ETV Bharat / bharat

ರಸ್ತೆ ಬದಿಯ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ - ಸ್ಥಳೀಯ ತರಕಾರಿ ಮಾರುಕಟ್ಟೆ

ಚೆನ್ನೈನ ಮೈಲಾಪುರದ ಸ್ಥಳೀಯ ತರಕಾರಿ ಮಾರುಕಟ್ಟೆಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಿರುವ ವಿಡಿಯೋ ವೈರಲ್​ ಆಗಿದೆ.

finance-minister-nirmala-sitharamans-visit-to-mylapore-market-in-chennai
ರಸ್ತೆ ಬದಿಯ ಮಾರುಕಟ್ಟೆಯಲ್ಲಿ ತರಕಾರಿ ಖರೀಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್
author img

By

Published : Oct 9, 2022, 4:52 PM IST

ಚೆನ್ನೈ (ತಮಿಳುನಾಡು): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಚೆನ್ನೈನಲ್ಲಿ ತರಕಾರಿ ಮಾರುಕಟ್ಟೆಗೆ ತೆರಳಿ ವ್ಯಾಪಾರಿಗಳನ್ನು ಮಾತನಾಡಿಸಿ, ತರಕಾರಿ ಖರೀದಿ ಮಾಡಿದ್ದಾರೆ. ಇದರ ವಿಡಿಯೋ ಮತ್ತು ಫೋಟೋಗಳನ್ನೂ ಖುದ್ದು ಸಚಿವರೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

  • During her day-long visit to Chennai, Smt @nsitharaman made a halt at Mylapore market where she interacted with the vendors & local residents and also purchased vegetables. pic.twitter.com/emJlu81BRh

    — NSitharamanOffice (@nsitharamanoffc) October 8, 2022 " class="align-text-top noRightClick twitterSection" data=" ">

ಚೆನ್ನೈನ ಮೈಲಾಪುರದ ಸ್ಥಳೀಯ ರಸ್ತೆ ಬದಿಯ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿರುವ ಬಗ್ಗೆ ಶನಿವಾರ ಸಂಜೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕಚೇರಿಯ ಅಧಿಕೃತ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಹಾಗೂ ಫೋಟೋಗಳನ್ನು ಶೇರ್​ ಮಾಡಲಾಗಿದೆ.

ಚೆನ್ನೈಗೆ ಭೇಟಿ ನೀಡಿರುವ ನಿರ್ಮಲಾ ಸೀತಾರಾಮನ್ ಮೈಲಾಪುರ ಮಾರುಕಟ್ಟೆಗೆ ತೆರಳಿ ಅಲ್ಲಿ ಮಾರಾಟಗಾರರು ಮತ್ತು ಸ್ಥಳೀಯ ನಿವಾಸಿಗಳೊಂದಿಗೆ ಸಂವಾದ ನಡೆಸಿದರು. ತರಕಾರಿಗಳನ್ನೂ ಖರೀದಿಸಿದರು ಎಂದು ಟ್ವೀಟ್​ ಮಾಡಲಾಗಿದೆ. ಈ ವಿಡಿಯೋದಲ್ಲಿ ಸಚಿವರು ಸಿಹಿ ಗೆಣಸು ಮತ್ತು ಹಾಗಲಕಾಯಿ ಆಯ್ದುಕೊಂಡು ತೂಕ ಮಾಡಿಸಿ ಖರೀದಿಸಿರುವುದನ್ನು ಕಾಣಬಹುದಾಗಿದೆ.

ಇದನ್ನೂ ಓದಿ: ಪುಟ್ಟ ಮಗುವಿನಂತೆ ಹೆತ್ತ ತಾಯಿ ಹೊತ್ತು ದೇವಿ ದರ್ಶನ ಮಾಡಿಸಿದ ಮಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.