ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಫಾರೂಕ್ ಅಬ್ದುಲ್ಲಾ ಭಾಗಿಯಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಇಂದು ಕಾಂಗ್ರೆಸ್ ಪಾದಯಾತ್ರೆಯನ್ನು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಅಬ್ದುಲ್ಲಾ ಕೂಡಿಕೊಂಡಿದ್ದಾರೆ.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ. ಡಿ.24ರಂದು ರಾಷ್ಟ್ರ ರಾಜಧಾನಿ ದೆಹಲಿಯನ್ನು ಈ ಯಾತ್ರೆ ತಲುಪಿತ್ತು. ಅಂದಿನಿಂದ 9 ದಿನಗಳ ಕಾಲ ಯಾತ್ರೆಗೆ ವಿರಾಮ ಇತ್ತು. ಇಂದಿನಿಂದ ಮತ್ತೆ ಭಾರತ್ ಜೋಡೋ ಯಾತ್ರೆ ಆರಂಭವಾಗಿದ್ದು, ದೆಹಲಿ ಮೂಲಕ ಉತ್ತರ ಪ್ರದೇಶವನ್ನು ಪ್ರವೇಶಿಸಿದೆ. ಇಲ್ಲಿ ಫಾರೂಕ್ ಅಬ್ದುಲ್ಲಾ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಭಾರತ್ ಜೋಡೋ ಯಾತ್ರೆಗೆ ಬಂದ ಅಬ್ದುಲ್ಲಾ ಅವರನ್ನು ರಾಹುಲ್ ಗಾಂಧಿ ತಬ್ಬಿಕೊಳ್ಳುವ ಮೂಲಕ ಸ್ವಾಗತಿಸಿದ್ದಾರೆ. ಈ ವೇಳೆ ಪ್ರಿಯಾಂಕಾ ಗಾಂಧಿ ವಾದ್ರಾ ಸಹ ಇದ್ದರು.
-
National Conference leader Farooq Abdullah joined the 'Bharat Jodo Yatra' in Uttar Pradesh.
— ANI (@ANI) January 3, 2023 " class="align-text-top noRightClick twitterSection" data="
(Pic Source: AICC) pic.twitter.com/b1GisEdrch
">National Conference leader Farooq Abdullah joined the 'Bharat Jodo Yatra' in Uttar Pradesh.
— ANI (@ANI) January 3, 2023
(Pic Source: AICC) pic.twitter.com/b1GisEdrchNational Conference leader Farooq Abdullah joined the 'Bharat Jodo Yatra' in Uttar Pradesh.
— ANI (@ANI) January 3, 2023
(Pic Source: AICC) pic.twitter.com/b1GisEdrch
ಇದನ್ನೂ ಓದಿ: ಬಿಜೆಪಿಯನ್ನು ನನ್ನ ಗುರು ಎಂದು ಪರಿಗಣಿಸಿರುವೆ: ರಾಹುಲ್ ಗಾಂಧಿ
ಕಾಂಗ್ರೆಸ್‌ಗೆ ಮತ್ತೊಂದು ಶುಭ ಸುದ್ದಿ: ಉತ್ತರ ಪ್ರದೇಶದಿಂದಲೇ ಕಾಂಗ್ರೆಸ್‌ಗೆ ಶುಭ ಸುದ್ದಿ ಬಂದಿದೆ. ಈ ಹಿಂದೆ ಭಾರತ್ ಜೋಡೋ ಯಾತ್ರೆಯಿಂದ ದೂರ ಉಳಿದಿದ್ದ ಉತ್ತರ ಪ್ರದೇಶದ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಈಗ ಬಾಗ್‌ಪತ್ ಮತ್ತು ಶಾಮ್ಲಿಯಲ್ಲಿ ಯಾತ್ರೆಯನ್ನು ಸ್ವಾಗತಿಸುವುದಾಗಿ ಹೇಳಿದೆ. ಈ ಬಗ್ಗೆ ಪಕ್ಷದ ವಕ್ತಾರ ಅನಿಲ್ ದುಬೆ ಮಾಹಿತಿ ನೀಡಿದ್ದಾರೆ.
ಅಲ್ಲದೇ, ಆರ್‌ಎಲ್‌ಡಿ ಅಧ್ಯಕ್ಷ ಜಯಂತ್ ಚೌಧರಿ, ಭಾರತ್ ಜೋಡೋ ಯಾತ್ರೆ ಯಾತ್ರಿಗಳಿಗೆ ನಮಸ್ಕಾರ. ಈ ಅಭಿಯಾನವು ತನ್ನ ಗುರಿಗಳನ್ನು ಅರಿತುಕೊಳ್ಳುತ್ತದೆ ಮತ್ತು ಜನರನ್ನು ಒಟ್ಟಿಗೆ ಸೇರಿಸುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಟ್ವೀಟ್ ಮಾಡಿ ಹೇಳಿದ್ದರು.
ಇದನ್ನೂ ಓದಿ: ಭಾರತ್ ಜೋಡೋ ಬಳಿಕ ಹಾಥ್ ಸೇ ಹಾಥ್ ಜೋಡೋ ಅಭಿಯಾನ: ಪ್ರಿಯಾಂಕಾ ಗಾಂಧಿ ನೇತೃತ್ವ
ಇದು ಇಂದಿನ ಮತ್ತೊಂದು ಪ್ರಮುಖ ಬೆಳವಣಿಗೆಯಾಗಿದೆ. ಇತ್ತ, ಉತ್ತರ ಪ್ರದೇಶದ ಎಲ್ಲ ವಿರೋಧ ಪಕ್ಷಗಳು ಪಾದಯಾತ್ರೆಯಲ್ಲಿ ಭಾಗವಹಿಸುವುದರಿಂದ ದೂರ ಉಳಿಯುವುದಾಗಿ ಹೇಳಿವೆ. ಎಸ್‌ಪಿ ಮತ್ತು ಬಿಎಸ್‌ಪಿ ರಾಹುಲ್ ಗಾಂಧಿ ಮತ್ತು ಅವರ ಯಾತ್ರೆಗೆ ಶುಭ ಹಾರೈಸಿವೆ. ಆದರೆ, ಭಾಗಿಯಾಗುವ ಬಗ್ಗೆ ಯಾವುದೇ ನಿರ್ಧಾರವನ್ನು ಪ್ರಕಟಿಸಿಲ್ಲ.
ರಾಮ ಮಂದಿರ ಅರ್ಚಕರ ಹಾರೈಕೆ: ಈ ಮೊದಲು ಭಾರತ್ ಜೋಡೋ ಯಾತ್ರೆಯನ್ನು ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಸ್ವಾಗತಿಸಿದ್ದರು. ಅಲ್ಲದೇ, ರಾಹುಲ್ ಗಾಂಧಿಗೆ ಪತ್ರ ಬರೆದು, ಶ್ರೀರಾಮನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಎಂದು ಅವರು ಹಾರೈಸಿದ್ದರು.
'ನೀವು ದೇಶಕ್ಕಾಗಿ ಮಾಡುವ ಕೆಲಸ ಎಲ್ಲರಿಗೂ ಪ್ರಯೋಜನಕಾರಿ. ನಿಮ್ಮ ದೀರ್ಘಾಯುಷ್ಯಕ್ಕಾಗಿ ಸದಾ ಪ್ರಾರ್ಥಿಸುತ್ತೇನೆ. ನೀವು ಮಾಡುತ್ತಿರುವ ಕೆಲಸಗಳು ಯಶಸ್ವಿಯಾಗಲಿ. ಶ್ರೀರಾಮನ ಆಶೀರ್ವಾದ ನಿಮ್ಮ ಮೇಲಿರಲಿ ಎಂದು ದಾಸ್ ತಮ್ಮ ಪತ್ರದ ಮೂಲಕ ತಿಳಿಸಿದ್ದರು.
ಇನ್ನು, ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಿಂದ ಪ್ರಾರಂಭಗೊಂಡ ಭಾರತ್ ಜೋಡೋ ಯಾತ್ರೆಯು ಇದುವರೆಗೆ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣದಲ್ಲಿ ಮುಕ್ತಾಯವಾಗಿದೆ. ಇಂದು ದೆಹಲಿಯನ್ನು ಹಾದು ಉತ್ತರಪ್ರದೇಶಕ್ಕೆ ಪ್ರವೇಶ ಪಡೆದಿದ್ದು, ಫೆಬ್ರವರಿ ಆರಂಭದಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ತಲುಪಲಿದೆ.
ಈ ಭಾರತ್ ಜೋಡೋ ಯಾತ್ರೆಯು ದೇಶದ ಇತಿಹಾಸದಲ್ಲಿಯೇ ಅತಿ ಉದ್ದದ ಯಾತ್ರೆಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ಜೊತೆಗೆ ಈ ಯಾತ್ರೆ ಪೂರ್ಣಗೊಳಿಸಿದ ಬಳಿಕ ಯಾತ್ರೆಯ ಸಂದೇಶವನ್ನು ದೇಶಾದ್ಯಂತ ಸಾರಲು ಹಾಥ್ ಸೇ ಹಾಥ್ ಜೋಡೋ ಅಭಿಯಾನ ಪ್ರಾರಂಭಿಸಲು ಸಹ ಕಾಂಗ್ರೆಸ್ ಸಜ್ಜಾಗಿದೆ.
ಇದನ್ನೂ ಓದಿ: 'ರಾಮನ ಆಶೀರ್ವಾದ ನಿಮ್ಮೊಂದಿಗಿರಲಿ..': ರಾಹುಲ್ ಯಾತ್ರೆಗೆ ಶುಭ ಕೋರಿದ ರಾಮಮಂದಿರ ಮುಖ್ಯ ಅರ್ಚಕ