ETV Bharat / bharat

ವಿಘ್ನನಾಶಕ ಗಣಪತಿಯ ಪೂಜಿಸಿದ್ದಕ್ಕೆ ವಿಘ್ನ.. ಬಿಜೆಪಿ ಮುಸ್ಲಿಂ ನಾಯಕಿ ವಿರುದ್ಧ ಫತ್ವಾ - ಉತ್ತರಪ್ರದೇಶದ ಮುಸ್ಲಿಂ ಬಿಜೆಪಿ ನಾಯಕಿ

ಗಣೇಶನನ್ನು ಪೂಜಿಸಿದರೆ ಎಲ್ಲ ವಿಘ್ನಗಳು ಪರಿಹಾರವಾಗುತ್ತವೆ. ಉತ್ತರಪ್ರದೇಶದ ಮುಸ್ಲಿಂ ಬಿಜೆಪಿ ನಾಯಕಿಗೆ ಮಾತ್ರ ಈ ವಿಚಾರ ಉಲ್ಟಾ ಹೊಡೆದಿದೆ. ವಿನಾಯಕನ ಮೂರ್ತಿ ಪ್ರತಿಷ್ಠಾಪಿಸಿದ್ದಕ್ಕೆ ಮುಸ್ಲಿಂ ಧರ್ಮಗುರು ಅವರ ವಿರುದ್ಧ ಫತ್ವಾ ಹೊರಡಿಸಿದ್ದಾರೆ.

Etv Bharfatwa against bjp leader for worshipping lord ganeshat
ಬಿಜೆಪಿ ಮುಸ್ಲಿಂ ನಾಯಕಿ ವಿರುದ್ಧ ಫತ್ವಾ
author img

By

Published : Sep 3, 2022, 8:51 PM IST

ಅಲಿಗಢ(ಉತ್ತರಪ್ರದೇಶ): ಇಸ್ಲಾಂನಲ್ಲಿ ಮೂರ್ತಿ ಪೂಜೆ ನಿಷಿದ್ಧ. ಅಲ್ಲಾ ಹೊರತುಪಡಿಸಿ ಬೇರೆ ದೇವರಿಲ್ಲ. ಇತರ ದೇವರ ಮೂರ್ತಿ ಪೂಜೆ ಮಾಡಿದರೆ ಅವರು ಮುಸ್ಲಿಮರೇ ಅಲ್ಲ ಎಂಬ ಕಟ್ಟಳೆ ಇದೆ. ಆದರೆ, ಉತ್ತರಪ್ರದೇಶದ ಮುಸ್ಲಿಂ ಬಿಜೆಪಿ ನಾಯಕಿಯೊಬ್ಬರು ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ್ದು, ಅವರ ಸಮುದಾಯದಲ್ಲಿ ಭಾರಿ ಟೀಕೆಗೆ ಗುರಿಯಾಗಿದ್ದಾರೆ. ಇದಕ್ಕಾಗಿ ಅವರ ವಿರುದ್ಧ ಫತ್ವಾವನ್ನು ಹೊರಡಿಸಲಾಗಿದೆ.

ಉತ್ತರಪ್ರದೇಶದ ಅಲಿಗಢದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ವಿಭಾಗೀಯ ಉಪಾಧ್ಯಕ್ಷೆಯಾದ ರೂಬಿ ಖಾನ್​ ಗಣೇಶ ಪೂಜೆ ಮಾಡಿದವರು. ಗಣೇಶ ಚತುರ್ಥಿಯ ದಿನದಂದು ರೂಬಿ ಖಾನ್ ಅವರು ತಮ್ಮ ಮನೆಯಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಿಸಿದ್ದಾರೆ. ಇಸ್ಲಾಂ ಕಟ್ಟಳೆ ಮುರಿದ ಆರೋಪದ ಮೇಲೆ ರೂಬಿ ಖಾನ್ ಅವರ ವಿರುದ್ಧ ದಿಯೋಬಂದಿ ಧರ್ಮಗುರು ಫತ್ವಾ ಹೊರಡಿಸಿದ್ದಾರೆ.

ಗಣೇಶನನ್ನು ಹಿಂದೂಗಳು ಪೂಜಿಸುತ್ತಾರೆ. ಇಸ್ಲಾಂನಲ್ಲಿ ಮೂರ್ತಿ ಪೂಜೆ ಇಲ್ಲ. ಇಸ್ಲಾಂನಲ್ಲಿ ಅಲ್ಲಾನನ್ನು ಹೊರತುಪಡಿಸಿ ಯಾರನ್ನೂ ಪೂಜಿಸಲಾಗುವುದಿಲ್ಲ. ಇದನ್ನು ಮಾಡಿದವರು ಇಸ್ಲಾಂ ವಿರೋಧಿಗಳು ಮತ್ತು ಇದು ಇಸ್ಲಾಂ ವಿರೋಧಿ ಕೃತ್ಯವಾಗಿದೆ ಎಂದು ಧರ್ಮಗುರು ಮುಫ್ತಿ ಅರ್ಷದ್ ಫಾರೂಕಿ ಹೇಳಿದ್ದಾರೆ.

ಇದಕ್ಕೆ ಕಿಡಿಕಾರಿರುವ ರೂಬಿ ಖಾನ್​, ಸಮಾಜದಲ್ಲಿ ಧರ್ಮಗುರುಗಳು ಶಾಂತಿ ಬಿತ್ತಬೇಕು. ಇದನ್ನು ಬಿಟ್ಟು ಧರ್ಮಾಚರಣೆಯಲ್ಲಿ ಬೇಧ ಮಾಡಬಾರದು. ಗಣೇಶ ಪೂಜೆ ಮಾಡಿದ್ದಕ್ಕೆ ನಮ್ಮನ್ನು ಮುಸ್ಲಿಂ ವಿರೋಧಿ ಎಂದ ಮುಫ್ತಿಗಳು ಮತ್ತು ಮೌಲಾನಾಗಳು ಉಗ್ರಗಾಮಿಗಳು. ಅವರು ಜಿಹಾದಿ ಮನಸ್ಥಿತಿಯನ್ನು ಹೊಂದಿದ್ದಾರೆ. ಇವರೆಲ್ಲ ಧರ್ಮ ತಾರತಮ್ಯ ಅನುಸರಿಸುತ್ತಾರೆ. ಮುಫ್ತಿ ನಿಜವಾದ ಮುಸಲ್ಮಾನನಾಗಿದ್ದರೆ ಈ ರೀತಿ ಮಾತನಾಡುತ್ತಿರಲಿಲ್ಲ ಎಂದು ಕಟುವಾಗಿ ಟೀಕಿಸಿದ್ದಾರೆ.

ಓದಿ: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್​ ಜೈಲಿನಿಂದ ಬಿಡುಗಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.