ರಾಯಗಡ(ಒಡಿಶಾ): ಸುಮಾರು ಅರ್ಧ ಕಿಲೋಮೀಟರ್ ವರೆಗೆ 9 ವರ್ಷದ ಬಾಲಕನ ಶವವನ್ನು ಆತನ ತಂದೆ ತನ್ನ ಹೆಗಲ ಮೇಲೆ ಹೊತ್ತುಕೊಂಡು ಸಾಗಿದ ಹೃದಯವಿದ್ರಾವಕ ಘಟನೆ ನಗರದಲ್ಲಿ ಸಂಚಲನ ಮೂಡಿಸಿದೆ.
ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಡಾ.ಲಾಲಮೋಹನ ರಾವುತರಾಯ್ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ರಾಯಗಡ ಜಿಲ್ಲಾ ಕೇಂದ್ರ ಉಪವಿಭಾಗದ ಹರಿಜನ ಸಾಹಿಯಲ್ಲಿ ಈ ಘಟನೆ ಜರುಗಿದೆ. ಮೃತನನ್ನು 9 ವರ್ಷದ ಆಕಾಶ್ ಬೇನಿಯಾ ಎಂದು ಗುರುತಿಸಲಾಗಿದೆ. ಈತನ ತಂದೆ ಸುರ್ಧರ್ ಬೇನಿಯಾ ಅವರು ಹೆಗಲ ಮೇಲೆ ಮಗನ ಪಾರ್ಥಿವ ಶರೀರವನ್ನು ಹೊತ್ತು ಸಾಗಿದ್ದಾರೆ.
ಬಾಲಕ ಭಾನುವಾರ ರಾತ್ರಿಯೇ ಮೃತಪಟ್ಟಿದ್ದಾನಂತೆ. ಆದರೆ ಹುಷಾರಿಲ್ಲ ಎಂದು ತಿಳಿದು ಸುರ್ಧರ್ ಮತ್ತು ಅವರ ಕುಟುಂಬದವರು ಆಕಾಶ್ ನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದರು. ಆಗ ಆಕಾಶ್ ಈ ಮೊದಲೇ ಆತ ಮೃತಪಟ್ಟಿದ್ದಾನೆ ಎಂದು ತಪಾಸಣೆ ನಡೆಸಿದ ಡಾ.ರಾಜೇಂದ್ರ ಸೊರೆನ್ ಹೇಳಿದ್ದಾರೆ.
ಇದನ್ನೂ ಓದಿ: ಬಿಬಿಎಂಪಿ ಕಸದ ಲಾರಿ ಹರಿದು ಬಾಲಕಿ ಸಾವು.. 6ಕ್ಕೂ ಅಧಿಕ ಮಂದಿಗೆ ಗಾಯ
ಬಹಳ ಸಮಯ ಆದ್ದರಿಂದ ಮಗನ ಅಂತಿಮ ಸಂಸ್ಕಾರ ನೆರವೇರಿಸಲು ಬೇರೆ ಮಾರ್ಗ ಹೊಳೆಯದೆ ಹೆಗಲ ಮೇಲೆ ಹೊತ್ತು ಸಾಗಿಸಿ, ಅಂತಿಮ ವಿಧಿವಿಧಾನ ನೆರವೇರಿಸಿದ್ದಾರೆ ಎಂದು ತಿಳಿದುಬಂದಿದೆ.