. ಆದರೆ, ಈ ಹಣ ನೌಕಾದಳದ ಸಿಬ್ಬಂದಿಗಳಾದ ಶ್ರೀನು ಮತ್ತು ಶ್ರೀಧರ್ ಅವರಿಗೆ ಸೇರಿದ್ದರಿಂದ ಅವರು ವಿಶಾಖಪಟ್ಟಣಂ ಸಿ ಪಿ ತ್ರಿವಿಕ್ರಮ ವರ್ಮಾ ಅವರಿಗೆ ದೂರು ನೀಡಿದ್ದಾರೆ. ಇದಾದ ಬಳಿಕ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದಾರೆ. ತಪಾಸಣೆ ವೇಳೆ ಇನ್ಸ್‌ಪೆಕ್ಟರ್ ಜೊತೆಗಿದ್ದ ಗೃಹರಕ್ಷಕರಾದ ಶ್ಯಾಮಸುಂದರ್ ಮತ್ತು ಶ್ರೀನು, ಕರೆನ್ಸಿ ವಿನಿಮಯದ ಮಧ್ಯವರ್ತಿ ಸೂರಿಬಾಬು ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಸೆಪ್ಟೆಂಬರ್ ಅಂತ್ಯದವರೆಗೆ ನೋಟು ಬದಲಾವಣೆಗೆ ಅವಕಾಶ: ಸಿಐ ಹಾಗೂ ಅವರ ಚಾಲಕರಿಗೆ ಹತ್ತು ಲಕ್ಷ ಕೊಡುವುದಾಗಿ ಮಧ್ಯವರ್ತಿ ಸೂರಿ ಗುರುವಾರ ಡೀಲ್ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ವಿಷಯವಾಗಿ ಸಂತ್ರಸ್ತರು ಡಿಸಿಪಿಗೆ ದೂರು ನೀಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಸೂರಿ ಅವರನ್ನು ಎ1, ಮಹಿಳಾ ಇನ್ಸ್‌ಪೆಕ್ಟರ್ ಅವರನ್ನು ಎ4 ಆರೋಪಿ ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ . ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಸಿಪಿ ತಿಳಿಸಿದ್ದಾರೆ.
ಇದನ್ನೂ ಓದಿ: 2000 ರೂ ನೋಟು ಬದಲಾವಣೆ ಹೆಸರಲ್ಲಿ ಪಂಗನಾಮ ಹಾಕಿದ್ದ ಮೂವರ ಬಂಧನ