ETV Bharat / bharat

ಹಣಕ್ಕಾಗಿ ಮಗಳನ್ನೇ ಮಾರಿದ ಪಾಪಿ ತಂದೆ.. ಬಾಲಕಿ ಖರೀದಿಸಿ ವೇಶ್ಯಾವಾಟಿಕೆಗೆ ತಳ್ಳಿದ್ದ ಸಂಬಂಧಿ!

ಹಣಕ್ಕಾಗಿ ತಂದೆಯೇ ಮಗಳನ್ನು 15 ಲಕ್ಷ ರೂಪಾಯಿಗೆ ಮಾರಿದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕಿಯನ್ನು ಖರೀದಿಸಿದ್ದ ವ್ಯಕ್ತಿಯೋರ್ವ ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳಿದ್ದ ಎಂಬುದನ್ನು ರಾಜಸ್ಥಾನ ಪೊಲೀಸರು ಬಯಲಿಗೆ ಎಳೆದಿದ್ದಾರೆ.

father-sold-minor-daughter-to-relative-for-rs-15-lakh-in-rajasthan
ತಂದೆಯಿಂದ 15 ಲಕ್ಷಕ್ಕೆ ಬಾಲಕಿಯ ಖರೀದಿಸಿ ವೇಶ್ಯಾವಾಟಿಕೆಗೆ ತಳ್ಳಿದ್ದ ಸಂಬಂಧಿ
author img

By

Published : Oct 29, 2022, 5:27 PM IST

ಬುಂಡಿ (ರಾಜಸ್ಥಾನ): ತಂದೆಯೋರ್ವ ಹಣಕ್ಕಾಗಿ ತನ್ನ ಅಪ್ರಾಪ್ತ ಮಗಳನ್ನೇ ಮಾರಾಟ ಮಾಡಿದ್ದು, ಆಕೆಯನ್ನು ಖರೀದಿಸಿದ್ದ ಸಂಬಂಧಿ ವೇಶ್ಯಾವಾಟಿಕೆಗೆ ತಳ್ಳಿದ್ದ ಆತಂಕಕಾರಿ ಪ್ರಕರಣ ರಾಜಸ್ಥಾನದ ಬುಂಡಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಆರೋಪಿ ತಂದೆ ಸೇರಿ ಇಬ್ಬರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಇಲ್ಲಿನ ದಬ್ಲಾನಾ ಪೊಲೀಸ್ ಠಾಣೆಯ ಗ್ರಾಮದ ನಿವಾಸಿಯಾದ 16 ವರ್ಷದ ಬಾಲಕಿಯನ್ನು ಆಕೆಯ ತಂದೆ ಇದೇ ವರ್ಷದ ಆರಂಭದಲ್ಲಿ ಸಂಬಂಧಿಕರೊಬ್ಬರಿಗೆ 15 ಲಕ್ಷ ರೂ.ಗೆ ಮಾರಾಟ ಮಾಡಿದ್ದ. ಈ ವಿಷಯ ಗೊತ್ತಿರದ ತಾಯಿಯು ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ಮೇ ತಿಂಗಳಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಈ ಪ್ರಕರಣದ ತನಿಖೆ ಆರಂಭಿಸಿದಾಗ ಬೆಚ್ಚಿಬೀಳುಸುವ ಅಂಶ ಬಯಲಾಗಿದೆ.

ಇದನ್ನೂ ಓದಿ: ತಂಗಿಗೆ ಕಿರುಕುಳ: ಪ್ರಶ್ನಿಸಿ ಕಪಾಳಮೋಕ್ಷ ಮಾಡಿದ್ದ ಅಣ್ಣನ ಕೊಲೆಗೈದ ಅಪ್ರಾಪ್ತರು

ತಂದೆಯಿಂದ ಮಗಳನ್ನು 15 ಲಕ್ಷ ರೂ.ಗೆ ಖರೀದಿ ಮಾಡಿದ್ದ ಸಂಬಂಧಿ ಆಕೆಯುನ್ನು ಮುಂಬೈನಲ್ಲಿ ವೇಶ್ಯಾವಾಟಿಕೆಗೆ ತಳ್ಳಿದ್ದ ಎಂಬುದನ್ನು ಪೊಲೀಸರು ಪತ್ತೆ ಹೆಚ್ಚಿಸಿದ್ದಾರೆ. ಅಂತೆಯೇ, ಸೆಪ್ಟೆಂಬರ್‌ನಲ್ಲಿ ಪೊಲೀಸರು ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ನಂತರ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ, ಬಾಲಕಿಯನ್ನು ಮಹಿಳಾ ಆಶ್ರಯ ಕೇಂದ್ರದಲ್ಲಿ ಇರಿಸಲಾಗಿದೆ.

ಅಲ್ಲದೇ, ಇದಾದ ಬಳಿಕ ಬಾಲಕಿಯನ್ನು ಆಪ್ತ ಸಮಾಲೋಚನೆಗೆ ಒಳಪಡಿಸಲಾಗಿದ್ದು, ಆಗ ಆಕೆ ತನ್ನನ್ನು ವೇಶ್ಯಾವಾಟಿಕೆಗೆ ದೂಡಲು ತಂದೆಯೇ 15 ಲಕ್ಷ ರೂ.ಗೆ ಮಾರಾಟ ಮಾಡಿದ್ದ ಎಂಬುದನ್ನು ಬಹಿರಂಗಪಡಿಸಿದ್ದಾಳೆ. ಆದ್ದರಿಂದ ಪೊಲೀಸರು ತಂದೆ ಮತ್ತು ಬಾಲಕಿಯನ್ನು ಖರೀದಿಸಿ ವೇಶ್ಯಾವಾಟಿಕೆಗೆ ತಳ್ಳಿದ್ದ ಆರೋಪಿ ಸಂಬಂಧಿಕನನ್ನು ಬಂಧಿಸಿದ್ದಾರೆ. ಸದ್ಯ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಸಾಲ ತೀರಿಸಲು ಬಾಲಕಿಯರ ಹರಾಜು, ತಾಯಂದಿರ ಮೇಲೆ ಅತ್ಯಾಚಾರ: ಇದು ಜಾತಿ ಪಂಚಾಯತ್​ಗಳ ವಿಕೃತಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.