ನವದೆಹಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸಾರಥ್ಯದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ಇಂದು ಮುಕ್ತಾಯಗೊಳ್ಳುತ್ತಿದೆ. ಕೊನೆಯ ದಿನವಾದ ಇಂದು ಶ್ರೀನಗರದ ಶೇರ್ ಕಾಶ್ಮೀರ ಕ್ರೀಡಾಂಗಣದಲ್ಲಿ ಸಮಾರೋಪ ಸಮಾರಂಭ ನಿಗದಿಯಾಗಿದೆ. ಕಳೆದ ಸೆಪ್ಟೆಂಬರ್ 7ರಂದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ 3,570 ಕಿ.ಮೀ. ದೂರ ಸಂಚರಿಸುವ ಈ ಯಾತ್ರೆಗೆ ಚಾಲನೆ ನೀಡಲಾಗಿತ್ತು. 150 ದಿನಗಳ ಬೃಹತ್ ಯಾತ್ರೆ ಇತ್ತೀಚೆಗೆ ಜಮ್ಮು ಕಾಶ್ಮೀರ ತಲುಪಿತ್ತು.
ಇಂದಿನ ಸಮಾರೋಪ ಸಮಾರಂಭದಲ್ಲಿ ಒಟ್ಟು 12 ರಾಜಕೀಯ ಪಕ್ಷಗಳು ಭಾಗವಹಿಸಲಿವೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಆದರೆ 21 ಸಮಾನ ಮನಸ್ಸಿನ ವಿವಿಧ ಪಕ್ಷಗಳ ಪೈಕಿ ಕೆಲವರು ಭದ್ರತಾ ಕಾರಣಗಳಿಂದ ಈ ಕಾರ್ಯಕ್ರಮಕ್ಕೆ ಗೈರಾಗುವ ಸಾಧ್ಯತೆ ಇದೆ. ಟಿಡಿಪಿ, ತೃಣಮೂಲ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ಮುಖಂಡರು ಈ ಸಭೆಗೆ ಗೈರಾಗಲಿದ್ದಾರೆ ಎಂದು ತಿಳಿದುಬಂದಿದೆ.
-
LIVE: Press briefing by Shri @RahulGandhi in Srinagar, Jammu & Kashmir. #BharatJodoYatra https://t.co/D5JmAbxpYD
— Congress (@INCIndia) January 29, 2023 " class="align-text-top noRightClick twitterSection" data="
">LIVE: Press briefing by Shri @RahulGandhi in Srinagar, Jammu & Kashmir. #BharatJodoYatra https://t.co/D5JmAbxpYD
— Congress (@INCIndia) January 29, 2023LIVE: Press briefing by Shri @RahulGandhi in Srinagar, Jammu & Kashmir. #BharatJodoYatra https://t.co/D5JmAbxpYD
— Congress (@INCIndia) January 29, 2023
ಯಾರೆಲ್ಲಾ ಪಾಲ್ಗೊಳ್ತಾರೆ?: ಡಿಎಂಕೆ, ಎನ್‌ಸಿಪಿ, ಜೆಡಿ(ಯು), ಆರ್‌ಜೆಡಿ, ಕೇರಳ ಕಾಂಗ್ರೆಸ್, ಸಿಪಿಐ(ಎಂ), ಸಿಪಿಐ, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಕೇರಳ ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ, ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ.
ರಾಹುಲ್ ಗಾಂಧಿ ಸಹೋದರಿ ಹಾಗು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಕಾಶ್ಮೀರದಲ್ಲಿ ಭದ್ರತಾ ಲೋಪ ಉಂಟಾಗಿತ್ತು. ಹೀಗಾಗಿ, ಶುಕ್ರವಾರವೇ ಯಾತ್ರೆ ರದ್ದಾಗಿತ್ತು. ನಂತರ ಅವಂತಿಪೋರಾದ ಚೆರ್ಸೂ ಗ್ರಾಮದಿಂದ ಅವರು ಯಾತ್ರೆ ಪುನರಾರಂಭಿಸಿದ್ದರು. ಆದರೆ ಪೊಲೀಸ್ ಅಧಿಕಾರಿಗಳು ಪ್ರತಿಕ್ರಿಯಿಸಿ, ಭದ್ರತಾ ಲೋಪದ ಕಾಂಗ್ರೆಸ್ ಆರೋಪವನ್ನು ತಳ್ಳಿ ಹಾಕಿದ್ದರು. ಕಾಶ್ಮೀರದಲ್ಲಿ ಭಾರತ್ ಜೋಡೋ ಯಾತ್ರೆಗೆ ಯಾವುದೇ ಭದ್ರತಾ ತೊಂದರೆ ಆಗಿಲ್ಲ ಎಂದು ಹೇಳಿದ್ದರು.
-
ऐ वतन, वतन मेरे
— Congress (@INCIndia) January 30, 2023 " class="align-text-top noRightClick twitterSection" data="
आबाद रहे तू
मैं जहाँ रहूँ
जहाँ में याद रहे तू#BharatJodoYatraFinale pic.twitter.com/OwQA41dPqz
">ऐ वतन, वतन मेरे
— Congress (@INCIndia) January 30, 2023
आबाद रहे तू
मैं जहाँ रहूँ
जहाँ में याद रहे तू#BharatJodoYatraFinale pic.twitter.com/OwQA41dPqzऐ वतन, वतन मेरे
— Congress (@INCIndia) January 30, 2023
आबाद रहे तू
मैं जहाँ रहूँ
जहाँ में याद रहे तू#BharatJodoYatraFinale pic.twitter.com/OwQA41dPqz
ಭಾರತ್ ಜೋಡೋ ಯಾತ್ರೆಯ ಅಂತಿಮ ರ್‍ಯಾಲಿ ಸೋನಾವರ್‌ನ ಶೇರ್-ಎ-ಕಾಶ್ಮೀರ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. 1983ರಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ವಿಶ್ವಕಪ್ ಜಯಿಸಿದ್ದು ಇದೇ ಮೈದಾನದಲ್ಲಿ. ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್ ಹಾಗೂ 2015ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರಾಜಕೀಯ ಕಾರ್ಯಕ್ರಮಗಳಿಗೂ ಕ್ರೀಡಾಂಗಣ ಆತಿಥ್ಯ ನೀಡಿತ್ತು.
-
लाल चौक पर तिरंगा लहराकर
— Rahul Gandhi (@RahulGandhi) January 29, 2023 " class="align-text-top noRightClick twitterSection" data="
भारत से किया वादा आज पूरा हुआ।🇮🇳
नफ़रत हारेगी, मोहब्बत हमेशा जीतेगी,
भारत में उम्मीदों का नया सवेरा होगा। pic.twitter.com/8B6vAk3aL6
">लाल चौक पर तिरंगा लहराकर
— Rahul Gandhi (@RahulGandhi) January 29, 2023
भारत से किया वादा आज पूरा हुआ।🇮🇳
नफ़रत हारेगी, मोहब्बत हमेशा जीतेगी,
भारत में उम्मीदों का नया सवेरा होगा। pic.twitter.com/8B6vAk3aL6लाल चौक पर तिरंगा लहराकर
— Rahul Gandhi (@RahulGandhi) January 29, 2023
भारत से किया वादा आज पूरा हुआ।🇮🇳
नफ़रत हारेगी, मोहब्बत हमेशा जीतेगी,
भारत में उम्मीदों का नया सवेरा होगा। pic.twitter.com/8B6vAk3aL6
ಇದನ್ನೂ ಓದಿ: "ನಿಲುಗಡೆಯಿಲ್ಲದ" ಮೆರವಣಿಗೆ..ಅಂತಿಮ ಘಟ್ಟದಲ್ಲಿ ಭಾರತ್ ಜೋಡೋ: ಇಲ್ಲಿದೆ ಫೋಟೋ