ಕಣ್ಣೂರು(ಕೇರಳ): 38 ವರ್ಷದ ವ್ಯಕ್ತಿಯೋರ್ವ ಏಳು ತಿಂಗಳ ಮಗುವನ್ನು ಕೊಲೆಗೈದು, ಕಟ್ಟಿಕೊಂಡ ಹೆಂಡತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಕೊನೆಗೂ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೇರಳದ ಕಣ್ಣೂರಿನಲ್ಲಿ ನಿನ್ನೆ ಬೆಳಗ್ಗೆ ಈ ಘಟನೆ ನಡೆದಿದೆ.
ಗಂಡನಿಂದ ತೀವ್ರ ಸ್ವರೂಪದ ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡಿರುವ ಪತ್ನಿ ಅಂಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯಸ್ಥಿತಿ ಗಂಭೀರವಾಗಿದೆ.
ಯಾವ ಕಾರಣಕ್ಕಾಗಿ ಈ ಘಟನೆ ನಡೆಯಿತು ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ಪತಿ ಸತೀಶ್ ಅಡುಗೆ ಮನೆ ಚಾಕು ಬಳಸಿ ಮಗುವನ್ನು ಗಾಯಗೊಳಿಸಿದ್ದು, ಸ್ಥಳದಲ್ಲೇ ಸಾವನ್ನಪ್ಪಿದೆ. ಇದಾದ ಬಳಿಕ ಹೆಂಡತಿ ಮೇಲೂ ಹಲ್ಲೆ ಮಾಡಿದ್ದಾನೆ. ಇದರ ಬೆನ್ನಲ್ಲೇ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇದನ್ನೂ ಓದಿ: ಬ್ಯಾಟಿಂಗ್‌ನಲ್ಲಿ ಕೆಕೆಆರ್ ವೆಂಕಿ ಬೆಂಕಿ: ಇರ್ಫಾನ್, ಹೇಡನ್ ಹೇಳಿದ್ದೇನು?
ಇದನ್ನು ನೋಡಿರುವ ಸತೀಶ್ ತಾಯಿ ದೇವಕಿ, ಕೂಗಿಕೊಂಡಿದ್ದು ಸ್ಥಳೀಯರು ಸ್ಥಳಕ್ಕಾಗಮಿಸಿದ್ದಾರೆ. ಗಾಯಗೊಂಡಿರುವ ಮಗು ಹಾಗು ಪತ್ನಿ ಹಾಗು ಪತಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸುವ ಕೆಲಸ ನಡೆದಿದೆ. ಆದರೆ ಅತಿಯಾದ ರಸ್ತಸ್ರಾವದಿಂದ ಆಸ್ಪತ್ರೆ ತಲುಪುವ ಮೊದಲೇ ಸತೀಶ್ ಹಾಗೂ ಮಗು ಸಾವನ್ನಪ್ಪಿದೆ. ಸದ್ಯ ಅಂಜು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಣ್ಣೂರು ನಗರ ಪೊಲೀಸ್ ಆಯುಕ್ತ ಆರ್.ಇಳಂಗೋ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.