ಮುಂಬೈ( ಮಹಾರಾಷ್ಟ್ರ): ದಿವಂಗತ ಚಲನಚಿತ್ರ ನಿರ್ಮಾಪಕ ವಿಜಯ್ ಆನಂದ್ ಅವರ ಪತ್ನಿ ಸುಷ್ಮಾ ಆನಂದ್ ಅವರು ನಿನ್ನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪತಿ ವಿಜಯ್ ಆನಂದ್ ಅವರು 70 ನೇ ವಯಸ್ಸಿನಲ್ಲಿ 2004 ರಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು.
-
Sushma Vijay Anand wife of Late Vijay Anand's last journey starts at 11a.m.tommorrow for Santacruz west Crematorium pic.twitter.com/UEVo3kkqQD
— lipika varma (@LipikaV) August 27, 2023 " class="align-text-top noRightClick twitterSection" data="
">Sushma Vijay Anand wife of Late Vijay Anand's last journey starts at 11a.m.tommorrow for Santacruz west Crematorium pic.twitter.com/UEVo3kkqQD
— lipika varma (@LipikaV) August 27, 2023Sushma Vijay Anand wife of Late Vijay Anand's last journey starts at 11a.m.tommorrow for Santacruz west Crematorium pic.twitter.com/UEVo3kkqQD
— lipika varma (@LipikaV) August 27, 2023
ಮಾಧ್ಯಮಗಳ ವರದಿ ಪ್ರಕಾರ, ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಸುಷ್ಮಾ ಅವರು ತಮ್ಮ ಪತಿ ನಿಧನರಾದ 19 ವರ್ಷಗಳ ನಂತರ ಆಗಸ್ಟ್ 27 ರ ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಕೆಟ್ನಾವ್ ಸ್ಟುಡಿಯೋದ ಮ್ಯಾನೇಜರ್ ಕುಕ್ಕೊ ಶಿವಪುರಿ ನೀಡಿದ ಮಾಹಿತಿ ಪ್ರಕಾರ, " ಕುರ್ಚಿಯ ಮೇಲೆ ಕುಳಿತಿದ್ದಾಗ ಸುಷ್ಮಾ ಇದ್ದಕ್ಕಿದ್ದಂತೆ ಕೆಳಗೆ ಉರುಳಿ ಬಿದ್ದಿದ್ದಾರೆ. ನೆಲದ ಮೇಲೆ ಬಿದ್ದಿರುವುದನ್ನು ಕಂಡ ಕುಟುಂಬಸ್ಥರು ಕೂಡಲೇ ಸ್ಥಳಕ್ಕೆ ಆಗಮಿಸಿ, ಮೇಲಕ್ಕೆತ್ತಿದ್ದಾರೆ. ಬಳಿಕ ಸುಷ್ಮಾ ಆನಂದ್ ಕುಟುಂಬಸ್ಥರೊಂದಿಗೆ ಮಾತನಾಡಲು ಪ್ರಯತ್ನಿಸಿದ್ದಾರೆ, ಆದರೆ, ಅದು ಸಾಧ್ಯವಾಗಿಲ್ಲ ಹಾಗೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಕೂಡಲೇ ಸುಷ್ಮಾ ಅವರನ್ನು ಫ್ಯಾಮಿಲಿ ಡಾಕ್ಟರ್ ಆಗಮಿಸಿ ಪರೀಕ್ಷೆ ನಡೆಸುವಾಗ ಸಾವನ್ನಪ್ಪಿದ್ದಾರೆ " ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಸಾಹಿತ್ಯ ಅಕಾಡೆಮಿ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜಯಂತ ಮಹಾಪಾತ್ರ ನಿಧನ
ಸುಷ್ಮಾ ಅವರ ಮೃತದೇಹವನ್ನು ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಅಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಅವರ ಅಂತಿಮ ಕ್ರಿಯೆ ಇಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಅಂತಿಮ ವಿಧಿವಿಧಾನಗಳನ್ನು ಸಾಂತಾಕ್ರೂಜ್ (ಪಶ್ಚಿಮ) ಪೊಲೀಸ್ ಠಾಣೆ ಬಳಿಯ ಸ್ಮಶಾನದಲ್ಲಿ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಮೃತ ಸುಷ್ಮಾ ಅವರು ಒಬ್ಬ ಪುತ್ರ ಸೇರಿದಂತೆ ಪ್ರೀತಿ ಪಾತ್ರರು ಹಾಗೂ ಕುಟುಂಬಸ್ಥರನ್ನು ಬಿಟ್ಟು ಅಗಲಿದ್ದಾರೆ.
ಇದನ್ನೂ ಓದಿ : 100ಕ್ಕೂ ಹೆಚ್ಚು ಹಿಟ್ ಚಿತ್ರಗಳಿಗೆ ಹಾಡು ಬರೆದಿದ್ದ ಹಿರಿಯ ಸಾಹಿತಿ ದೇವ್ ಕೊಹ್ಲಿ ನಿಧನ
ವಿಜಯಾನಂದ ಅವರ ಬಗ್ಗೆ ಒಂದಿಷ್ಟು ಮಾಹಿತಿ: ಇನ್ನು ಚಿತ್ರ ನಿರ್ಮಾಪಕ ವಿಜಯ್ ಆನಂದ್ ಅವರನ್ನು ಗೋಲ್ಡಿ ಆನಂದ್ ಎಂದೂ ಕರೆಯಲಾಗುತ್ತದೆ. ಅವರು 'ಗೈಡ್', 'ತೀಸ್ರಿ ಮಂಜಿಲ್', 'ಜ್ಯುವೆಲ್ ಥೀಫ್', 'ಜಾನಿ ಮೇರಾ ನಾಮ್' ಮುಂತಾದ ಚಿತ್ರಗಳಲ್ಲಿ ಚಿತ್ರಕಥೆಗಾರ, ನಟ, ನಿರ್ಮಾಪಕ, ಚಲನಚಿತ್ರ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಇವರಿಗೆ ನಿರ್ಮಾಪಕ - ನಿರ್ದೇಶಕರಾದ ಚೇತನ್ ಆನಂದ್ ಮತ್ತು ಸದಾಬಹರ್ ದೇವ್ ಆನಂದ್ ಸಹೋದರರಾಗಿದ್ದಾರೆ ಎನ್ನುವುದು ವಿಶೇಷ.
1978 ರಲ್ಲಿ ರಾಮ್ ಬಲರಾಮ್ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ವಿಜಯ್ ಆನಂದ ಮತ್ತು ಸುಷ್ಮಾ ಮದುವೆ ಆಗಿದ್ದರು. ಅವರು ವೈಭವ್ ಆನಂದ್ ಎಂಬ ಮಗನಿಗೆ ಜನ್ಮ ನೀಡಿದ್ದರು.
ಇದನ್ನೂ ಓದಿ : ಮರಾಠಿ - ಹಿಂದಿ ಚಿತ್ರರಂಗದ ಹಿರಿಯ ನಟಿ ಸೀಮಾ ಡಿಯೋ ನಿಧನ