ETV Bharat / bharat

ಹೆಣ್ಣು ಮಗುವನ್ನು ನೆಲಕ್ಕೆ ಅಪ್ಪಳಿಸಿ ಕೊಲೆ ಮಾಡಿದ ತಂದೆ: ಬಳಿಕ ಆತ್ಮಹತ್ಯೆ! - ಮಗಳ ಕೊಲೆ ಮಾಡಿದ ತಂದೆ

ಹೆಂಡತಿಗೆ ಹೊಡೆದು, ಮೂರು ವರ್ಷದ ಮಗಳನ್ನು ನೆಲಕ್ಕೆ ಹೊಡೆದು ಕೊಲೆಗೈದ ಪಾಪಿ ತಂದೆ ಇಂದು ನೇಣಿಗೆ ಶರಣಾಗಿದ್ದಾನೆ.

ಬಿಹಾರ: ಹೆಣ್ಣು ಮಗುವನ್ನು ಕೊಲೆಗೈದು ತಂದೆ ಆತ್ಮಹತ್ಯೆ
father committed suicide after killing his daughter in bihar
author img

By

Published : Jul 23, 2022, 7:23 PM IST

ಶೇಖ್‌ಪುರ (ಬಿಹಾರ): ಶೇಖ್‌ಪುರದ ಮಸೋಧ ಗ್ರಾಮದಲ್ಲಿ ಹೃದಯ ವಿದ್ರಾವಕ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಗುವನ್ನು ಕೊಲೆ ಮಾಡಿದ ತಂದೆಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮಸೋಧ ಗ್ರಾಮದ ಅನಿಲ್ ಚೌಧರಿ ಅವರ ಪುತ್ರ ಉಮೇಶ್ ಚೌಧರಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ರಾತ್ರಿ ಹೆಂಡತಿಯೊಂದಿಗೆ ಕ್ರೂರವಾಗಿ ವರ್ತಿಸಿ ಥಳಿಸಿದ್ದ ಎನ್ನಲಾಗಿದೆ. ಪತ್ನಿ ಮನೆಯಿಂದ ಹೊರಗೆ ಓಡಿ ಹೋಗಿದ್ದು, ತನ್ನ ಮಗುವನ್ನು ಕರೆದೊಯ್ಯಲು ಸಾಧ್ಯವಾಗಿಲ್ಲ. ಕೋಪದ ಬರದಲ್ಲಿ ತನ್ನ ಮೂರು ವರ್ಷದ ಮಗಳನ್ನು ನೆಲಕ್ಕೆ ಎಸೆದು ಬರ್ಬರವಾಗಿ ಕೊಲೆ ಮಾಡಿದ್ದಾನೆ ಎನ್ನುವ ಆರೋಪವಿದೆ.

ಇದನ್ನೂ ಓದಿ: 500 ರೂ.ಗಾಗಿ ವ್ಯಕ್ತಿಯ ಕತ್ತು ಸೀಳಿ ಕೊಲೆ: ರೌಡಿಶೀಟರ್​ ಸೇರಿ ಇಬ್ಬರಿಂದ ಕೃತ್ಯ

ಘಟನೆಯ ನಂತರ ಉಮೇಶ್ ಚೌಧರಿ ಮನೆಯಿಂದ ತಲೆಮರೆಸಿಕೊಂಡಿದ್ದ. ಇಂದು ಬೆಳಗ್ಗೆ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಸದ್ಯ ಕಾಸರ್ ಒಪಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.